ನವದೆಹಲಿ: ನವದೆಹಲಿ ಮತ್ತು ಇತರ ನಗರಗಳಲ್ಲಿ ಇತ್ತೀಚಿನ ಮಾಲಿನ್ಯ ಬಿಕ್ಕಟ್ಟಿಗೆ ರೈತರು ಕಳೆಗೆ ಹಚ್ಚುವ ಬೆಂಕಿ ಎಂದು ಆರೋಪಿಸಿ ಈಗ ಪಂಜಾಬ್ ನಲ್ಲಿ 80ಕ್ಕೂ ಅಧಿಕ ರೈತರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರತಿ ಚಳಿಗಾಲದಲ್ಲೂ ಕೊಯ್ಲು ನಂತರದ ಸುಟ್ಟ ಬೆಳೆ ಸುಡುವಿಕೆಯಿಂದ ಹೊರಹೊಮ್ಮುವ ವಿಷಕಾರಿ ಹೊಗೆಯಿಂದ ಈ ಪ್ರದೇಶದ ಭಾಗವನ್ನು ಆವರಿಸುತ್ತದೆ, ಇದು ಕಾರು ಮತ್ತು ಕಾರ್ಖಾನೆಯ ಹೊರಸೂಸುವಿಕೆಯೊಂದಿಗೆ ಸೇರಿಕೊಂಡು ಕಲುಷಿತ ಗಾಳಿಯನ್ನು ಹುಟ್ಟುಹಾಕಿದೆ ಎನ್ನಲಾಗಿದೆ.


ಈ ವಾರ ಸುಪ್ರೀಂಕೋರ್ಟ್ ಈ ಕಳೆ ಸುಡುವಿಕೆಗೆ ನಿಯಂತ್ರಣ ತರಬೇಕೆಂದು ಸೂಚಿಸಿತ್ತು, ಈ ಹಿನ್ನಲೆಯಲ್ಲಿ ಈಗ ಪೊಲೀಸರು ರೈತರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಕಳೆದ ಮೂರು ದಿನಗಳಲ್ಲಿ ರಾಜ್ಯದಲ್ಲಿ 17,000 ಕ್ಕೂ ಹೆಚ್ಚು ಕೃಷಿ ಬೆಂಕಿ ಕಾಣಿಸಿಕೊಂಡಿದ್ದು, ಬುಧವಾರ ಮಾತ್ರ 4,741 ಎಂದು ಪಂಜಾಬ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದುವರೆಗೆ ಕಾನೂನು ಉಲ್ಲಂಘಿಸಿದ್ದಕ್ಕಾಗಿ 84 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 174 ರೈತರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಪ್ರತಿ ವರ್ಷ ಸುಮಾರು 18 ದಶಲಕ್ಷ ಟನ್ ಅಕ್ಕಿ ಉತ್ಪಾದಿಸುವ ಪ್ರಮುಖ ಕೃಷಿ ಪ್ರದೇಶ ಪಂಜಾಬ್ ಮತ್ತು ಹರಿಯಾಣ. ಇದರಿಂದಾಗಿ ಸುಮಾರು 20 ಮಿಲಿಯನ್ ಟನ್ ಕಳೆಯನ್ನು ಸೃಷ್ಟಿಸುತ್ತದೆ.ಇದನ್ನು ಬಹುತೇಕವಾಗಿ ಸುಡಲಾಗುತ್ತದೆ ಎನ್ನಲಾಗಿದೆ. ಸೆಪ್ಟೆಂಬರ್ ಅಂತ್ಯದಿಂದ ಎರಡು ರಾಜ್ಯಗಳಲ್ಲಿ 48,000 ಕ್ಕೂ ಹೆಚ್ಚು ಕೃಷಿ ಬೆಂಕಿ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇತ್ತೀಚಿಗೆ ಸುಪ್ರೀಂಕೋರ್ಟ್ ರಾಜ್ಯಗಳಿಗೆ ಛೀಮಾರಿ ಹಾಕಿ 'ನೀವು ನಿಮ್ಮ ದಂತ ಗೋಪುರಗಳಲ್ಲಿ ಕುಳಿತು ಆಳಲು ಬಯಸುತ್ತೀರಿ. ನಿಮಗೆ ತೊಂದರೆಯಾಗಿಲ್ಲ ಮತ್ತು ಜನರನ್ನು ಸಾಯಲು ಬಿಡಲಾಗುತ್ತಿದೆ' ಎಂದು ಅಸಮಧಾನ ವ್ಯಕ್ತಪಡಿಸಿತು.