Morbi Bridge Collapse: 130ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮೊರ್ಬಿ ದುರಂತದ ತನಿಖೆಯಲ್ಲಿ ಸೇತುವೆಯ ನವೀಕರಣದ ಜವಾಬ್ದಾರಿಯನ್ನು ಹೊತ್ತಿದ್ದ ಕಂಪನಿಯ ಭ್ರಷ್ಟಾಚಾರ ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ. ದುರಸ್ತಿಗೆ ನಿಗದಿಪಡಿಸಿದ 2 ಕೋಟಿ ರೂ.ಗಳಲ್ಲಿ ಕೇವಲ 12 ಲಕ್ಷ ರೂವನ್ನು ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಜಂತಾದ ಅಂಗಸಂಸ್ಥೆಯಾಗಿರುವ ಅಹಮದಾಬಾದ್ ಮೂಲದ ಒರೆವಾ ಸಮೂಹವು ಮೊರ್ಬಿಯಲ್ಲಿನ ವಸಾಹತುಶಾಹಿ ಕಾಲದ ತೂಗು ಕೇಬಲ್ ಸೇತುವೆಯ ನವೀಕರಣ ಮತ್ತು ದುರಸ್ತಿಯ ಜವಾಬ್ದಾರಿಯನ್ನು ಹೊತ್ತಿತ್ತು. ಆದರೆ ಕಂಪನಿಯು ಇದರ ದುರಸ್ತಿಗೆ ಮಂಜೂರಾಗಿದ್ದ ಮೊತ್ತದ ಕೇವಲ 6% ಅನ್ನು ಮಾತ್ರ ಖರ್ಚು ಮಾಡಿದೆ ಎಂದು ವರದಿಗಳು ಹೇಳಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Pollution: ಹೆಚ್ಚುತ್ತಿರುವ ವಾಯುಮಾಲಿನ್ಯ, ನೋಯ್ಡಾದಲ್ಲಿ ವಾಹನ ಪ್ರವೇಶಕ್ಕೆ ನಿಷೇಧ!


ಈ ವರ್ಷದ ಮಾರ್ಚ್‌ನಲ್ಲಿ ಮೊರ್ಬಿ ಸೇತುವೆ ನಿರ್ವಹಣೆಯ ಗುತ್ತಿಗೆಯನ್ನು ಪಡೆದ ಒರೆವಾ ಗ್ರೂಪ್ ಅಧ್ಯಕ್ಷ ಜಯಸುಖ್ ಪಟೇಲ್ ಅಕ್ಟೋಬರ್ 24 ರಂದು ಗುಜರಾತಿ ಹೊಸ ವರ್ಷದಂದು ಸೇತುವೆಯನ್ನು ಮತ್ತೆ ತೆರೆಯಲು ಸುರಕ್ಷಿತವಾಗಿದೆ ಎಂದು ಘೋಷಿಸಿದರು.


ದುರಂತದ ಕಾರಣದ ತನಿಖೆಯು ಒರೆವಾ ಗ್ರೂಪ್‌ನ ಹಲವಾರು ಅಕ್ರಮಗಳನ್ನು ಎತ್ತಿ ತೋರಿಸಿದೆ. ಈ ಗ್ರೂಪ್ ತನಗೆ ಲಭಿಸಿದ್ದ ಜವಾಬ್ದಾರಿಯನ್ನು ಮತ್ತೊಂದು ಗುತ್ತಿಗೆಗೆ ವಹಿಸಿತ್ತು. ಧ್ರಂಗಾಧ್ರ ಮೂಲದ ಸಂಸ್ಥೆಯಾದ ದೇವಪ್ರಕಾಶ್ ಸೊಲ್ಯೂಷನ್‌ಗೆ ನೀಡಿತ್ತು. ಇನ್ನು ಈ ಉಪಗುತ್ತಿಗೆದಾರರು ಸಹ ತೂಗು ಸೇತುವೆ ದುರಸ್ತಿಗೆ ಯಾವ ರೀತಿಯ ತಾಂತ್ರಿಕತೆಯನ್ನು ಬಳಸಿಕೊಳ್ಳಬೇಕು ಎಂಬ ಅಗತ್ಯವಾದ ಜ್ಞಾನದ ಕೊರತೆಯನ್ನು ಹೊಂದಿದ್ದರು.


ದೇವಪ್ರಕಾಶ್ ಸೊಲ್ಯೂಷನ್ಸ್‌ನಿಂದ ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಸೇತುವೆ ದುರಸ್ತಿಗೆ ಖರ್ಚು ಮಾಡಿದ ಹಣವನ್ನು ಉಲ್ಲೇಖಿಸಲಾಗಿದೆ.


ಅಜಂತಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಮುಂದಿನ 15 ವರ್ಷಗಳ ಗುತ್ತಿಗೆಯನ್ನು ಮಾರ್ಚ್‌ನಲ್ಲಿ ನೀಡಲಾಗಿತ್ತು.


ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಬಸ್–ಕಾರ್ ಡಿಕ್ಕಿಯಾಗಿ ಸ್ಥಳದಲ್ಲೇ 11 ಮಂದಿ ದುರ್ಮರಣ!


ಮಾರ್ಬಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಓರೆವಾ ಗ್ರೂಪ್‌ನ ಮೂಲ ಕಂಪನಿಯಾದ ಅಜಂತಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ನಡುವೆ 15 ವರ್ಷಗಳ ನಿರ್ವಹಣಾ ಒಪ್ಪಂದವನ್ನು ಮಾರ್ಚ್ 2022 ರಲ್ಲಿ ಸಹಿ ಮಾಡಲಾಗಿದೆ, ಅದು 2037 ರವರೆಗೆ ಮಾನ್ಯವಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಎಂಟರಿಂದ ಹನ್ನೆರಡು ತಿಂಗಳವರೆಗೆ ಹೂಡಿಕೆ ಮಾಡಬೇಕಾಗಿತ್ತು. ಆದರೆ ಗುಂಪು ಈ ನಿಯಮಗಳನ್ನು ಉಲ್ಲಂಘಿಸಿದ್ದು, ಮೋರ್ಬಿ ನಾಗರಿಕ ಸಂಸ್ಥೆಗೆ ತಿಳಿಸದೆ ಏಳು ತಿಂಗಳೊಳಗೆ ಸೇತುವೆಯನ್ನು ಪುನಃ ತೆರೆದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.