Attorney General : ದೇಶದ ಭಾರತದ ಅಟಾರ್ನಿ ಜನರಲ್ ಆಗಿ ಮತ್ತೆ ಹಿರಿಯ ವಕೀಲ ಮುಕುಲ್ ರೋಹಟಗಿ  ಆಯ್ಕೆಯಾಗಿದ್ದಾರೆ. ಅವರು ಅಕ್ಟೋಬರ್ 1 ರಿಂದ ದೇಶದ ಅತ್ಯುನ್ನತ ಕಾನೂನು ಅಧಿಕಾರಿಯಾಗಿ ತಮ್ಮ ಎರಡನೇ ಅವಧಿಯನ್ನು ಅಧಿಕಾರವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ.


COMMERCIAL BREAK
SCROLL TO CONTINUE READING

91 ವರ್ಷದ ವೇಣುಗೋಪಾಲ್ ಅವರು ಜೂನ್ 30, 2017 ರಂದು ದೇಶದ ಉನ್ನತ ಕಾನೂನು ಅಧಿಕಾರಿಯಾಗಿ ನೇಮಕಗೊಂಡಿದ್ದರು. ರೋಹಟಗಿ ಅವರು ದೇಶದ ಉನ್ನತ ನ್ಯಾಯಾಲಯದ ವಕೀಲರಲ್ಲಿ ಒಬ್ಬರು ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಉನ್ನತ ಹುದ್ದೆ ವಹಿಸಿಕೊಳ್ಳಲು ಅವರು ಒಪ್ಪಿಗೆ ನೀಡಿದ್ದಾರೆ. ಅವರು ಮೊದಲು ಮೂರು ವರ್ಷಗಳ ಅವಧಿಗೆ 2014 ರಲ್ಲಿ ಅಟಾರ್ನಿ ಜನರಲ್ ಆಗಿ ನೇಮಕಗೊಂಡಿದ್ದರು. ಪ್ರಸ್ತುತ ಅವಧಿ ಮುಗಿದ ನಂತರ ಉನ್ನತ ಕಾನೂನು ಅಧಿಕಾರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ವೇಣುಗೋಪಾಲ್ ಇತ್ತೀಚೆಗೆ ಹೇಳಿದ್ದರು. ಅಟಾರ್ನಿ ಜನರಲ್‌ ಆದವರಿಗೆ ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸುವ ಹಕ್ಕಿದೆ.


ಇದನ್ನೂ ಓದಿ : Mehbooba Mufti : ಜ್ಞಾನವಾಪಿ ಬಗ್ಗೆ ನ್ಯಾಯಾಲಯ ತೀರ್ಪ : ವಿವಾದಾತ್ಮಕ ಹೇಳಿಕೆ ನೀಡಿದ ಮೆಹಬೂಬಾ ಮುಫ್ತಿ


ಈ ವರ್ಷದ ಜೂನ್‌ನಲ್ಲಿ ವೇಣುಗೋಪಾಲ್ ಅವರ ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರ ಮೂರು ತಿಂಗಳ ಕಾಲ ವಿಸ್ತರಿಸಿತು. ಇನ್ನೂ ಮೂರು ತಿಂಗಳು ಈ ಹುದ್ದೆಯಲ್ಲಿ ಮುಂದುವರಿಯುವಂತೆ ಸರ್ಕಾರ ಮನವಿ ಮಾಡಿತ್ತು. ಸರ್ಕಾರವು ಹೊಸ ಮುಖವನ್ನು ಸಿಗುವವರಿಗೆ ಅವರಿಗೆ ಸೆಪ್ಟೆಂಬರ್ 30 ರವರೆಗೆ ಈ ಹುದ್ದೆಯಲ್ಲಿ ಉಳಿಯಲು ಒಪ್ಪಿಕೊಂಡಿದ್ದರು. ಇದೀಗ 67 ವರ್ಷದ ರೋಹಟಗಿ ಅವರು ಅಕ್ಟೋಬರ್ 1 ರಿಂದ ಅಟಾರ್ನಿ ಜನರಲ್ ಆಗಿ ಎರಡನೇ ಅವಧಿಯನ್ನು ಪ್ರಾರಂಭಿಸಲಿದ್ದಾರೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.


ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದ ಅವರ ತಂದೆ ಅವಧ್ ಬಿಹಾರಿ ರೋಹಟಗಿ ಅವರ ಮಾತು ಕೇಳಿ ರೋಹಟಗಿ ಕಾನೂನು ಅಧ್ಯಯನ ಮಾಡಿದರು. ಅವರು ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನನ್ನು ಪೂರ್ಣಗೊಳಿಸಿದರು ಮತ್ತು ಆರಂಭದಲ್ಲಿ ಯೋಗೇಶ್ ಕುಮಾರ್ ಸಬರ್ವಾಲ್ ಅವರೊಂದಿಗೆ ಕೆಲಸ ಮಾಡಿದರು, ನಂತರ ಅವರು ಭಾರತದ 36 ನೇ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾದರು. ನಂತರ ಅವರು ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದರು, 1993 ರಲ್ಲಿ, ರೋಹಟಗಿ ಅವರು ದೆಹಲಿ ಹೈಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ನಾಮನಿರ್ದೇಶನಗೊಂಡರು. 1999 ರಲ್ಲಿ, ಅವರು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡರು.


ಇದನ್ನೂ ಓದಿ : ಸಿಕಂದರಾಬಾದ್‌ನ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಭಾರೀ ಅಗ್ನಿ ಅವಘಡ: 7 ಸಾವು; 5 ಮಂದಿಗೆ ಗಾಯ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.