ರಾಂಚಿ: ಜೀವ ಬೆದರಿಕೆಯ ಕಾರಣವೊಡ್ಡಿ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ  ಶಸ್ತ್ರಾಸ್ತ್ರ ಪರವಾನಗಿಗಾಗಿ  ಅರ್ಜಿ ಸಲ್ಲಿಸಿದ್ದಾರೆ. ಮನೆಯಲ್ಲಿ ಹೆಚ್ಚಿನ ವೇಳೆ ಏಕಾಂಗಿಯಾಗಿರುವುದರಿಂದ  ತಮಗೆ ಪಿಸ್ತೂಲ್ ಅಥವಾ 0.32 ಬೋರ್ ರಿವಾಲ್ವರ್ಗೆ ಪರವಾನಗಿ ನೀಡಬೇಕೆಂದು ಜಾರ್ಖಂಡ್ ಪೊಲೀಸರಿಗೆ ಕೇಳಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸಾಕ್ಷಿ ಧೋನಿ ತನ್ನ ಅರ್ಜಿಯಲ್ಲಿ  ವೈಯಕ್ತಿಕ ಕೆಲಸಕ್ಕಾಗಿ ಒಬ್ಬಳೆ ಹೋಗಬೇಕಾಗಿದ್ದು ಇದರಿಂದ ತನಗೆ ಜೀವ ಭಯವಿದೆ ಆದ್ದರಿಂದ ತನಗೆ ಆಕೆ ತಕ್ಷಣ ಶಸ್ತ್ರಾಸ್ತ್ರ ಪರವಾನಗಿಯನ್ನು ನೀಡಬೇಕು ಎಂದು ಅರ್ಜಿಯಲ್ಲಿ ವಿನಂತಿಸಿಕೊಂದಿದ್ದಾಳೆ. ಈ ಅರ್ಜಿಯನ್ನು ರಾಂಚಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಸಲ್ಲಿಸಲಾಗಿದ್ದು ಅದನ್ನು ಈಗ  ಅರ್ಗೋರಾ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.


ಅರ್ಗೋರಾ ಪೊಲೀಸ್ ಠಾಣೆಯ ವರದಿಯಲ್ಲಿ ಸಾಕ್ಷಿ ಧೋನಿ ವಿರುದ್ಧ ಯಾವುದೇ ಪ್ರಕರಣ ಅಥವಾ ದೂರು ಇಲ್ಲ ಎಂದು ಹೇಳಿಕೆ ನೀಡಿದ್ದು, ಇದಾದ ನಂತರ ಅರ್ಜಿಯನ್ನು ಪೊಲೀಸ್ ಸೂಪರಿಂಟೆಂಡೆಂಟ್ ಆಫ್ ಪೋಲಿಸ್ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.