ನವದೆಹಲಿ: ಶಿಕ್ಷಣದ ಮೇಲೆ ಎಲ್ಲರಿಗೂ ಸಮಾನ ಹಕ್ಕುಗಳಿವೆ. ದೇಶಾದ್ಯಂತ ಕಿವುಡ ಮತ್ತು ಮೂಕ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಪುಸ್ತಕ ಸಾಮಗ್ರಿಗಳನ್ನು  ಒದಗಿಸಲು ಕೇಂದ್ರ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಭಾರತೀಯ ಸಂಕೇತ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರ (ISLRTC)ಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ


COMMERCIAL BREAK
SCROLL TO CONTINUE READING

ಇದನ್ನು ಓದಿ- Online Classes ಹೇಗೆ ಸಾಧ್ಯ? NCERT ಸಮೀಕ್ಷಾ ವರದಿಯಿಂದ ಬಹಿರಂಗಗೊಂಡ ಸತ್ಯ ಏನು?


NCERT ಪಠ್ಯ ಪರಿಷ್ಕರಣೆ: ಆರ್ಟಿಕಲ್ 370ರ ವಿಷಯ ಸೇರ್ಪಡೆ


ಶಬ್ದಾವಳಿ ಅಭಿವೃದ್ಧಿಗೊಳ್ಳಲಿದೆ
ಇದುವರೆಗೆ ಮೂಕ ಹಾಗೂ ಕಿವುಡ ವಿದ್ಯಾರ್ಥಿಗಳಿಗೆ ಅಧ್ಯಯನ ನಡೆಸುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ, ಈ ಒಪ್ಪಂದದಿಂದ ವಿದ್ಯಾರ್ಥಿಗಳು ಭಾರತೀಯ ಸಾಂಕೇತಿಕ ಭಾಷೆಗಳಲ್ಲಿಯೂ ಕೂಡ ಅವರು ಅಧ್ಯಯನ ನಡೆಸಬಹುದು. ಇದರಿಂದ ಕೇವಲ ಅವರ ಶಬ್ದಾವಳಿ ಮಾತ್ರ ಅಭಿವೃದ್ಧಿಗೊಳ್ಳದೆ, ಕಾಂಟೆಕ್ಸ್ಟ್ ಅನ್ನು ಅರ್ಥಮಾಡಿಕೊಳ್ಳುವ ಅವರ ಕ್ಷಮತೆ ಕೂಡ ಹೆಚ್ಚಾಗಲಿದೆ. ಮೂಕ ಹಾಗೂ ಕಿವುಡ ಮಕ್ಕಳಲ್ಲಿ ಸಾಂಕೇತಗಳನ್ನು ಅರ್ಥಮಾಡಿಕೊಳ್ಳುವ ಕಲೆ ಚಿಕ್ಕಂದಿನಿಂದಲೇ ಇರುತ್ತದೆ.