ಜಪಾನಿನ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಒಕಿನಾವಾ, ತನ್ನ ನೂತನ ಸ್ಕೂಟರ್ 'ಪ್ರೇಯ್ಜ್' ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. 


COMMERCIAL BREAK
SCROLL TO CONTINUE READING

ಈ ಜಪಾನ್ ಕಂಪನಿಯು 2016 ರಲ್ಲಿ ಎಲೆಕ್ಟ್ರಿಕ್ ಸ್ಕೂಟಾರ್ ರಿಟ್ಜ್ ಅನ್ನು ಬಿಡುಗಡೆ ಮಾಡಿತ್ತು. ಆದರೆ ಇದೀಗ ಬಿಡುಗಡೆ ಮಾಡಿರುವ ದ್ಫ್ವಿಚಕ್ರ ವಾಹನ ಅದಕ್ಕಿಂತ ಉತ್ತಮವಾಗಿದ್ದು, ವಿನ್ಯಾಸ ಹಾಗು ನೂತನ ಅಂಶಗಳನ್ನು ಒಳಗೊಂಡಿದೆ. ಭಾರತದಲ್ಲಿ ಆಯು ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಒಕಿನೋವ ಕಂಪನಿ ಅತ್ಯುತ್ತಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಪರಿಚಯಿಸಿದ್ದು, ಇದರ ಶೋರೂಂ ಬೆಲೆ 59, 889 ಸಾವಿರ ರೂ. ಇದು, ಆನ್ ರೋಡ್ ಬೆಲೆ 66,000 ರೂ.ಗಳು.


ಈ ವಾಹನದ ಮುಖ್ಯ ವಿಶೇಷತೆ ಏನೆಂದರೆ, ಒಂದು ಕಿ.ಮೀ. ಚಲಿಸಲು ಕೇವಲ 10 ಪೈಸೆ ವೆಚ್ಚವಾಗಲಿದ್ದು, 10 ಕಿ.ಮೀ. ಗೆ ಕೇವಲ 1 ರೂ. ವೆಚ್ಚವಾಗಲಿದೆ.  ಈ ಮೂಲಕ ಪೆಟ್ರೋಲ್ ವಾಹನಗಳಿಗೆ ಸ್ಪಷ್ಟ ಬದಲಿ ಎಂದೇ ಹೇಳಬಹುದು. ಅಂದ ಹಾಗೆ ದೇಶದ ಅತ್ಯಂತ ವೇಗದ ಓಕಿನವಾ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಎಷ್ಟು ವೇಗದಲ್ಲಿ ಚಲಿಸುತ್ತದೆ ಗೊತ್ತೇನು? ಪ್ರತಿ ಗಂಟೆಗೆ ಗರಿಷ್ಠ 75 ಕೀ.ಮೀ. ವೇಗದಲ್ಲಿ ಸಂಚರಿಸಿದೆ.


ಈ ವಾಹನವನ್ನು ಎರಡು ಗಂಟೆ ಚಾರ್ಜ್ ಮಾಡಿದರೆ ಸಾಕು, ಕನಿಷ್ಟ 175 ರಿಂದ 200 ಕಿ.ಮೀ. ಚಲಿಸಬಹುದು. ಕಂಪನಿ ಹೇಳುವಂತೆ, ಈ ಸ್ಕೂಟರ್ ಪ್ರತಿ ಗಂಟೆಗೆ 75 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಅಲ್ಲದೆ ಇದರಲ್ಲಿ ಡಿಟ್ಯಾಚಬಲ್ ಬ್ಯಾಟರಿ ವ್ಯವಸ್ಥೆ ಇರುವುದರಿಂದ ಇದನ್ನು ಎಲ್ಲಿ ಬೇಕಾದರೂ ಕೊಂಡೊಯ್ದು ಚಾರ್ಜ್ ಮಾಡಬಹುದು. 


ಅಲ್ಲದೆ, ಹೈ ಸ್ಪೀಡ್, ಡಿಜಿಟಲ್ ಸ್ಪೀಡೋಮೀಟರ್, ಆ್ಯಪ್ ಸಂಯೋಜಿತ ಫ್ಯೂಚರ್, ತ್ವರಿತ ಚಾರ್ಜಿಂಗ್, ಗರಿಷ್ಠ ಮೈಲೇಜ್, ರಿಯರ್ ಸಸ್ಪೆನ್ಷನ್, ಸ್ಟೈಲಿಷ್ ಹೆಡ್‌ಲ್ಯಾಂಪ್ಸ್, ಎಲ್‌ಇಡಿ ಲೈಟ್ಸ್, 12 ಇಂಚುಗಳ ಚಕ್ರ, ಟೆಲಿಸ್ಕಾಪಿಕ್ ಫ್ರಂಟ್ ಸಸ್ಪೆನ್ಷನ್, ಡ್ಯುಯಲ್ ಫ್ರಂಟ್ ಡಿಸ್ಕ್, ಸಿಂಗಲ್ ರಿಯರ್ ಡಿಸ್ಕ್ ಬ್ರೇಕ್, ಎಲೆಕ್ಟ್ರಾನಿಕ್ ಅಸಿಸ್ಟನ್ ಬ್ರೇಕಿಂಗ್ ಸಿಸ್ಟಂ (E-ABS), ಸೈಡ್ ಸ್ಟ್ಯಾಂಡ್ ಸೇಫ್ಟಿ ಸೆನ್ಸಾರ್ ವಿಶೇಷತೆಗಳನ್ನೂ ಈ ವಾಹನ ಹೊಂದಿದೆ.