Monkeypox outbreak: ಮಕ್ಕಳಿಗೆ ಅಪಾಯ ಹೆಚ್ಚು, ಈ 5 ರೋಗಲಕ್ಷಣಗಳನ್ನು ನಿರ್ಲಕ್ಷಿಸದಿರಿ- ICMR
Monkeypox outbreak: ಜಗತ್ತಿನಾದ್ಯಂತ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರದ ವೈದ್ಯಕೀಯ ಸಂಸ್ಥೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಂಕಿಪಾಕ್ಸ್ ವೈರಸ್‌ನಿಂದ ಮಕ್ಕಳು ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು ಎಂದು ಮಾಹಿತಿ ನೀಡಿದೆ.
ನವದೆಹಲಿ: ಜಗತ್ತಿನಾದ್ಯಂತ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರದ ವೈದ್ಯಕೀಯ ಸಂಸ್ಥೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಶುಕ್ರವಾರ (ಮೇ 27, 2022) ಮಂಕಿಪಾಕ್ಸ್ ವೈರಸ್‌ನಿಂದ ಮಕ್ಕಳು ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು ಎಂದು ಮಾಹಿತಿ ನೀಡಿದೆ. ಅನೇಕ ದೇಶಗಳಲ್ಲಿ ಮಂಕಿ ಪಾಕ್ಸ್ ಹಾವಳಿ ಜೋರಾಗಿದ್ದು, ಭಾರತದಲ್ಲಿ ಇದುವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಐಸಿಎಂಆರ್ ತಿಳಿಸಿದೆ.
ಇದನ್ನೂ ಓದಿ:
ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ಐಸಿಎಂಆರ್ ವಿಜ್ಞಾನಿ ಡಾ.ಅಪರ್ಣಾ ಮುಖರ್ಜಿ, “ಮಕ್ಕಳು ಮಂಕಿ ಪಾಕ್ಸ್‌ಗೆ ಒಳಗಾಗುವ ಅಪಾಯ ಹೆಚ್ಚು. ಜನರು ಭಯಭೀತರಾಗಬಾರದು. ಮಂಕಿ ಪಾಕ್ಸ್ ಬಂದಿರುವ ಜನರ ಜೊತೆ ನಿಕಟ ಸಂಪರ್ಕವನ್ನು ತಪ್ಪಿಸಬೇಕು. ಜನರು ಈ ರೋಗದ ಬಗ್ಗೆ ಭಯಭೀತರಾಗಬಾರದು, ಅದರ ರೋಗಲಕ್ಷಣಗಳನ್ನು ತಿಳಿದುಕೊಳ್ಳಬೇಕು. ಈ ರೋಗವು ಸಾಮಾನ್ಯವಾಗಿ ಅತ್ಯಂತ ನಿಕಟ ಸಂಪರ್ಕದಿಂದ ಹರಡುತ್ತದೆ. ಇದಕ್ಕೆ ಮಾರ್ಗಸೂಚಿಗಳನ್ನು ಈಗಾಗಲೇ ICMR-NIV ನಿಂದ ಪ್ರಕಟಿಸಲಾಗಿದೆ" ಎಂದು ತಿಳಿಸಿದ್ದಾರೆ.
ಜನರು ವಿಶೇಷವಾಗಿ ಮಂಕಿಪಾಕ್ಸ್-ಸೋಂಕಿತ ದೇಶಗಳಿಂದ ಪ್ರಯಾಣದ ಇತಿಹಾಸವನ್ನು ಹೊಂದಿರುವವರು ಸೂಕ್ಷ್ಮವಾಗಿ ಗಮನಿಸಬೇಕು. ಮಂಕಿಪಾಕ್ಸ್ ರೋಗದ ಐದು ಮುಖ್ಯ ಲಕ್ಷಣಗಳು:
ಮೈ-ಕೈ ನೋವು
ದದ್ದುಗಳು
ಜ್ವರ
ಶಕ್ತಿ ಹೀನತೆ
ದೊಡ್ಡ ದುಗ್ಧರಸ ಗ್ರಂಥಿಗಳು
ಇದನ್ನೂ ಓದಿ:
ಏತನ್ಮಧ್ಯೆ, ಮಂಕಿಪಾಕ್ಸ್ ಪ್ರಕರಣಗಳನ್ನು ಸುಲಭವಾಗಿ ತಡೆಗಟ್ಟಲು ದೇಶಗಳು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ತಮ್ಮ ಲಸಿಕೆ ದಾಸ್ತಾನುಗಳ ಬಗ್ಗೆ ಡೇಟಾವನ್ನು ಹಂಚಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಹೇಳಿದ್ದಾರೆ. "ರೋಗದ ವ್ಯಾಪ್ತಿಯು ನಮಗೆ ತಿಳಿದಿಲ್ಲ. ಆದರೆ ನಾನು ಹೇಳಿದಂತೆ, ಒಂದು ದೇಶವಾಗಿ ನಾವು ಹೆಚ್ಚು ಜಾಗರೂಕರಾಗಿರಬೇಕು. ಆದ್ದರಿಂದ, ನಾವು ಇಂದು ಈ ಬ್ರೀಫಿಂಗ್ ಅನ್ನು ಮಾಡುತ್ತಿದ್ದೇವೆ ಮತ್ತು ನಾವು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ ಏಕೆಂದರೆ ನಾವು ಪ್ರಾರಂಭದ ಹಂತದಲ್ಲಿದ್ದೇವೆ ಮತ್ತು ಈಗ ಪ್ರಸರಣವನ್ನು ನಿಲ್ಲಿಸಲು ನಮಗೆ ಉತ್ತಮ ಅವಕಾಶವಿದೆ" ಎಂದು WHO ನಿರ್ದೇಶಕರಾದ ಸಿಲ್ವಿ ಬ್ರಿಯಾಂಡ್ ಹೇಳಿದರು.
ಮಂಕಿ ಪಾಕ್ಸ್‌ನ ಮೊದಲ ಪ್ರಕರಣ 1970ರಲ್ಲಿ ಮೊದಲ ಬಾರಿಗೆ ಕಾಂಗೋ ದೇಶದಲ್ಲಿ ವರದಿಯಾಗಿತ್ತು. ಸಿಡುಬು ರೋಗಕ್ಕೆ ಬಳಸುವ ರೋಗ ನಿರೋಧಕ ಔಷಧವನ್ನೇ ಮಂಕಿ ಪಾಕ್ಸ್‌ಗೂ ಬಳಕೆ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.