ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತ ಸೋಮವಾರದಿಂದ ಪ್ರಾರಂಭವಾಗಿದೆ. ಈ ಅಧಿವೇಶನದಲ್ಲಿ ಭಾಗವಹಿಸಲು, ಎಲ್ಲಾ ಸಂಸದರು ಕರೋನಾದಿಂದ ರಕ್ಷಿಸಲು ವಿಭಿನ್ನ ಮಾಸ್ಕ್ (Mask)ಗಳನ್ನು ಧರಿಸಿ ಆಗಮಿಸಿದರು. ಆದರೆ ರಾಜ್ಯಸಭಾ ಸಂಸದ ಡಾ.ನರೇಂದ್ರ ಜಾಧವ್ (Dr. Narendra Jadhav)ಅವರ ಮಾಸ್ಕ್ ಸೋಮವಾರ ಚರ್ಚೆಯ ಕೇಂದ್ರವಾಯಿತು. ಜನರು ಈ ಉತ್ತಮ ಗುಣಮಟ್ಟದ ಮಾಸ್ಕ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಪ್ರತಿಕ್ರಿಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಡಾ.ಜಾಧವ್ ಸೋಮವಾರ ಹೆಚ್‌ಪಿಎ ಮಾಸ್ಕ್ ಧರಿಸಿ ಆಗಮಿಸಿದರು:
ಮಾಹಿತಿಯ ಪ್ರಕಾರ, ಡಾ.ನರೇಂದ್ರ ಜಾಧವ್ (Dr. Narendra Jadhav) ಅವರನ್ನು 2016 ರಲ್ಲಿ ರಾಜ್ಯಸಭೆಗೆ ರಾಷ್ಟ್ರಪತಿಗಳು ನಾಮಕರಣ ಮಾಡಿದರು. ಇವರು ನಿನ್ನೆ ಸಂಸತ್ತಿಗೆ ಆಗಮಿಸುವ ವೇಳೆ ಹೈ ಎಫಿಷಿಯೆನ್ಸಿ ಪಾರ್ಟಿಕುಲೇಟ್ ಏರ್ (ಹೆಚ್‌ಪಿಎ) ಮಾಸ್ಕ್ ಧರಿಸಿ ಆಗಮಿಸಿದರು. ಈ ಮಾಸ್ಕ್ (Mask)ನಲ್ಲಿ, ಅವರ ಬಾಯಿಯೊಂದಿಗೆ ಕಣ್ಣು ಮತ್ತು ಮೂಗು ಸಹ ಮುಚ್ಚಲ್ಪಟ್ಟಿತು. ಈ ಮಾಸ್ಕ್ 99.7% ಸಾಮರ್ಥ್ಯವನ್ನು ಹೊಂದಿದೆ ಎಂದು ಡಾ. ಜಾಧವ್ ಹೇಳಿದರು. ಇದರರ್ಥ ಈ ಮಾಸ್ಕ್ ಹೆಚ್ಚಿನ ಕಣಗಳನ್ನು ದೇಹಕ್ಕೆ ಪ್ರವೇಶಿಸುವುದನ್ನು ತಡೆಯುತ್ತದೆ. ಈ ಫಿಲ್ಟರ್ ಮಾಸ್ಕ್ ಅನ್ನು ಮಾಜಿ ಸಂಸದ ವಿಶ್ವೇಶ್ವರ ರೆಡ್ಡಿ ವಿನ್ಯಾಸಗೊಳಿಸಿದ್ದಾರೆ ಎಂದು ಅವರು ಹೇಳಿದರು.


Social Media) ಒಂದು ಸುತ್ತಿನ ತಮಾಷೆಯ ಕಾಮೆಂಟ್ಗಳು ಪ್ರಾರಂಭವಾದವು. ಎಂಪಿ ಜಿ ಬಹುಶಃ ಸ್ಕೂಬಾ ಡೈವಿಂಗ್‌ಗೆ ಹೋಗುತ್ತಿದ್ದಾರೆ ಎಂದು ಹಲವರು ಕಾಲೆಳೆದರು. ಹೆಚ್‌ಪಿಎ ಫಿಲ್ಟರ್ ಮಾಸ್ಕ್ ಗಳಿರುವುದು ಮಾಲಿನ್ಯಕಾರಕ ಅಂಶಗಳಿಗೆ, ವೈರಸ್‌ಗಳಿಗೆ ಅಲ್ಲ ಎಂದು ಕೆಲವರು ಹೇಳಿದರು.


ಇದನ್ನೂ ಓದಿ - ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ವ್ಯಕ್ತಿಗೆ ಕೊರೊನಾ ಧೃಢ ...!


'ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸಿದ್ದರೆ ಚೆನ್ನಾಗಿತ್ತು'
ಕೆಲ ನೆಟ್ಟಿಗರು ಇಂತಹ ಮಾಸ್ಕ್ ಗಳ ಸಾಮೂಹಿಕ ಉತ್ಪಾದನೆಯನ್ನು ಪ್ರಾರಂಭಿಸಿ. ಇದರಿಂದ ಸಾಮಾನ್ಯ ಜನರು ಸಹ ಅದರ ಲಾಭವನ್ನು ಪಡೆಯಬಹುದು ಎಂದು ಹೇಳಿದ್ದಾರೆ.


Coronavirus : ಇಲ್ಲೀಗ ಮಾಸ್ಕ್ ಧರಿಸುವುದು ಅನಿವಾರ್ಯವಲ್ಲ


'ಹೆಲ್ಮೆಟ್ ಧರಿಸುವುದು :
ಈ ಮಾಸ್ಕ್ ಬದಲು ಹೆಲ್ಮೆಟ್ ಧರಿಸಿ ಹೊರನಡೆದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಇನ್ನೋರ್ವ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.