ಮುಂಬೈ: ಎಂಎನ್ಎಸ್ ಕಾರ್ಯಕರ್ತರಿಂದ ಪಿಡಬ್ಲ್ಯೂಡಿ ಕಚೇರಿ ಮೇಲೆ ದಾಳಿ
ಎಂಎನ್ಎಸ್ ಕಾರ್ಯಕರ್ತರು ರಸ್ತೆ ಗುಂಡಿಗಳಿಂದ ರಾಜ್ಯದಲ್ಲಿ ಹೆಚ್ಚುತ್ತಿರುವ ಸಾವಿನ ಪ್ರಕರಣಗಳಿಂದ ರೊಚ್ಚಿಗೆದ್ದು ಸೋಮವಾರದಂದು ಪಿಡಬ್ಲ್ಯೂಡಿ ಕಚೇರಿ ಮೇಲೆ ಏಕಾಏಕಿ ದಾಳಿಗೈದು ಕಚೇರಿಯಲ್ಲಿನ ಎಲ್ಲ ವಸ್ತಗಳನ್ನು ನಾಶಗೊಳಿಸಿದ್ದಾರೆ.
ಮುಂಬೈ: ಎಂಎನ್ಎಸ್ ಕಾರ್ಯಕರ್ತರು ರಸ್ತೆ ಗುಂಡಿಗಳಿಂದ ರಾಜ್ಯದಲ್ಲಿ ಹೆಚ್ಚುತ್ತಿರುವ ಸಾವಿನ ಪ್ರಕರಣಗಳಿಂದ ರೊಚ್ಚಿಗೆದ್ದು ಸೋಮವಾರದಂದು ಪಿಡಬ್ಲ್ಯೂಡಿ ಕಚೇರಿ ಮೇಲೆ ಏಕಾಏಕಿ ದಾಳಿಗೈದು ಕಚೇರಿಯಲ್ಲಿನ ಎಲ್ಲ ವಸ್ತಗಳನ್ನು ನಾಶಗೊಳಿಸಿದ್ದಾರೆ.
ಎಎನ್ಐ ಪೋಸ್ಟ್ ಮಾಡಿರುವ ವೀಡಿಯೋವೊಂದರಲ್ಲಿ ಕಾರ್ಯಕರ್ತರು ವಸ್ತುಗಳನ್ನು ಹಾಗೂ ಚೆರ್ ಗಳನ್ನು ನಾಶಪಡಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ ಎಂದು ತಿಳಿದುಬಂದಿದೆ. ಇತ್ತೀಚಿಗೆ ಮಹಾರಾಷ್ಟ್ರದ ಪಿಡಬ್ಲ್ಯೂಡಿ ಸಚಿವ ರಸ್ತೆಗುಂಡಿಗಳಷ್ಟೇ ಅಪಘಾತಕ್ಕೆ ಕಾರಣವಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇತ್ತೀಚಿಗೆ ಕಲ್ಯಾಣದಲ್ಲಿ ರಸ್ತೆಗುಂಡಿಯ ಕಾರಣದಿಂದಾಗಿ ಐವರು ಮೃತಪಟ್ಟಿದ್ದರು. ಸರ್ಕಾರಿ ಅಂಕಿ ಅಂಶಗಳು ಹೇಳುವಂತೆ 2017 ರಲ್ಲಿ ಸುಮಾರು 3600 ಜನರು ಮೃತಪಟ್ಟಿದ್ದರು.