ನವದೆಹಲಿ: ಕೊರೊನಾ ಸಾಂಕ್ರಾಮಿಕ(CoronaVirus)ರೋಗದಿಂದ ಇಡೀ ಜಗತ್ತೇ ಚೇತರಿಸಿಕೊಳ್ಳಲು ಹೆಣಗಾಡುತ್ತಿದೆ. ಮಹಾಮಾರಿಯ ಅಟ್ಟಹಾಸಕ್ಕೆ ನಲುಗಿಹೋಗಿರುವ ಸಾಮಾನ್ಯರ ಜೀವನ ಸಹಜಸ್ಥಿತಿಗೆ ಬರುವಷ್ಟರಲ್ಲಿ ರೂಪಾಂತರಿ ವೈರಸ್ ನ ಭೀತಿ ಎದುರಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಕೋವಿಡ್-19 ಸೋಂಕಿನಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ. ಪ್ರಾಣಿಗಳು ಕೂಡ ಮಾಸ್ಕ್ ಗಳಿಗೆ ಮಾರುಹೋಗಿವೆ.  


COMMERCIAL BREAK
SCROLL TO CONTINUE READING

ಹೌದು, ಮನುಷ್ಯ ಮುಖಕ್ಕೆ ಹಾಕಿಕೊಳ್ಳುವ ಮಾಸ್ಕ್(Mask) ಗಳಿಗೆ ಇದೀಗ ಪ್ರಾಣಿಗಳು ಆಕರ್ಷಿತವಾಗಿವೆ. ಅದಕ್ಕೆ ನಿದರ್ಶನವೆಂಬಂತೆ ವಿಡಿಯೋವೊಂದು ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ಸದ್ದು ಮಾಡುತ್ತಿದೆ. ರೆಕ್ಸ್ ಚಾಪ್‌ಮನ್ ಎಂಬುವರು ಹಂಚಿಕೊಂಡಿರುವ 27 ಸೆಕೆಂಡುಗಳ ಈ ವಿಡಿಯೋ ನೋಡಿದರೆ ನೀವು ಖಂಡಿತ ಬಿದ್ದು ಬಿದ್ದು ನಗುತ್ತೀರಿ.  ಈ ವಿಡಿಯೋದಲ್ಲಿ ಕೋತಿ(Monkey)ಯೊಂದು ರಸ್ತೆಯಲ್ಲಿ ಸಿಕ್ಕ ಮಾಸ್ಕ್ ಎತ್ತಿಕೊಂಡು ಅದನ್ನು ಧರಿಸಲು ಪ್ರಯತ್ನಿಸುತ್ತದೆ. ಕುತೂಹಲದಿಂದ ಮಾಸ್ಕ್ ಕೈಗೆತ್ತಿಕೊಳ್ಳುವ ಕೋತಿಮರಿ ಒಂದು ಕ್ಷಣವೂ ಯೋಚಿಸದೆ ಅದನ್ನು ತನ್ನ ಮುಖಕ್ಕೆ ಹಾಕಿಕೊಂಡಿರುವುದು ತುಂಬಾ ಫನ್ನಿಯಾಗಿದೆ.


ಇದನ್ನೂ ಓದಿ: Cheque ನೀಡುವ ಮುನ್ನ ತಿಳಿದಿರಲಿ RBI ಹೊಸ ನಿಯಮ, ಇಲ್ಲವಾದರೆ ಎದುರಾದೀತು ಸಮಸ್ಯೆ


Monkey)ಯ ತುಂಟಾಟಕ್ಕೆ ಫಿದಾ ಆಗಿದ್ದಾರೆ. ಬುದ್ಧಿವಂತಿಕೆಯಲ್ಲಿ ಪ್ರಾಣಿಗಳು ಮನುಷ್ಯನನ್ನೂ ಮೀರಿಸುತ್ತವೆ ಅಂತಾ ನೆಟಿಜನ್ ಗಳು ಕಾಮೆಂಟ್ ಮಾಡಿದ್ದಾರೆ.


ಮನುಷ್ಯನಿಗಿಂತ ಪ್ರಾಣಿಗಳೇ ಮೇಲು, ಕೊರೊನಾ ಇದೆ ಮಾಸ್ಕ್ ಹಾಕಿಕೊಳ್ಳಿ ಎಂದರೆ ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಇಲ್ಲಿ ಕೋತಿ ಮಾಸ್ಕ್ ಹಾಕಿಕೊಳ್ಳುವ ಮೂಲಕ ಮನುಷ್ಯಗೆ ಬುದ್ಧಿಪಾಠ ಹೇಳಿದ ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಶೇರ್ ಮಾಡಿದ್ದು, 41 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.  


ಇದನ್ನೂ ಓದಿ: 7th Pay Commission : ಕೇಂದ್ರ ಸರ್ಕಾರಿ ನೌಕರರ DA ಹೆಚ್ಚಳದ ನಂತರ ಮತ್ತೆ ವೇತನ ಹೆಚ್ಚಳ - ಇಲ್ಲಿದೆ ನೋಡಿ ಲೆಕ್ಕಾಚಾರ  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.