ಮೋದಿಜಿ, ನಮಗೆ ನಿಮ್ಮ ರಾಷ್ಟ್ರೀಯತೆ ಪಾಠ ಬೇಕಾಗಿಲ್ಲ, ರಫೇಲ್ ಬಗ್ಗೆ ತಿಳಿಸಿ-ರಾಹುಲ್ ಗಾಂಧಿ
ಛತ್ತೀಸ್ ಗಡ್ ನಲ್ಲಿ ನಡೆದ ಚುನಾವಣಾ ರ್ಯಾಲಿವೊಂದರಲ್ಲಿ ಭಾಗವಹಿಸಿ ಮೋದಿ ಸರ್ಕಾರ ವಿರುದ್ದ ಟೀಕಾ ಪ್ರಹಾರ ನಡೆಸಿದ ಕಾಂಗ್ರೆಸ್ ಮುಖಸ್ಥ ರಾಹುಲ್ ಗಾಂಧೀ ` ಮೋದಿಜಿ ,ನಮಗೆ ನಿಮ್ಮ ರಾಷ್ಟ್ರೀಯತೆ ಪಾಠ ಬೇಕಾಗಿಲ್ಲ,ರಫೇಲ್ ಹಗರಣದ ಬಗ್ಗೆ ತಿಳಿಸಿ ಎಂದು ಕಿಡಿಕಾರಿದರು.
ನವದೆಹಲಿ: ಛತ್ತೀಸ್ ಗಡ್ ನಲ್ಲಿ ನಡೆದ ಚುನಾವಣಾ ರ್ಯಾಲಿವೊಂದರಲ್ಲಿ ಭಾಗವಹಿಸಿ ಮೋದಿ ಸರ್ಕಾರ ವಿರುದ್ದ ಟೀಕಾ ಪ್ರಹಾರ ನಡೆಸಿದ ಕಾಂಗ್ರೆಸ್ ಮುಖಸ್ಥ ರಾಹುಲ್ ಗಾಂಧೀ " ಮೋದಿಜಿ ,ನಮಗೆ ನಿಮ್ಮ ರಾಷ್ಟ್ರೀಯತೆ ಪಾಠ ಬೇಕಾಗಿಲ್ಲ,ರಫೇಲ್ ಹಗರಣದ ಬಗ್ಗೆ ತಿಳಿಸಿ ಎಂದು ಕಿಡಿಕಾರಿದರು.
ಶನಿವಾರದಂದು ಮೊದಲ ಹಂತದ ಕೊನೆಯ ದಿನದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ "ಕಾಂಗ್ರೆಸ್ ಕಾರ್ಯಕರ್ತರು ಈ ದೇಶಕ್ಕೆ ನಿಜವಾದ ಪ್ರಾಣಾರ್ಪಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ನಗರ ಮಾವೋವಾದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ" ನೀವು ಪ್ರಧಾನಮಂತ್ರಿಗಳು, ನಾವು ನಿಮ್ಮನ್ನು ಗೌರವಿಸುತ್ತೇವೆ,ಆದರೆ ನೀವು ನಮ್ಮ ಜನರನ್ನು ಅಗೌರವದಿಂದ ಕಾಣಬೇಡಿ, ಅದು ನಮ್ಮ ಪ್ರದೇಶ ಕಾಂಗ್ರೆಸ್ ನ ಮುಖ್ಯಸ್ಥರಾಗಿರಬಹುದು, ನಮ್ಮ ಹುತಾತ್ಮರಾಗಿರಬಹುದು,ನೀವು ಕಾಂಗ್ರೆಸ್ ಕಾರ್ಯಕರ್ತರನ್ನು ಅವಮಾನಿಸುವ ಹಾಗಿಲ್ಲ ಎಂದರು.ಮಾವೋವಾದಿಗಳ ದಾಳಿಯಿಂದಾಗಿ 2013ರಲ್ಲಿ 27 ಜನರು ಸಾವನ್ನಪ್ಪಿದ್ದರು ಇದರಲ್ಲಿ ಕಾಂಗ್ರೆಸ್ ನಾಯಕರುಗಳಾದ ನಂದ ಕುಮಾರ್ ಪಟೇಲ್ ಮತ್ತು ಮಹೇಂದ್ರ ಕರ್ಮಾ ಅವರು ಸಹ ಮೃತಪಟ್ಟಿದ್ದರು.
ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್ ಗಾಂಧೀ " ನಮಗೆ ರಾಷ್ಟ್ರೀಯತೆ ಬಗ್ಗೆ ಪಾಠ ಮಾಡಬೇಡಿ. ನಮ್ಮ ಪಕ್ಷ ಹಲವಾರು ಹುತಾತ್ಮರ ಪಟ್ಟಿಯನ್ನು ಹೊಂದಿದೆ.ನಮ್ಮ ನಾಯಕರು ಬ್ರಿಟಿಶ್ ರ ವಿರುದ್ದ ಹೋರಾಡುವ ಸಂದರ್ಭದಲ್ಲಿ 15-20 ವರ್ಷಗಳ ಕಾಲ ಸೇರೆಮನೆಯಲ್ಲಿದ್ದರು,ಆದರೆ ನಿಮ್ಮ ಸಾವರ್ಕರರವರು ಬ್ರಿಟಿಶ್ ರಿಗೆ ಕ್ಷಮಾಪಣೆ ಮುಂದಾಗಿದ್ದರು.ಆದ್ದರಿಂದ ನಮಗೆ ರಾಷ್ಟ್ರೀಯತೆ ಬಗ್ಗೆ ಪಾಠ ಮಾಡಬೇಡಿ ಬದಲಾಗಿ ರಫೇಲ್ ಬಗ್ಗೆ ತಿಳಿಸಿ ಎಂದು ರಾಹುಲ್ ಹೇಳಿದರು.