ಕಾಂಗ್ರೆಸ್ ನಿಂದಾಗಿಯೇ ಪ್ರಧಾನಿ ಮೋದಿ ಶಕ್ತಿಶಾಲಿಯಾಗಿರುವುದು-ಮಮತಾ ಬ್ಯಾನರ್ಜೀ
ಪ್ರಧಾನಿ ಮೋದಿ ಪ್ರಬಲವಾಗುತ್ತಿರುವುದು ಕಾಂಗ್ರೆಸ್ ನಿಂದಾಗಿ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜೀ ಕಿಡಿ ಕಾರಿದ್ದಾರೆ.
ನವದೆಹಲಿ: ಪ್ರಧಾನಿ ಮೋದಿ ಪ್ರಬಲವಾಗುತ್ತಿರುವುದು ಕಾಂಗ್ರೆಸ್ ನಿಂದಾಗಿ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜೀ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಪಕ್ಷವು ಪ್ರಾದೇಶಿಕ ಪಕ್ಷಗಳ ಒಂದೂಗೂಡಿಸುವ ಅಗತ್ಯವನ್ನು ಗುರುತಿಸುವಲ್ಲಿ ವಿಫಲವಾಗಿದೆ, ಕಾಂಗ್ರೆಸ್ ಪಕ್ಷವು ವಿಫಲವಾಗಿದೆ ಎಂದು ಅವರು ಆರೋಪಿಸಿದರು.ಇದೇ ವೇಳೆ ಅವರು ಮುಂದಿನ ವರ್ಷ ಗೋವಾದಲ್ಲಿ ಚುನಾವಣೆಗೆ ಮುಂಚಿತವಾಗಿ ಮೈತ್ರಿ ಮಾಡಿಕೊಳ್ಳುವ ಯಾವುದೇ ಸಾಧ್ಯತೆಯನ್ನು ಮಮತಾ ಬ್ಯಾನರ್ಜೀ (Mamata Banerjee) ತಳ್ಳಿಹಾಕಿದರು.
ಇದನ್ನೂ ಓದಿ: ಪಶ್ಚಿಮ ಬಂಗಾಳ ಉಪಚುನಾವಣೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಗೆ ಪ್ರಚಂಡ ಗೆಲುವು
'ಮೋದಿಜಿ ಕಾಂಗ್ರೆಸ್‌ನಿಂದ ಹೆಚ್ಚು ಶಕ್ತಿಶಾಲಿಯಾಗಲಿದ್ದಾರೆ...ಏಕೆಂದರೆ ಕಾಂಗ್ರೆಸ್ ಪಕ್ಷವು ಬಿಜೆಪಿಯ ಟಿಆರ್‌ಪಿ ಆಗಿದೆ. ಅವರು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ...ಇದರಿಂದ ದೇಶಕ್ಕೆ ಹಾನಿಯಾಗಲಿದೆ ಎಂದು ಮಮತಾ ಬ್ಯಾನರ್ಜೀ ಹೇಳಿದರು.'ಬಿಜೆಪಿ ವಿರುದ್ಧ ಸ್ಪರ್ಧಿಸುವ ಬದಲು ಅವರು (ಕಾಂಗ್ರೆಸ್) ಬಂಗಾಳದಲ್ಲಿ ನನ್ನ ವಿರುದ್ಧ ಸ್ಪರ್ಧಿಸಿದ್ದಾರೆ, ನಾವು ಅವರಿಗೆ ಇದಕ್ಕಾಗಿ ಹೂ ಕೊಡಬೇಕೇ? ಎಂದು ಅವರು ಕಿಡಿಕಾರಿದರು.
ಇದನ್ನೂ ಓದಿ: ಆ ಹಣ ಎಲ್ಲಿದೆ ?: ಪಿಎಂ ಕೇರ್ಸ್ ಫಂಡ್ ಬಗ್ಗೆ ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಪ್ರಶ್ನೆ
'ಕಾಂಗ್ರೆಸ್ ಬಗ್ಗೆ ನಾನು ಚರ್ಚೆಗೆ ಹೋಗುವುದಿಲ್ಲ, ಏಕೆಂದರೆ ಅದು ನನ್ನ ಪಕ್ಷವಲ್ಲ, ನನ್ನದು ಯಾವುದೇ ಬೆಂಬಲವಿಲ್ಲದ ಪ್ರಾದೇಶಿಕ ಪಕ್ಷ...ಮತ್ತು ನಾವು ಜನರ ಬೆಂಬಲದೊಂದಿಗೆ ಸರ್ಕಾರ ರಚಿಸುವ ಅದೃಷ್ಟ ಹೊಂದಿದ್ದೇವೆ.ನಾನು ಬೇರೆ ಪಕ್ಷದ ಬಗ್ಗೆ ಮಾತನಾಡುವುದಿಲ್ಲ. ಅವರು ನಿರ್ಧರಿಸಲಿ" ಎಂದು ಶ್ರೀಮತಿ ಬ್ಯಾನರ್ಜಿ ಇಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ