ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಮುಖೇಶ್ ಅಂಬಾನಿ...!
ಒಂದು ಕಡೆ ಕಾಂಗ್ರೆಸ್ ಪಕ್ಷ ರಫೇಲ್ ಒಪ್ಪಂದದ ವಿಚಾರವಾಗಿ ಅನಿಲ್ ಅಂಬಾನಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ಈಗ ರಿಲಯನ್ಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಈಗ ಮುಂಬೈ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೋರಾ ಅವರನ್ನು ಬೆಂಬಲಿಸಿದ್ದಾರೆ.
ನವದೆಹಲಿ: ಒಂದು ಕಡೆ ಕಾಂಗ್ರೆಸ್ ಪಕ್ಷ ರಫೇಲ್ ಒಪ್ಪಂದದ ವಿಚಾರವಾಗಿ ಅನಿಲ್ ಅಂಬಾನಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ಈಗ ರಿಲಯನ್ಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಈಗ ಮುಂಬೈ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೋರಾ ಅವರನ್ನು ಬೆಂಬಲಿಸಿದ್ದಾರೆ.
ಮಿಲಿಂದ್ ದಿಯೋರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವೀಡಿಯೋವೊಂದರಲ್ಲಿ "ಮಿಲಿಂದ್ ದಕ್ಷಿಣ ಮುಂಬೈಯ ವ್ಯಕ್ತಿಯಾಗಿದ್ದಾರೆ...ಮಿಲಿಂದ್ ಅವರು ದಕ್ಷಿಣ ಬಾಂಬೆ ಕ್ಷೇತ್ರದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪರಿಸರ ವ್ಯವಸ್ಥೆಯ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದಾರೆ" ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
ಮಿಲಿಂದ್ ಡಿಯೋರಾ ತಮ್ಮ ಟ್ವೀಟ್ ನಲ್ಲಿ "ಸಣ್ಣ ಅಂಗಡಿಯವರಿಂದ ಹಿಡಿದು ಬೃಹತ್ ಕೈಗಾರಿಕೋದ್ಯಮಿಗಳೆಲ್ಲರಿಗೂ ದಕ್ಷಿಣ ಮುಂಬೈ ಎಂದರೆ ಬಿಸಿನೆಸ್. ಆದ್ದರಿಂದ ಎಂದು ನಾವು ಮುಂಬೈಗೆ ಮತ್ತೆ ಬುಸಿನೆಸ್ ಮರಳಿ ತರುತ್ತೇವೆ. ನಮ್ಮ ಯುವಜನರಿಗೆ ಉದ್ಯೋಗವನ್ನು ಸೃಷ್ಟಿಸಬೇಕಾಗಿದೆ " ಎಂದು ಹೇಳಿದ್ದಾರೆ.
ಈಗ ಇದೇ ಮೊದಲ ಬಾರಿಗೆ ಮುಕೇಶ್ ಅಂಬಾನಿ ಕಾಂಗ್ರೆಸ್ ಅಭ್ಯರ್ಥಿ ಪರ ಬಹಿರಂಗವಾಗಿ ಬೆಂಬಲಿಸಿರುವುದು ಅಚ್ಚರಿ ಸಂಗತಿಯಾಗಿದೆ.