Monkeypox Death Kerala: ಇತ್ತೀಚೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ಹಿಂದಿರುಗಿದ ಮತ್ತು ಒಂದು ದಿನ ಮುಂಚಿತವಾಗಿ ಮಂಗನ ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದ 22 ವರ್ಷದ ಯುವಕನ ಸಾವಿನ ಕಾರಣವನ್ನು ತನಿಖೆ ಮಾಡುವುದಾಗಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ಹೇಳಿದ್ದಾರೆ. ರೋಗಿಯ ಮಾದರಿಗಳ ವರದಿ ಇನ್ನೂ ಬಂದಿಲ್ಲ ಎಂದು ಆರೋಗ್ಯ ಸಚಿವೆ ತಿಳಿಸಿದ್ದಾರೆ. ರೋಗಿಯು ವಯಸ್ಸಿನಲ್ಲಿ ತುಂಬಾ ಚಿಕ್ಕವನಾಗಿದ್ದು, ಬೇರೆ ಯಾವುದೇ ಕಾಯಿಲೆ ಅಥವಾ ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆ ಇರಲಿಲ್ಲ, ಆದ್ದರಿಂದ ಆರೋಗ್ಯ ಇಲಾಖೆ ಅವನ ಸಾವಿಗೆ ಕಾರಣವನ್ನು ಪತ್ತೆ ಹಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Amazon Great Freedom Festival: ಮೊಬೈಲ್ ಮೇಲೆ ಶೇ.40, ಟಿವಿಗಳಿಗೆ ಶೇ.60ರಷ್ಟು ರಿಯಾಯಿತಿ!


ಜುಲೈ 21 ರಂದು ಯುಎಇಯಿಂದ ಬಂದ ನಂತರ ಯುವಕನನ್ನು ಆಸ್ಪತ್ರೆಗೆ ದಾಖಲಿಸಲು ಏಕೆ ವಿಳಂಬ ಮಾಡಲಾಗಿದೆ ಎಂಬುದರ ವಿಚಾರಣೆ ನಡೆಸಲಾಗುವುದು ಎಂದು ಜಾರ್ಜ್ ಹೇಳಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಘಿಗಳ ಜೊತೆಗೆ ಮಾತನಾಡಿರುವ  ಸಚಿವೆ, “ಈ ನಿರ್ದಿಷ್ಟ ರೀತಿಯ ಕೋವಿಡ್ -19 ನಂತಹ ಕಾಯಿಲೆ, ಉನ್ನತ ಮಟ್ಟದಲ್ಲಿ ಸಾಂಕ್ರಾಮಿ ಸೋಂಕು ಅಲ್ಲ, ಆದರೆ ಅದು ಹರಡುತ್ತದೆ ಎಂದಿದ್ದಾರೆ. ಹೋಲಿಕೆಯಲ್ಲಿ ಈ ರೀತಿಯ ಮಂಕಿಪಾಕ್ಸ್‌ನಿಂದ ಮರಣ ಪ್ರಮಾಣ ತುಂಬಾ ಕಡಿಮೆಯಾಗಿದೆ. ಆದ್ದರಿಂದ, 22 ವರ್ಷದ ಯುವಕನಿಗೆ ಬೇರೆ ಯಾವುದೇ ಕಾಯಿಲೆ ಅಥವಾ ಆರೋಗ್ಯ ಸಮಸ್ಯೆ ಇಲ್ಲದ ಕಾರಣ ಈ ನಿರ್ದಿಷ್ಟ ಪ್ರಕರಣದಲ್ಲಿ ಏಕೆ ಸಾವನ್ನಪ್ಪಿದ್ದಾನೆ ಎಂಬುದನ್ನು ನಾವು ತನಿಖೆ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Land Scam Case: ‘ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ನಾನೂ ಯಾರಿಗೂ ತಲೆಬಾಗುವುದಿಲ್ಲ’


ಈ ರೀತಿಯ ಮಂಗನ ಕಾಯಿಲೆ ಹರಡುವುದರಿಂದ ಅದನ್ನು ತಡೆಯಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ರೋಗ ಪತ್ತೆಯಾದ ಇತರ ದೇಶಗಳಿಂದ ನಿರ್ದಿಷ್ಟ ರೀತಿಯ ಕಾಯಿಲೆಯ ಬಗ್ಗೆ ಯಾವುದೇ ಅಧ್ಯಯನ ಲಭ್ಯವಿಲ್ಲ ಮತ್ತು ಇದೇ ಕಾರಣದಿಂದ ಕೇರಳ ಅದರ ಬಗ್ಗೆ ಅಧ್ಯಯನ ನಡೆಸುತ್ತಿದೆ ಎಂದು ಸಚಿವರು ಹೇಳಿದ್ದಾರೆ. 22 ವರ್ಷದ ವ್ಯಕ್ತಿ ಶನಿವಾರ ಬೆಳಗ್ಗೆ ತ್ರಿಶೂರ್‌ನ ಖಾಸಗಿ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದಾನೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.