ಮಧ್ಯಪ್ರದೇಶ ಪೋಲಿಸ್ ನೇಮಕಾತಿ: ಒಂದೇ ರೂಂ ನಲ್ಲಿ ಮಹಿಳೆ ಮತ್ತು ಪುರುಷರಿಗೆ ದೈಹಿಕ ಪರೀಕ್ಷೆ
ಭಿಂದ್: ಮಧ್ಯಪ್ರದೇಶದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯ ಸಂದರ್ಭದಲ್ಲಿ ಒಂದೇ ರೂಮಿನಲ್ಲಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆಯನ್ನು ನಡೆಸಿರುವ ಆಘಾತಕಾರಿ ಸಂಗತಿ ಬುಧವಾರದಂದು ಭಿಂದ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಈ ಘಟನೆಯು ಮಧ್ಯಪ್ರದೇಶದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅಭ್ಯರ್ಥಿಗಳ ಅಭ್ಯರ್ಥಿಗಳು ಏಪ್ರಿಲ್ 28 ರಂದು ದೈಹಿಕ ಪರೀಕ್ಷೆಯಲ್ಲಿ ತಮ್ಮ ಎದೆಯ ಮೇಲೆ ಜಾತಿಯ ಮುದ್ರೆ ಸ್ಟ್ಯಾಂಪ್ ಹಾಕಿ ವಿವಾಧ ಸೃಷ್ಟಿಯಾದ ನಂತರ ಈ ಘಟನೆ ನಡೆದಿದೆ.
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯ ಭಾಗವಾಗಿ ಈ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದ್ದು. ಈ ಸಂದರ್ಭದಲ್ಲಿ ದೈಹಿಕ ಪರೀಕ್ಷೆಯನ್ನು ಮಹಿಳೆಯರಿಗೂ ಕೂಡ ಪುರುಷ ವೈದ್ಯರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದೈಹಿಕ ಪರೀಕ್ಷೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, 217 ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಪೋಲಿಸ್ ಉದ್ಯೋಗಗಳಲ್ಲಿನ ತರಬೇತಿಗಾಗಿ ಆಯ್ಕೆ ಮಾಡಲಾಗಿದೆ .ಇದರಲ್ಲಿ ಒಟ್ಟು 18 ಮಹಿಳೆ ಮತ್ತು 21 ಪುರುಷ ಅಭ್ಯರ್ಥಿಗಳನ್ನು ಪರೀಕ್ಷಿಸಲಾಯಿತು. ಎಂದು ತಿಳಿದುಬಂದಿದೆ.