ಬಾಯ್ ಫ್ರೆಂಡ್ ʼಮಾಂಸಾಹಾರ ತಿನ್ನಬೇಡʼ ಅಂದಿದ್ದಕ್ಕೆ.. ದುರಂತ ನಿರ್ಧಾರ ತೆಗೆದುಕೊಂಡ `ಮೊದಲ ಮಹಿಳಾ ಪೈಲಟ್`..!
Women pilot suicide : ಇತ್ತೀಚಿಗೆ ಸಣ್ಣ ಸಣ್ಣ ವಿಚಾರಕ್ಕೂ ಯುವಕ ಯುವತಿಯರು ದುರಂತ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.. ಈ ಪೈಕಿ ಮಾಂಸಹಾರ ಸೇವನೆ ಬೇಡ ಎಂದಿದ್ದಕ್ಕೆ ಮುಂಬೈನಲ್ಲಿ ಏರ್ ಇಂಡಿಯಾ ಮಹಿಳಾ ಪೈಲಟ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾರೀ ಆಘಾತವನ್ನುಂಟು ಮಾಡಿದೆ. ಆತ್ಮಹತ್ಯೆ ಪ್ರಕರಣದಲ್ಲಿ ಮಹಿಳಾ ಪೈಲಟ್ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ : ಏರ್ ಇಂಡಿಯಾ ಮಹಿಳಾ ಪೈಲಟ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಪ್ರಕರಣದಲ್ಲಿ ಈಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಯುವತಿಗೆ ಈ ಯುವಕ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದ ಯುವತಿ ಆತ್ಮಹತ್ಯೆ ದಾರಿ ಹಿಡಿದಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.
25 ವರ್ಷದ ಸೃಷ್ಟಿ ಧೂಲಿ ಉತ್ತರ ಪ್ರದೇಶದ ಕೋರಾಪುರ ಬಘುಡಿ ಮೂಲದವರು. ಏರ್ ಇಂಡಿಯಾದಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿದ್ದಳು. ಕೋರಾಪುರದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಸೃಷ್ಟಿ ಬೆಳಗಿನ ಜಾವ 3 ಗಂಟೆಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ:ರಜನಿ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಕಾದಿದೆ 3 ಬಿಗ್ ಸರ್ಪ್ರೈಸ್..! ಏನ್ ಗೊತ್ತೆ..?
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತನಿಖೆ ವೇಳೆ ಕೆಲವು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಸೃಷ್ಟಿ ದುಲಿ ಎರಡು ವರ್ಷಗಳ ಹಿಂದೆ ಪೈಲಟ್ ತರಬೇತಿಗೆ ಹೋದಾಗ ಆದಿತ್ಯ ಪಂಡಿತ್ (27) ನನ್ನು ಭೇಟಿಯಾಗಿದ್ದಳು. ಸ್ನೇಹ ಅಂತಿಮವಾಗಿ ಪ್ರೀತಿಗೆ ತಿರುಗುತ್ತದೆ. ಎರಡು ವರ್ಷಗಳ ತರಬೇತಿಯ ನಂತರ ಸೃಷ್ಟಿ ಧೂಲಿ ಮುಂಬೈಗೆ ತೆರಳಿದರು.
ದೆಹಲಿ ಸಮೀಪದ ಫರಿದಾಬಾದ್‌ನಲ್ಲಿ ನೆಲೆಸಿರುವ ಆದಿತ್ಯ ಆಗಾಗ್ಗೆ ಮುಂಬೈಗೆ ಭೇಟಿ ನೀಡಿ ಸೃಷ್ಟಿಯೊಂದಿಗೆ ಇರುತ್ತಿದ್ದ. ಆಗಾಗ ಮಾಂಸಹಾರ ಸೇವನೆ ಸೇರಿದಂತೆ ಇತರೆ ವಿಚಾರಗಳ ಕುರಿತು ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಮಾಂಸಾಹಾರ ಸೇವಿಸದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿಂದಿಸಿದ್ದಲ್ಲದೆ, ಆದಿತ್ಯ ಬಲವಂತ ಮಾಡಿದ್ದ ಎನ್ನಲಾಗಿದೆ. ಅಲ್ಲದೆ ಸೃಷ್ಟಿ ಜೀವನ ಶೈಲಿ ಬದಲಾಯಿಸಲು ಒತ್ತಾಯಿಸುತ್ತಿದ್ದನಂತೆ. ಸಣ್ಣಪುಟ್ಟ ವಿಷಯಗಳಿಗೆ ಸೃಷ್ಟಿಯೊಂದಿಗೆ ಜಗಳ ಮಾಡುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ..
ಇದನ್ನೂ ಓದಿ:ಎಲಿಮಿನೇಷನ್ ಅಲ್ಲ.. ʼಈʼ ಕಾರಣದಿಂದ ಕನ್ನಡ ಬಿಗ್‌ಬಾಸ್ ಮನೆಯಿಂದ ಹೊರಬರುತ್ತಾರಾ ಸ್ಟ್ರಾಂಗ್ ಲೇಡಿ ಸ್ಪರ್ಧಿ!?
ಅಷ್ಟೇ ಅಲ್ಲ, ಇಬ್ಬರು ಕಾರಿನಲ್ಲಿ ಶಾಪಿಂಗ್ ಹೋಗುತ್ತಿದ್ದಾಗ ಜಗಳವಾಗಿತ್ತು, ಇದರಿಂದ ಆದಿತ್ಯ ಸೃಷ್ಟಿಯನ್ನು ನಡುರಸ್ತೆಯಲ್ಲೇ ಬಿಟ್ಟು ಹೋಗಿದ್ದನಂತೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅವನ ಜೊತೆ ಇದ್ದಳು. ಅಲ್ಲದೆ, ತನ್ನ ಸಹೋದರಿಯ ಮದುವೆಗೆ ಹಾಜರಾಗುವಂತೆ ಸೃಷ್ಟಿಗೆ ಒತ್ತಾಯಿಸಿದ್ದ. ನಿರಾಕರಿಸಿದ ಸೃಷ್ಟಿಯನ್ನು ವಾಟ್ಸಾಪ್ ನಲ್ಲಿ ಬ್ಲಾಕ್ ಮಾಡಿದ್ದ. ಈ ರೀತಿ ಆಗಾಗ ಜಗಳವಾಗುತ್ತಿರುವುದರಿಂದ ಕೆಲವು ತಿಂಗಳಿಂದ ಸೃಷ್ಟಿ ಮಾನಸಿಕವಾಗಿ ನೊಂದಿದ್ದಳು ಎನ್ನಲಾಗಿದೆ.
ಖಿನ್ನತೆಗೆ ಒಳಗಾದ ಸೃಷ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಗಾಗಿ ಪ್ರಿಯಕರ ನೀಡಿದ ಚಿತ್ರಹಿಂಸೆಗೆ ಮಹಿಳಾ ಪೈಲಟ್ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ. ಇದಾದ ಬಳಿಕ ಪೊಲೀಸರು ಆದಿತ್ಯ ಪಂಡಿತ್ ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 29ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ಆದೇಶಿಸಲಾಗಿದೆ. ಪ್ರಿಯಕರನ ಕ್ರೌರ್ಯಕ್ಕೆ ಮಹಿಳಾ ಪೈಲಟ್ ಆತ್ಮಹತ್ಯೆ ಮಾಡಿಕೊಂಡಿರುವುದು ಭಾರೀ ಆಘಾತವನ್ನುಂಟು ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.