ನವದೆಹಲಿ: ಈ ಬಾರಿಯ ಮುಂಗಾರು ಮಳೆ ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಆಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಏಜೆನ್ಸಿ ಸ್ಕೈಮೆಟ್ ಬುಧವಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಈ ಬಾರಿಯ ಮುಂಗಾರು ಮಳೆಯ ದೀರ್ಘಾವಧಿ ಸರಾಸರಿ (ಎಲ್‌ಪಿಎ) ಶೇ. 93ರಷ್ಟು ಇರುವ ಸಾಧ್ಯತೆಯಿದೆ. ಮಳೆಯ ದೀರ್ಘಾವಧಿ ಸರಾಸರಿ ಶೇ.90-95ರಷ್ಟಿದ್ದರೆ ಮಳೆಯ ಪ್ರಮಾಣ 'ಸಾಮಾನ್ಯ ಮಟ್ಟಕ್ಕಿಂತ ಕಡಿಮೆ' ಎಂದು ಪರಿಗಣಿಸಲಾಗುತ್ತದೆ ಎಂದು ಸ್ಕೈಮೆಟ್ ಹೇಳಿದೆ. 


ಈ ವರ್ಷ ಮುಂಗಾರು ಮಳೆ ಕಡಿಮೆ ಆಗಲು ಎಲ್ ನಿನೋ ವಿದ್ಯಾಮಾನವೇ ಬಹುತೇಕ ಕಾರಣ ಎಂದು ಸ್ಕೈಮೆಟ್ ಸಿಇಓ ಜತಿನ್ ಸಿಂಗ್ ಹೇಳಿದ್ದಾರೆ.  ಈ ಬಾರಿಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆಯು ಶೇ.55ರಷ್ಟಿದೆ ಎಂದು ಸ್ಕೈಮೆಟ್ ಭವಿಷ್ಯ ನುಡಿದಿದೆ.