ಜಾರ್ಖಂಡ್: ಆನೆಗಳ ದಾಳಿಗೆ ತಾಯಿ-ಮಗಳು ಬಲಿ
ಬುಧವಾರ ಮುಂಜಾನೆ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಲಗಿದ್ದ ರಾಜು ಅವರ ಮಣ್ಣಿನ ಮನೆಯ ಮೇಲೆ ಆನೆಗಳು ದಾಳಿ ನಡೆಸಿದ ಪರಿಣಾಮ ಈ ದುರ್ಘಟನೆ ನಡೆದಿದೆ.
ರಾಂಚಿ: ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಆನೆಗಳು ಮಣ್ಣಿನ ಮನೆಯನ್ನು ಧ್ವಂಸಗೊಳಿಸಿದ ಪರಿಣಾಮ ಓರ್ವ ಮಹಿಳೆ ಮತ್ತು ಆಕೆಯ ಒಂದು ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿಯೇ ಉಪ್ಪದ ಗ್ರಾಮಕ್ಕೆ ಪ್ರವೇಶಿಸಿದ ಆನೆಗಳ ಹಿಂಡೋದು ಭಾರೀ ದಾಂಧಲೆ ನಡೆಸಿ ಆಸ್ತಿಪಾಸ್ತಿಗೆ ಹಾನಿ ಮಾದಳು ಆರಂಭಿಸಿದ್ದವು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತಾದರೂ ಗ್ರಾಮಕ್ಕೆ ಬಂಧು ಯಾವುದೇ ಸಹಾಯ ಮಾಡಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬುಧವಾರ ಮುಂಜಾನೆ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಲಗಿದ್ದ ರಾಜು ಅವರ ಮಣ್ಣಿನ ಮನೆಯ ಮೇಲೆ ಆನೆಗಳು ದಾಳಿ ನಡೆಸಿದ ಪರಿಣಾಮ ಈ ದುರ್ಘಟನೆ ನಡೆದಿದೆ. "ಆನೆಗಳು ನಮ್ಮ ಮೆನ್ಯ ಮೇಲೆ ದಾಳಿ ನಡೆಸಿದಾಗ ಮಕ್ಕಳನ್ನು ಕರೆದುಕೊಂಡು ಹೊರಗೆ ಓಡಿ ತಪ್ಪಿಸಿಕೊಳ್ಳುವಂತೆ ಪತ್ನಿ ಒತ್ತಾಯಿಸಿದಳು. ನಾನು ಒಂದು ಮಗುವಿನೊಂದಿಗೆ ತಪ್ಪಿಸಿಕೊಂಡೆ. ಆದರೆ ಪತ್ನಿ ಪಾನೋ(30) ಮತ್ತು ಒಂದು ವರ್ಷದ ಮಗಳು ಹೊರಬರಲಾಗದೆ ಸಾವನ್ನಪ್ಪಿದರು" ಎಂದು ಪತಿ ರಾಜು ತಿಳಿಸಿದ್ದಾರೆ.
ಸದ್ಯ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದುವರೆಗೂ ಜಾರ್ಖಂಡ್ ನಲ್ಲಿ ಆನೆಗಳ ದಾಳಿಗೆ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.