ಬೆಂಗಳೂರು: ಕಳೆದ ತಿಂಗಳು ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಭರ್ಜರಿ ಗೆಲುವಿನ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಮಸೀದಿಯೊಂದಕ್ಕೆ ಅವರ ಹೆಸರನ್ನು ಇಡಲಾಗಿದೆ ಎನ್ನುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆದರೆ ಈಗ ಹಲವಾರು ಫ್ಯಾಕ್ಟ್ ಚೆಕ್ ವೆಬ್ ಸೈಟ್ ಗಳು ಈಗ ಇದರ ಸತ್ಯಾಸತ್ಯತೆಯನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿವೆ.



COMMERCIAL BREAK
SCROLL TO CONTINUE READING

ಬೆಂಗಳೂರಿನ ಟಾಸ್ಕರ್ ಟೌನ್‌ನಲ್ಲಿರುವ ಈ ಮಸೀದಿಯಲ್ಲಿ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಮೋದಿ ಮಸೀದಿಯ ಇಮಾಮ್ ಗುಲಾಮ್ ರಬ್ಬಾನಿ ಇದಕ್ಕೆ ಪ್ರತಿಕ್ರಿಯಿಸುತ್ತಾ  'ಈ ಮಸೀದಿಗೆ ಸುಮಾರು 170 ವರ್ಷಗಳು ಮತ್ತು ನಮ್ಮ ಪ್ರಧಾನ ಮಂತ್ರಿಗೆ ಅಂದಾಜು 69 ವರ್ಷ. ಪ್ರಧಾನಿ ಮೋದಿ ಮತ್ತು ಈ ಮಸೀದಿಯ ನಡುವೆ ಯಾವುದೇ ಸಂಬಂಧವಿಲ್ಲ" ಎಂದು ವೈರಲ್ ಆಗಿರುವ ಫೋಟೋ ವಿಚಾರವಾಗಿ ಸ್ಪಷ್ಟಪಡಿಸಿದ್ದಾರೆ. ಟಾಸ್ಕರ್ ಟೌನ್‌ನಲ್ಲಿರುವ ಈ ಮಸೀದಿಯ ಹೊರತಾಗಿ ಟ್ಯಾನರಿ ರಸ್ತೆಯ ಸುತ್ತಲು ಇನ್ನೂ ಎರಡು ಮಸೀದಿಗಳಿವೆ.


ಬೆಂಗಳೂರಿನ ಮೋದಿ ಮಸೀದಿಯ ಇತಿಹಾಸ:


1849 ರಲ್ಲಿ ಟಾಸ್ಕರ್ ಟೌನ್ ನ್ನು ಮಿಲಿಟರಿ ಮತ್ತು ಸಿವಿಲ್ ಸ್ಟೇಷನ್ ಎಂದು ಕರೆಯಲಾಗುತ್ತಿತ್ತು, ಅಲ್ಲಿ ಶ್ರೀಮಂತ ವ್ಯಾಪಾರಿ ಮೋದಿ ಅಬ್ದುಲ್ ಗಫೂರ್ ವಾಸಿಸುತ್ತಿದ್ದರು. ಅವರು ಈ ಪ್ರದೇಶದಲ್ಲಿ ಮಸೀದಿಯ ಅಗತ್ಯವನ್ನು ಅರಿತು 1849 ರಲ್ಲಿ ನಿರ್ಮಿಸಿದರು. ಇದಾದ ನಂತರ ಮೋದಿ ಅಬ್ದುಲ್ ಗಫೂರ್ ಅವರ ಕುಟುಂಬವು ಬೆಂಗಳೂರಿನಲ್ಲಿ ಇನ್ನೂ ಒಂದೆರಡು ಮಸೀದಿಗಳನ್ನು ನಿರ್ಮಿಸಿತು. ಟ್ಯಾನರಿ ಪ್ರದೇಶದ ರಸ್ತೆಯನ್ನು ಸಹ ಮೋದಿ ರಸ್ತೆ ಎಂದು ಕರೆಯಲಾಗುತ್ತದೆ.


ಹಳೆಯ ಮಸೀದಿ ದುರಸ್ತಿಯಲ್ಲಿದ್ದರಿಂದ ಅದನ್ನು 2015 ರಲ್ಲಿ ನೆಲಸಮಗೊಳಿಸಲಾಯಿತು. ಈಗ ನವೀಕರಿಸಿದ ಮಸೀದಿಯನ್ನು ಕಳೆದ ತಿಂಗಳ ಕೊನೆಯಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು, ಇದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು. 30,000 ಚದರ ಅಡಿ ವಿಸ್ತೀರ್ಣದ ವಿಸ್ತೀರ್ಣವನ್ನು ಹೊಂದಿರುವ ಮಸೀದಿಯನ್ನು ನಿರ್ಮಿಸಲು ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವನ್ನು ಅಳವಡಿಸಲಾಗಿದೆ ಎಂದು ಮಸೀದಿಯ ಮುಖ್ಯ ವಾಸ್ತುಶಿಲ್ಪಿ ಹಸಿಬರ್ ರಹಮಾನ್ ತಿಳಿಸಿದ್ದಾರೆ.