ಗ್ವಾಲಿಯರ್: ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲುವಿಗಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಗ್ವಾಲಿಯರ್ನ ಓರ್ವ ವ್ಯಕ್ತಿ 'ವೋಟಿ'ಗಾಗಿ ಪ್ರಚಾರ ಮಾಡುವ ಬದಲು 'ನೋಟಾ'ಗಾಗಿ ಪ್ರಚಾರ ಮಾಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಗ್ವಾಲಿಯರ್ ವಿಧಾನಸಭಾ ಕ್ಷೇತ್ರದ ವಿಷ್ಣು ಕಾಂತ್ ಶರ್ಮಾ ಹೋದಲ್ಲೆಲ್ಲಾ ಜನರನ್ನು 'NOTA' ಬಳಸುವಂತೆ ಉತ್ತೇಜಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜನ ಅಭ್ಯರ್ಥಿಯು ತನಗಾಗಿ ಮತ ಯಾಚಿಸುವ ಬದಲು 'NOTA' ಆಯ್ಕೆ ಮಾಡಲು ಏಕೆ ಹೇಳುತ್ತಿದ್ದಾರೆ ಎಂದು ಆಶ್ಚರ್ಯ ಪಡುತ್ತಿದ್ದಾರೆ. 


ಈ ಬಗ್ಗೆ ಮಾತನಾಡಿರುವ ವಿಷ್ಣುಕಾಂತ್ ಶರ್ಮಾ, ಗ್ವಾಲಿಯರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಬಲಶಾಲಿಯಾದ  ಜೈ ಭಾನ್ ಸಿಂಗ್ ಪವ್ಯಾಯ ಮತ್ತು ಕಾಂಗ್ರೆಸ್ ಪಕ್ಷದಿಂದ ಪರಮುಮ್ ತೋಮರ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. "ಉತ್ತಮ ಅಭ್ಯರ್ಥಿ ಅಲ್ಲ ಎಂದೆನಿಸಿದಲ್ಲಿ 'NOTA' ಆಯ್ಕೆ ಮಾಡುವುದು ಒಳ್ಳೆಯದು, ಹಾಗಾಗಿ ನಾನು 'NOTA'ವನ್ನು ಉತ್ತೇಜಿಸುತ್ತಿದ್ದೇನೆ" ಎಂದಿದ್ದಾರೆ.


ಅಷ್ಟೇ ಅಲ್ಲದೆ ಶರ್ಮಾ 'NOTA'ವನ್ನು ಉತ್ತೇಜಿಸಿ ಮಂಗಳವಾರ ರ್ಯಾಲಿಯನ್ನೂ ಮಾಡಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಗೆ ಪ್ಹೂಲ್ಬಾಗ್ ನಿಂದ ಪ್ರಾರಂಭವಾದ ರ್ಯಾಲಿ ಮಧ್ಯಾಹ್ನ 2 ಗಂಟೆಗೆ ಲಕ್ಷ್ಮೀಬಾಯಿ ಸಮಾಧಿಯ ಬಳಿ ಮುಕ್ತಾಯಗೊಂಡಿತು. ಈ ಸಮಯದಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ್ದವರು ಪೋಸ್ಟರ್ ಅನ್ನು ಕೈಗೆ ತೆಗೆದುಕೊಂಡು, ಭ್ರಷ್ಟ ರಾಜಕಾರಣಿಗಳಿಗೆ ಮತ ಹಾಕುವ ಬದಲು 'NOTA' ಚಲಾಯಿಸುವುದು ಉತ್ತಮ ಎನ್ನುತ್ತಿದ್ದರು. 


ಶರ್ಮಾ ಕೇವಲ ಈ ಪ್ರದೇಶದಲ್ಲಿ ಮಾತ್ರವಲ್ಲದೆ ಸೋಮವಾರ ನಗರದ ನಾಕಾ, ಕೋಟೇಶ್ವರ, ಆನಂದ್ನಗರ್, ಮೋತಿಜಿಲ್ ಮತ್ತು ವಿನಯ್ ನಗರಕ್ಕೆ ಭೇಟಿ ನೀಡಿ ಮತ್ತು 'ನೋಟಾ'ದ ಬಗ್ಗೆ ಪ್ರಚಾರ ಮಾಡಿದ್ದಾರೆ.


ವಿಷ್ಣುಕಾಂತ್ ಶರ್ಮಾ ತಮಗಾಗಿ ಮತಗಳನ್ನು ಕೇಳುತ್ತಿಲ್ಲ. ಆದರೆ ಜನರಲ್ಲಿ 'ನೋಟಾ'ದ ಬಗ್ಗೆ ಜಾಗೃತಿ ಮೂಡಿಸುತ್ತಾ ಅಭ್ಯರ್ಥಿಗಳು ತಮ್ಮ ಗ್ರಹಿಕೆಗೆ ಉತ್ತಮವಲ್ಲ  ಎಂದೆನಿಸಿದರೆ ಅವರನ್ನು ಆಯ್ಕೆ ಮಾಡಬಾರದು. ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಗಮನ ಹರಿಸುವ ಸರಿಯಾದ ವ್ಯಕ್ತಿ ಎನಿಸಿದರೆ ಮಾತ್ರ ಅವರನ್ನು ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಿ ಎಂದು ಅವರು ಅರಿವು ಮೂಡಿಸುತ್ತಿದ್ದಾರೆ. ಗಮನಾರ್ಹವಾಗಿ ಒಂದು ಮತದ ಬೆಲೆ ಏನು, ಅದು ಎಷ್ಟು ಶಕ್ತಿಯನ್ನು ಹೊಂದಿದೆ ಎಂಬುದರ ಬಗ್ಗೆ ಶರ್ಮಾ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ.