ಕೇಂದ್ರ ಸಚಿವ ಸಂಪುಟ ಪುನರ್ ರಚನೆ
ಇನ್ನೆರಡು ದಿನಗಳಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ದೊಡ್ಡ ಮಟ್ಟದ ಪುನರ್ ರಚನೆಯಾಗಲಿದೆ. ಇದರಲ್ಲಿ ಹಲವಾರು ಸಚಿವರಿಗೆ ಕೋಕ್ ಸಿಗಲಿದ್ದು, ಇನ್ನೂ ಕೆಲವರು ಹೊಸದಾಗಿ ಸಂಪುಟ ಸೇರಲಿದ್ದಾರೆ. ಮುಂದಿನ ಚುನಾವಣೆಗಳ ದೃಷ್ಟಿಯಿಂದ ಈ ಪುನರ್ ರಚನೆ ಮಹತ್ವಪೂರ್ಣದ್ದಾಗಿದೆ.
ನವದೆಹಲಿ: ಇನ್ನೆರಡು ದಿನಗಳಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ದೊಡ್ಡ ಮಟ್ಟದ ಪುನರ್ ರಚನೆಯಾಗಲಿದೆ. ಇದರಲ್ಲಿ ಹಲವಾರು ಸಚಿವರಿಗೆ ಕೋಕ್ ಸಿಗಲಿದ್ದು, ಇನ್ನೂ ಕೆಲವರು ಹೊಸದಾಗಿ ಸಂಪುಟ ಸೇರಲಿದ್ದಾರೆ. ಮುಂದಿನ ಚುನಾವಣೆಗಳ ದೃಷ್ಟಿಯಿಂದ ಈ ಪುನರ್ ರಚನೆ ಮಹತ್ವಪೂರ್ಣದ್ದಾಗಿದೆ.
2018 ರಲ್ಲಿ ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿರುವುದರಿಂದ ಕರ್ನಾಟಕಕ್ಕೇ ಹೆಚ್ಚು ಮಹತ್ವ ದೊರೆಯುವ ನಿರೀಕ್ಷೆ ಇದೆ. ಸಂಸದರಾದ ಸುರೇಶ್ ಅಂಗಡಿ, ಶೋಭಾ, ಶ್ರೀರಾಮುಲು ಹೆಸರುಗಳು ಈಗಾಲಲೇ ಬಿಸಿ-ಬಿಸಿ ಚರ್ಚೆಯಾಗುತ್ತಿವೆ.
ರಾಜ್ಯದಿಂದ ಇಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಬ್ಬರಿಗೆ ಮಣೆ ಹಾಕಲಾಗುತ್ತಿದೆ.
ಪ್ರಸ್ತುತ ಕೇಂದ್ರ ಸಚಿವರಾದ ಸದಾನಂದಗೌಡರಿಗೆ ಉತ್ತಮ ಖಾತೆ ನೀಡುವ ಸಾಧ್ಯತೆ ದಟ್ಟವಾಗಿದೆ. ನಿತಿನ್ ಗಡ್ಕರಿಗೆ ರೈಲ್ವೆ ಖಾತೆ ನೀಡುವ ಸಂಭವವಿದ್ದು ಸುರೇಶ್ ಪ್ರಭು ಅವರಿಗೆ ಬೇರೆ ಖಾತೆ ನೀಡುವ ಸಾಧ್ಯತೆ ಕಂಡುಬಂದಿದೆ.
ಇನ್ನು ಅರುಣ್ ಜೈಟ್ಲಿ ರಕ್ಷಣಾ ಸಚಿವರಾಗಿ ಮುಂದುವರೆಯಲಿದ್ದು, ಪಿಯೂಷ್ ಗೋಯಲ್ ಗೆ ಹಣಕಾಸು ಖಾತೆ ಸಿಗುವ ಸಂಭವವಿದೆ. ಧರ್ಮೇಂದ್ರ ಪ್ರಧಾನ್ ಗೆ ಕ್ಯಾಬಿನೆಟ್ ದರ್ಜೆಗೆ ಭಡ್ತಿ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ಖಚಿತ ಪಡಿಸಿವೆ.