ನವದೆಹಲಿ : ಕೊರೊನಾವೈರಸ್ (Coronavirus) ಔಷಧಿ ಮೊಲ್ನುಪಿರವಿರ್ (Molnupiravir) ಇಂದಿನಿಂದ ಭಾರತೀಯ ಚಿಲ್ಲರೆ ಔಷಧೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಔಷಧಿಯನ್ನು ಸರ್ಕಾರ ಇತ್ತೀಚೆಗೆ ಅನುಮೋದಿಸಿದೆ.  


COMMERCIAL BREAK
SCROLL TO CONTINUE READING

ಔಷಧ ವೆಚ್ಚ :
ಈ ಔಷಧಿಯ ಬೆಲೆಯ ಬಗ್ಗೆ ಹೇಳುವುದಾದರೆ, ಮೆಡಿಕಲ್ ಸ್ಟೋರ್‌ನಲ್ಲಿ 63 ರೂ.ಗೆ ಮೊಲ್ನುಪಿರವಿರ್ (Molnupiravir) ಕ್ಯಾಪ್ಸುಲ್ ಅನ್ನು ಪಡೆಯಬಹುದು. ಆದರೆ, ವೈದ್ಯರ ಚೀಟಿಯಲ್ಲದೆ ಈ ಔಷಧಿಯನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಔಷಧಿಯ ಹೆಸರು ವೈದ್ಯರ ಚೀಟಿಯಲ್ಲಿ (Medical Prescription) ಬರೆದಿದ್ದರೆ ಮಾತ್ರ ಇದನ್ನು ರೋಗಿಗಳಿಗೆ ನೀಡುವಂತೆ,  ಔಷಧ ಮಾರಾಟಗಾರರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. 


ಇದನ್ನೂ  ಓದಿ : Cooking Oil : 2022 ರಲ್ಲಿ ಭಾರಿ ಇಳಿಕೆಯಾಗಲಿದೆ ಅಡುಗೆ ಎಣ್ಣೆ ಬೆಲೆ!


ಮೊಲ್ನುಪಿರವಿರ್ ಔಷಧಿಗೆ ಸಿಕ್ಕಿತು ಅನುಮತಿ  :
ಸೆಂಟ್ರಲ್  ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನ ತಜ್ಞರ ಸಮಿತಿಯು ಇತ್ತೀಚೆಗೆ ತುರ್ತು ಸಂದರ್ಭಗಳಲ್ಲಿ ಕೋವಿಡ್ ಡ್ರಗ್ ಮೊಲ್ನುಪಿರವಿರ್ (Molnupiravir) ಅನ್ನು ನಿಯಂತ್ರಿತವಾಗಿ ಬಳಸಲು ಶಿಫಾರಸು ಮಾಡಿದೆ. 


ಔಷಧಿಗಳನ್ನು ಷರತ್ತುಗಳೊಂದಿಗೆ ಮಾರಾಟ ಮಾಡಲಾಗುವುದು :
ಕೋವಿಡ್ -19 ರ ತುರ್ತು ಮತ್ತು ವೈದ್ಯಕೀಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸಮಿತಿಯು ದೇಶದಲ್ಲಿ ತುರ್ತು ಸಂದರ್ಭಗಳಲ್ಲಿ ಮೊಲ್ನುಪಿರಾವಿರ್ (Molnupiravir)  ನಿಯಂತ್ರಿತ ಬಳಕೆಗಾಗಿ ಔಷಧದ ಉತ್ಪಾದನೆ ಮತ್ತು ಮಾರಾಟವನ್ನು ಅನುಮತಿಸಲು ಶಿಫಾರಸು ಮಾಡಿದೆ. ಈ ಔಷಧವನ್ನು 93 ಪ್ರತಿಶತದಷ್ಟು 'SPO2' ಹೊಂದಿರುವ ವಯಸ್ಕ ರೋಗಿಗಳಿಗೆ ಮತ್ತು ಅತಿ ಹೆಚ್ಚು ಅಪಾಯದಲ್ಲಿರುವ ರೋಗಿಗಳಿಗೆ ಬಳಸಬಹುದು. ಷರತ್ತುಗಳ ಪ್ರಕಾರ, ಈ ಔಷಧಿಯನ್ನು ತಜ್ಞ ವೈದ್ಯರ ಪ್ರಿಸ್ಕ್ರಿಪ್ಷನ್ (Medical Prescription) ಮೇಲೆ ಮಾತ್ರ ಅಂಗಡಿಗಳಲ್ಲಿ ಮಾರಾಟ ಮಾಡಬೇಕು. ಈ ಔಷಧಿಯನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಬಳಸುವಂತಿಲ್ಲ. 


ಇದನ್ನೂ  ಓದಿ : Wedding : ಕೊರೋನಾ ಸಮಯದಲ್ಲಿ ಮದುವೆ ಕ್ಯಾನ್ಸಲ್ ಮಾಡಿದ್ರೆ ಸಿಗಲಿದೆ ₹10 ಲಕ್ಷ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ