ನವದೆಹಲಿ: ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧೀ ಕಥುವಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪ್ರಧಾನಿ ತಾಳಿರುವ ಮೌನ ನಿಲುವಿಗೆ ಕಿಡಿ ಕಾರಿದ್ದಾರೆ.



COMMERCIAL BREAK
SCROLL TO CONTINUE READING

ತಮ್ಮ ಟ್ವಿಟ್ಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧೀ "ಪ್ರಧಾನಮಂತ್ರಿಗಳೇ ನಿಮ್ಮ ಮೌನವನ್ನು ಒಪ್ಪಲು ಸಾಧ್ಯವಿಲ್ಲ 
1, ಮಹಿಳೆ ಮತ್ತು ಮಕ್ಕಳ ವಿರುದ್ದ ಹೆಚ್ಚುತ್ತಿರುವ ಹಿಂಸೆಯ ಬಗ್ಗೆ ನಿಮಗೆ ಏನನಿಸುತ್ತದೆ?
2, ಅತ್ಯಾಚಾರಿಗಳು,ಕೊಲೆಗಾರರನ್ನು ಸರ್ಕಾರ ರಕ್ಷಿಸಲ್ಪಟ್ಟಿದೆ.


ಭಾರತ ನಿರೀಕ್ಷಿಸುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.



ಈ ರಾಹುಲ್ ಗಾಂಧಿಯವರ ಹೇಳಿಕೆಯು ದೆಹಲಿಯಲ್ಲಿ ನಡೆದ ಹೇಳಿಕೆಯು ಕ್ಯಾಂಡಲ್ ಲೈಟ್ ಮೆರವಣಿಗೆಯ ನಂತರ ಬಂದಿದೆ.


ಕಥುವಾ ಘಟನೆಯ ಕುರಿತಾಗಿ ದೇಶವ್ಯಾಪಿ ಪ್ರತಿಭಟನೆಗಳು ವ್ಯಕ್ತವಾಗುತ್ತಿದ್ದು, ಇದುವರೆಗೂ ಪ್ರಧಾನಮಂತ್ರಿಗಳು ಈ ವಿಚಾರದ ಬಗ್ಗೆ ಮಾತನಾಡದಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶವ್ಯಕ್ತಪಡಿಸಿವೆ.ಗುರುವಾರದಂದು ಮೇಣದ ದೀಪದ ಮೆರವಣಿಗೆಯಲ್ಲಿ ರಾಹುಲ್ ಗಾಂಧೀ ತಮ್ಮ ಸಹೋದರಿ ಪ್ರಿಯಾಂಕ್ ಮತ್ತು ರಾಬರ್ಟ್ ವಾದ್ರಾ  ಜೊತೆ ಭಾಗಿಯಾಗಿ ಆರೋಪಿಗಳನ್ನು ಬಂಧಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.