Awadesh Rai Murder Case: ವಾರಣಾಸಿಯ ಎಂಪಿಎಂಎಲ್ಎ ನ್ಯಾಯಾಲಯ ಮುಕ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ವಾರಾಣಸಿಯ 32 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ-ಶಾಸಕ ನ್ಯಾಯಾಲಯ ಸೋಮವಾರ ಈ ತೀರ್ಪು ನೀಡಿದೆ. ಅವಧೇಶ್ ರಾಯ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಣಾಸಿ ನ್ಯಾಯಾಲಯ ಸೋಮವಾರ ಈ ತೀರ್ಪು ನೀಡಿದ್ದು, ಇದರೊಂದಿಗೆ ನ್ಯಾಯಾಲಯ ಅನ್ಸಾರಿಗೆ ಒಂದು ಲಕ್ಷ ರೂಪಾಯಿ ದಂಡ ಕೂಡ ವಿಧಿಸಿದೆ.


COMMERCIAL BREAK
SCROLL TO CONTINUE READING

ಅವಧೇಶ್ ರಾಯ್  ಹತ್ಯೆ ಪ್ರಕರಣದಲ್ಲಿ ವಾರಣಾಸಿಯ ಎಂಪಿ ಎಂಎಲ್ಎ ನ್ಯಾಯಾಲಯ ಸೋಮವಾರ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ಮಧ್ಯಾಹ್ನದ ನಂತರ ಈ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಕೊಲೆ ಪ್ರಕರಣದಲ್ಲಿ ಆರೋಪಿ ಮುಕ್ತಾರ್ ಅನ್ಸಾರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರೊಂದಿಗೆ ನ್ಯಾಯಾಲಯ ಮಾಜಿ ಶಾಸಕನಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಮುಕ್ತಾರ್ ಅನ್ಸಾರಿಗೆ ಐಪಿಸಿ ಸೆಕ್ಷನ್ 302ರ ಅಡಿ, 32 ವರ್ಷಗಳ ಹಿಂದಿನ ಪ್ರಕರಣದ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.


ಅವಧೇಶ್ ರೈ ಅವರನ್ನು ಆಗಸ್ಟ್ 3, 1991 ರಂದು ಹತ್ಯೆಗೈಯಲಾಗಿತ್ತು. ಆಗ ಅವಧೇಶ್ ರಾಯ್ ಅವರು ತಮ್ಮ ಕಿರಿಯ ಸಹೋದರ ಹಾಗೂ ಹಾಲಿ ಕಾಂಗ್ರೆಸ್ ನಾಯಕ ಅಜಯ್ ರಾಯ್ ಅವರ ಮನೆಯ ಹೊರಗೆ ನಿಂತಿದ್ದರು. ಈ ಸಮಯದಲ್ಲಿ ಒಂದು ಮಾರುತಿ ವ್ಯಾನ್ ಅಲ್ಲಿಗೆ ಬಂದಿತು ಮತ್ತು ಅನೇಕ ಜನರು ಆ ವ್ಯಾನ್‌ನಿಂದ ಇಳಿದರು. ಆ ಜನರು ಅವಧೇಶ್ ರಾಯ್ ಮೇಲೆ ಗುಂಡು ಹಾರಿಸಿದರು. ಗುಂಡಿನ ಸದ್ದು ಸುತ್ತಲಿನ ಪ್ರದೇಶದಲ್ಲೆಲ್ಲಾ ಪ್ರತಿಧ್ವನಿಸಿತ್ತು.


ಇದನ್ನೂ ಓದಿ-Balasore Train Accident: 275 ಸಾವುಗಳಿಗೆ ಯಾರು ಹೊಣೆಗಾರರು? ಸಿಬಿಐ ಹುಡುಕಲಿದೆ ಉತ್ತರ, ರೇಲ್ವೆ ಸಚಿವರ ಶಿಫಾರಸ್ಸು


ಅಜಯ್ ರಾಯ್ ಹೇಳಿದ್ದೇನು?
ಇನ್ನೊಂದೆಡೆ, ನ್ಯಾಯಾಲಯದ ತೀರ್ಪು ಬರುವ ಮುನ್ನ ಮಾತನಾಡಿರುವ, ದಿವಂಗತ ಅವಧೇಶ್ ರಾಯ್ ಅವರ ಕಿರಿಯ ಸಹೋದರ ಮತ್ತು ಕಾಂಗ್ರೆಸ್ ನಾಯಕ ಅಜಯ್ ರಾಯ್ , "ಅವರ 32 ವರ್ಷಗಳ ಕಾಯುವಿಕೆ ಇಂದಿಗೆ ಅಂತ್ಯವಾಗಲಿದೆ ಮತ್ತು ತಮಗೆ ನ್ಯಾಯ ಸಿಗುವ ಭರವಸೆ ಇದೆ" ಎಂದು ಹೇಳಿದ್ದರು. ವಾರಣಾಸಿಯ ಚೇತ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಲಾಹುರಾಬೀರ್ ಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡ ಅವಧೇಶ್ ರಾಯ್ ಹತ್ಯೆಗೀಡಾಗಿದ್ದರು.


ಇದನ್ನೂ ಓದಿ-Bhagalpur Bridge Collapse: ಕೆಲವೇ ಸೆಕೆಂಡ್ ಗಳಲ್ಲಿ ಗಂಗಾನದಿಗೆ ಆಹುತಿಯಾದ 1750 ಕೋಟಿ ರೂ. ವೆಚ್ಚದ ಸೇತುವೆ... ವಿಡಿಯೋ ನೋಡಿ


ಆ ದಿನ ಮುಂಜಾನೆ ತುಂತುರು ಮಳೆ ಸುರಿಯುತ್ತಿತ್ತು. ಮಾರುತಿ ವ್ಯಾನ್‌ನಿಂದ ಕೆಳಗಿಳಿದವರ ಗುಂಡಿನ ದಾಳಿಗೆ  ಅವಧೇಶ್ ರಾಯ್ ಗಾಯಗೊಂಡಿದ್ದರು ಮತ್ತು ನಂತರ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಅವರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಮಾಜಿ ಶಾಸಕ ಅಬ್ದುಲ್ ಕಲಾಂ ಜೊತೆಗೆ ಮುಖ್ತಾರ್ ಅನ್ಸಾರಿ, ಭೀಮ್ ಸಿಂಗ್, ಕಮಲೇಶ್ ಸಿಂಗ್, ರಾಕೇಶ್ ವಿರುದ್ಧ ಚೆಟ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.