Mpox Virus Clade 1b Strain Reported in Kerala: ಕಳೆದ ತಿಂಗಳು WHO ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ Mpox ವೈರಸ್‌ನ ಮೊದಲ ಪ್ರಕರಣವು ಭಾರತದಲ್ಲಿ ವರದಿಯಾಗಿದೆ. ವರದಿಯ ಪ್ರಕಾರ, ಕಳೆದ ವಾರ ಕೇರಳದಲ್ಲಿ ಒಬ್ಬ ವ್ಯಕ್ತಿಗೆ ಈ ಕಾಯಿಲೆ ಇರುವುದು ದೃಢಪಟ್ಟಿದೆ. ಮೂಲಗಳ ಪ್ರಕಾರ, ಇತ್ತೀಚೆಗೆ  UAEಯಿಂದ ಹಿಂದಿರುಗಿದ ಮಲಪ್ಪುರಂನ 38 ವರ್ಷದ ನಿವಾಸಿಗೆ 'ಕ್ಲೇಡ್ 1 ಬಿ ಸ್ಟ್ರೈನ್'(Clade 1b Strain) ಸೋಂಕು ಇರುವುದು ಪತ್ತೆಯಾಗಿದೆ. ರೋಗಿಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ರೀತಿಯ ಮೊದಲ ಪ್ರಕರಣ ಇದಾಗಿದೆ ಎಂದು ಅವರು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ರೋಗಲಕ್ಷಣ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪ್ರಾರಂಭಿಸಿ


ಏತನ್ಮಧ್ಯೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ವಿದೇಶದಿಂದ ಹಿಂದಿರುಗುವ ಜನರಿಗೆ ರೋಗಲಕ್ಷಣಗಳು ಕಂಡುಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ತಿಳಿಸಲು ಮತ್ತು ಸಾಧ್ಯವಾದಷ್ಟು ಬೇಗ ಚಿಕಿತ್ಸೆಯನ್ನು ಪ್ರಾರಂಭಿಸಲು ಮನವಿ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡಿರುವ ಅವರು, ʼವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಆಸ್ಪತ್ರೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲಿ ಪೀಡಿತ ವ್ಯಕ್ತಿಗಳಿಗೆ ಚಿಕಿತ್ಸೆ ಮತ್ತು ಪ್ರತ್ಯೇಕ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲೂ ಚಿಕಿತ್ಸೆ ಲಭ್ಯವಿದೆ ಅಂತಾ ಹೇಳಿದ್ದಾರೆ. 


ಇದನ್ನೂ ಓದಿ: ʼನಿಂಗಿದು ಬೇಕಿತ್ತಾ ಮಗಳೇ, ವಾಪಸ್ ಹೊಂಟೋಗು..ʼ; ಕನ್ನಡಿಗರನ್ನು ಕೆಣಕಿದ್ದ ಸುಗಂಧ್‌ ಶರ್ಮಾ ಕೆಲಸದಿಂದಲೇ ವಜಾ!


ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾ


ಹಲವು ಆಫ್ರಿಕನ್ ರಾಷ್ಟ್ರಗಳಲ್ಲಿ Mpox ಸೋಂಕನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ಹಿನ್ನೆಲೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ ಎಂದು ಜಾರ್ಜ್ ಹೇಳಿದ್ದಾರೆ. ಸೋಂಕು ಪ್ರಕರಣಗಳು ವರದಿಯಾಗಿರುವ ದೇಶಗಳಿಂದ ಬರುವ ಜನರು ಯಾವುದೇ ರೋಗಲಕ್ಷಣ ಹೊಂದಿದ್ದರೆ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.


ಸಂತ್ರಸ್ತರ ಮಾದರಿ ಸಂಗ್ರಹಿಸುವಾಗ ಎಚ್ಚರ!


2022ರಲ್ಲಿ ಮೊದಲ MPox ಪ್ರಕರಣ ವರದಿಯಾದಾಗಿನಿಂದ ಕೇರಳದಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಮಾಡಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಅದರಂತೆ ಪ್ರತ್ಯೇಕತೆ, ಮಾದರಿ ಸಂಗ್ರಹಣೆ ಮತ್ತು ಚಿಕಿತ್ಸೆಯನ್ನು ಖಾತ್ರಿಪಡಿಸಲಾಗಿದೆ. ಈ ‘ಪ್ರೊಟೋಕಾಲ್’ ಅನುಸರಿಸಲು ಪ್ರತಿ ಆಸ್ಪತ್ರೆಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು. ವೀಣಾ ಜಾರ್ಜ್ ಅವರು ಜನರಿಗೆ, ವಿಶೇಷವಾಗಿ ಆರೋಗ್ಯ ಕಾರ್ಯಕರ್ತರು ಪೀಡಿತ ವ್ಯಕ್ತಿಗಳ ಮಾದರಿಗಳನ್ನು ತೆಗೆದುಕೊಳ್ಳುವವರಿಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಕೇಳಿಕೊಂಡಿದ್ದಾರೆ.


ಇದನ್ನೂ ಓದಿ:  ಭಾರತದಲ್ಲಿ ಮೊದಲ ಎಂಪಾಕ್ಸ್‌ ಪತ್ತೆ


ಭಾರತದಲ್ಲಿ ಈವರೆಗೆ 30 ಪ್ರಕರಣಗಳು ವರದಿ


MPOXನ ಈ ರೂಪಾಂತರದಿಂದ ವಿಶ್ವ ಆರೋಗ್ಯ ಸಂಸ್ಥೆಯು MPOX ಅನ್ನು ಕಳೆದ ತಿಂಗಳು ಎರಡನೇ ಬಾರಿಗೆ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತು. ಇದಕ್ಕೂ ಮೊದಲು ರಾಷ್ಟ್ರ ರಾಜಧಾನಿಯಲ್ಲಿ ವರದಿಯಾದ MPox ಪ್ರಕರಣವು ಹರಿಯಾಣದ ಹಿಸಾರ್‌ನ ನಿವಾಸಿ 26 ವರ್ಷದ ವ್ಯಕ್ತಿಯದ್ದಾಗಿತ್ತು. ಈ ತಿಂಗಳ ಆರಂಭದಲ್ಲಿ ಅವರು ಪಶ್ಚಿಮ ಆಫ್ರಿಕಾದ 'ಕ್ಲೇಡ್ 2' ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದರು. WHO 2022ರಲ್ಲಿ MPOX ಅನ್ನು 'ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ' ಎಂದು ಘೋಷಿಸಿದಾಗಿನಿಂದ, ಭಾರತದಲ್ಲಿ 30 ಪ್ರಕರಣಗಳು ವರದಿಯಾಗಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.