ರಾಮನ ಜನ್ಮಸ್ಥಳದಲ್ಲಿ ಮಸೀದಿ ಅಸ್ತಿತ್ವದಲ್ಲಿಯೇ ಇರಲಿಲ್ಲ -ಶಂಕರಾಚಾರ್ಯ
ಭೂಪಾಲ್: ರಾಮನ ಜನ್ಮಸ್ಥಳದಲ್ಲಿ ಮಸೀದಿ ಎಂದಿಗೂ ಅಸ್ತಿತ್ವದಲ್ಲಿಲ್ಲ ಎಂದು ಹೇಳುವ ಮೂಲಕ ದ್ವಾರಕಾ ಪೀಠ ಶಂಕರಾಚಾರ್ಯ ಸ್ವಾಮಿ ಸ್ವರೂಪನಂದ ಸರಸ್ವತಿ ಮತ್ತೆ ವಿವಾದ ಹುಟ್ಟುಹಾಕಿದ್ದಾರೆ.1992 ರಲ್ಲಿ ಬಲಪಂಥೀಯ ಕಾರ್ಯಕರ್ತರು ಕೆಡವಿದ್ದ ಮಸೀದಿಯು ದೇವಸ್ಥಾನವಾಗಿತ್ತು ಎಂದು ಶಂಕರಾಚಾರ್ಯ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು "ಅಯೋಧ್ಯೆಯ ರಾಮನ ಜನ್ಮಸ್ಥಳದಲ್ಲಿ ಎಂದಿಗೂ ಮಸೀದಿ ಅಸ್ತಿತ್ವದಲ್ಲಿರಲಿಲ್ಲ, ಕರಸೇವಕರು ದೇವಸ್ಥಾನವನ್ನು ಕೆಡವಿದ್ದಾರೆ ಹೊರತು ಮಸೀದಿಯನ್ನಲ್ಲ. ನ್ಯಾಯಾಲಯವು ಆದೇಶವನ್ನು ರದ್ದುಗೊಳಿಸಿದ ರಾಮಮಂದಿರವನ್ನು ನಂತರ ಮರುನಿರ್ಮಾಣ ಮಾಡಬಹುದು"ಎಂದು ತಿಳಿಸಿದರು.ಇದೇ ವೇಳೆ ಸನಾತನ ಧರ್ಮವನ್ನು ರಕ್ಷಿಸುವುದು ತಮ್ಮ ಕರ್ತವ್ಯ ಎಂದು ತಮ್ಮ ನಡೆಯನ್ನು ಅವರು ಸಮರ್ಥಿಸಿಕೊಂಡರು.
ಪ್ರಸ್ತುತ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಸುತ್ತಿದೆ.