ನವದೆಹಲಿ: ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿದಿರುವ ಎಂ.ಎಸ್.ಧೋನಿ ಈಗ ಪ್ಯಾರಾಚೂಟ್  ರೆಜಿಮೆಂಟ್‌ನ ಪ್ರಾದೇಶಿಕ ಸೇನಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಈ ನಿರ್ಧಾರಕ್ಕೆ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಸಂಸದ ಎಂ.ಎಸ್.ಧೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಾರತ ತಂಡವು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ನಲ್ಲಿ ನಿರ್ಗಮಿಸಿತ್ತು. ಇದಾದ ನಂತರ ಮಹೇಂದ್ರ ಸಿಂಗ್ ಧೋನಿ ಅವರು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಾವು ಲಭ್ಯವಿಲ್ಲವೆಂದು ಹೇಳಿ ಕೆಲವು ತಿಂಗಳುಗಳ ಕಾಲ ಸೈನ್ಯದಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಇಚ್ಛೆ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಈಗ ತಮ್ಮ ನಿರ್ಧಾರಕ್ಕೆ ಅನುಗುಣವಾಗಿ ಅವರು ಸಂಪೂರ್ಣವಾಗಿ ಸೈನ್ಯದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ


2011 ರ ವಿಶ್ವಕಪ್ ವಿಜೇತ ತಂಡದ ಸಹ ಆಟಗಾರ ಗೌತಮ್ ಗಂಭೀರ್ ಅವರು ಭಾರತದ ಮಾಜಿ ನಾಯಕನ ನಿರ್ಧಾರವನ್ನು ಬೆಂಬಲಿಸಿದ್ದಾರೆ ಮತ್ತು ಧೋನಿ  ಅವರು ಸೈನ್ಯಕ್ಕೆ ಸೇವೆ ಸಲ್ಲಿಸುವ ಬಗ್ಗೆ ಎಷ್ಟು ಗಂಭೀರರಾಗಿದ್ದಾರೆಂದು ತೋರಿಸಿದೆ ಎಂದು ಹೇಳಿದ್ದಾರೆ.


ಖಾಸಗಿ ಚಾನಲ್ ವೊಂದಕ್ಕೆ ಮಾತನಾಡಿದ ಗೌತಮ್ ಗಂಭೀರ್ ಅವರು "ನಾನು ಇದನ್ನು ಯಾವಾಗಲೂ ಹೇಳಿದ್ದೆ, ನಾವು ರಕ್ಷಣಾ ಸಿಬ್ಬಂದಿಯ ಸಮವಸ್ತ್ರವನ್ನು ಧರಿಸಬಾರದು, ನಾವು ಅವರಿಗೆ ಏನಾದರೂ ಮಾಡಬೇಕು, ನಂತರ ನಾವು ಅದನ್ನು ಧರಿಸಬೇಕು. ಇಂದು ಎಂಎಸ್ ಧೋನಿ ಅವರು ಸಮವಸ್ತ್ರಕ್ಕಾಗಿ ಎಷ್ಟು ಗಂಭೀರವಾಗಿರುವುದನ್ನು ಇಡೀ ದೇಶಕ್ಕೆ ತೋರಿಸಿದ್ದಾರೆ. ಕಾಶ್ಮೀರಕ್ಕೆ ಹೋಗಿ ಸೈನ್ಯಕ್ಕೆ ಸೇವೆ ಸಲ್ಲಿಸಲು, ಗಸ್ತು ತಿರುಗಲು ಅವರು ತೆಗೆದುಕೊಂಡ ನಿರ್ಧಾರದ ಮೂಲಕ ಇದು ಸ್ಪಷ್ಟವಾಗಿದೆ, ಇದು ಯುವಕರನ್ನು ಪ್ರೇರೇಪಿಸುವ ಐತಿಹಾಸಿಕ ಹೆಜ್ಜೆಯಾಗಿದೆ ಮತ್ತು ಅವರು ಒಂದು ದೊಡ್ಡ ರೋಲ್ ಮಾಡೆಲ್' ಎಂದು ಮೆಚ್ಚುಗೆ ಸೂಚಿಸಿದ್ದಾರೆ.