ನವದೆಹಲಿ: ಜೂನ್ 22-23ರ ವೇಳೆಗೆ ಮಾನ್ಸೂನ್ ರಾಷ್ಟ್ರ ರಾಜಧಾನಿ ದೆಹಲಿಯನ್ನು ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಗುರುವಾರ ತಿಳಿಸಿದೆ. ಐಎಂಡಿ ವಿಜ್ಞಾನಿ ಕುಲದೀಪ್ ಶ್ರೀವಾಸ್ತವ ಅವರ ಪ್ರಕಾರ ಮೊದಲಿಗೆ  ಮಾನ್ಸೂನ್ ಜೂನ್ 27 ರ ಸುಮಾರಿಗೆ ದೆಹಲಿ ತಲುಪುವ ನಿರೀಕ್ಷೆ ಇತ್ತು, ಇದೀಗ ನಿಗದಿತ ಸಮಯಕ್ಕೂ ಮೊದಲೇ ಮಾನ್ಸೂನ್ ದೆಹಲಿ ತಲುಪಲಿದೆ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಐಎಂಡಿ ಪ್ರಕಾರ ದೆಹಲಿ-ಎನ್‌ಸಿಆರ್ (Delhi-NCR) ಪ್ರದೇಶವು ಶೀಘ್ರದಲ್ಲೇ ಸುಡುವ ಶಾಖದಿಂದ ಪರಿಹಾರ ಪಡೆಯಲಿದೆ. ಗುರುವಾರ ಕೆಲವು ಭಾಗಗಳಲ್ಲಿ ಪಾದರಸವು 46 ಡಿಗ್ರಿ ಸೆಲ್ಸಿಯಸ್-ಗಡಿಯನ್ನು ದಾಟಿದ್ದರಿಂದ ರಾಷ್ಟ್ರ ರಾಜಧಾನಿ ತೀವ್ರ ತಾಪಕ್ಕೆ ಒಳಗಾಯಿತು ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ. ನಗರಕ್ಕೆ ಪ್ರತಿನಿಧಿ ಅಂಕಿಅಂಶಗಳನ್ನು ಒದಗಿಸುವ ಸಫ್ದರ್ಜಂಗ್ ವೀಕ್ಷಣಾಲಯವು ಗರಿಷ್ಠ 42.5 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ.


46.4 ಡಿಗ್ರಿ ಸೆಲ್ಸಿಯಸ್‌ನಲ್ಲಿ ಅಯನಗರದಲ್ಲಿನ ಹವಾಮಾನ ಕೇಂದ್ರಗಳು ನಗರದ ಗರಿಷ್ಠ ತಾಪಮಾನವನ್ನು ದಾಖಲಿಸಿದೆ. ಪೂಸಾ ವೀಕ್ಷಣಾಲಯವು 45.1 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ.


ನಗರದಲ್ಲಿ ಆರ್ದ್ರತೆಯ ಮಟ್ಟವು ಶೇಕಡಾ 38 ರಿಂದ 81 ರವರೆಗೆ ಆಂದೋಲನಗೊಂಡಿದೆ. ಎಂಇಟಿ ಇಲಾಖೆ ಶುಕ್ರವಾರ ಭಾಗಶಃ ಮೋಡ ಕವಿದ ವಾತಾವರಣ ಇರುವ ಬಗ್ಗೆ ಊಹಿಸಿದೆ.


ಐಎಂಡಿಯ ಪ್ರಾದೇಶಿಕ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ, ಪಶ್ಚಿಮ ಬಂಗಾಳ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಜೂನ್ 19 ಮತ್ತು ಜೂನ್ 20 ರೊಳಗೆ ನೈಋತ್ಯ ಮಾನ್ಸೂನ್ ಉತ್ತರ ಪ್ರದೇಶದ ಕಡೆಗೆ ಚಲಿಸಲಿದೆ ಎಂದು ಹೇಳಿದರು. "ಇದು ಪಶ್ಚಿಮ ಉತ್ತರದಲ್ಲಿ ಮಾನ್ಸೂನ್ ಮತ್ತಷ್ಟು ಪ್ರಗತಿಗೆ ಸಹಾಯ ಮಾಡುತ್ತದೆ, ಉತ್ತರಖಂಡ್, ಈಶಾನ್ಯ ರಾಜಸ್ಥಾನ ಮತ್ತು ಪೂರ್ವ ಹರಿಯಾಣದ ಕೆಲವು ಭಾಗಗಳು ಜೂನ್ 22 ಮತ್ತು ಜೂನ್ 24 ರ ನಡುವೆ ಮಾನ್ಸೂನ್ ಪ್ರವೇಶಿಸುವ ನಿರೀಕ್ಷೆ ಇದೇ ಎಂದು ಹೇಳಿದರು.