ನವದೆಹಲಿ:  ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಮತ್ತು ಹಮಿದ್ ಅನ್ಸಾರಿಯವರ ಕುರಿತಾದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷಗಳು ಕ್ಷಮೆ ಕೋರಿ ಒತ್ತಾಯಿಸಿವೆ. 


COMMERCIAL BREAK
SCROLL TO CONTINUE READING

ಮೋದಿಯವರು ಚುನಾವಣಾ ಪ್ರಚಾರದ ಭಾಷಣದ ಸಂದರ್ಭದಲ್ಲಿ  ಮನಮೋಹನ್ ಸಿಂಗ್, ಹಮಿದ್ ಅನ್ಸಾರಿ ಮತ್ತು ಅಯ್ಯರ್ರೆಲ್ಲರೂ ಪಾಕಿಸ್ತಾನದ ಜೊತೆ ಸೇರಿ ತಮ್ಮನ್ನು ಸೋಲಿಸುವ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.


ಸಂಸತ್ತು ಅಧಿವೇಶನದಲ್ಲಿ ಈ ಹೇಳಿಕೆಗೆ ಮೋದಿಯವರು ಕ್ಷಮೆ ಕೇಳಬೇಕು ಎಂದು ವಿರೋಧ ಪಕ್ಷದ ಸಂಸದರು ಸಭಾತ್ಯಾಗ ಮಾಡಿದ್ದರು. ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಮೋದಿಯವರ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಪ್ರಧಾನಿಗಳು ಮನಮೋಹನ್ ಸಿಂಗ್ ಅಥವಾ ಹಮೀದ್ ಅನ್ಸಾರಿಯವರ ರಾಷ್ಟ್ರದ ಕುರಿತಾದ ಬದ್ದತೆಯನ್ನು ಪ್ರಶ್ನಿಸಿಲ್ಲ ಈ ಎಲ್ಲ ನಾಯಕರನ್ನು ನಾವು ಗೌರವಯುತವಾಗಿ ಕಂಡಿದ್ದೇವೆ ಎಂದು ರಾಜ್ಯಸಭೆಯಲ್ಲಿ ತಿಳಿಸಿದರು.


ಮನಮೋಹನ್ ಸಿಂಗ್ ರವರು ಸಹಿತ ಚುನಾವಣೆಯ ಪ್ರಚಾರದ ಸಂದರ್ಭಲ್ಲಿನ ಮೋದಿಯವರ ಹೇಳಿಕೆಯನ್ನು ಅಲ್ಲಗಳೆದು ಈ ಹೇಳಿಕೆಗೆ ಮೋದಿಯವರು  ದೇಶದ ಕ್ಷಮೆ ಕೇಳಬೇಕು ಆ ಮೂಲಕ ಪ್ರಧಾನಿ ಹುದ್ದೆಯ ಗಣತೆಯನ್ನು ಕಾಪಾಡಬೇಕು ಎಂದು ಈ ಹಿಂದೆ ಹೇಳಿದ್ದನ್ನು ನಾವು ಗಮನಿಸಬಹುದು.