ಮುಂಬೈ: ಇಲ್ಲಿನ ಡೋಂಗ್ರಿ ಪ್ರದೇಶದಲ್ಲಿ ಮಂಗಳವಾರ ಕುಸಿತಕ್ಕೊಳಗಾದ ನಾಲ್ಕು ಅಂತಸ್ತಿನ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.


COMMERCIAL BREAK
SCROLL TO CONTINUE READING

ಶತಮಾನಗಳಷ್ಟು ಹಳೆಯದಾದ ಕೇಸರ್ ಭಾಯ್ ಕಟ್ಟಡ ಮಂಗಳವಾರ ಕುಸಿತಗೊಂಡಿತ್ತು. ಬಳಿಕ ರಾತ್ರಿಯಿಡೀ ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗಾಗಿ ರಕ್ಷಣಾ ಕಾರ್ಯಾಚರಣೆಗಳು ನಡೆದ ಬಳಿಕ ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಗಾಯಗೊಂಡವರನ್ನು ನಗರದ ಜೆ.ಜೆ.ಆಸ್ಪತ್ರೆ ಮತ್ತು ಹಬೀಬ್ ಆಸ್ಪತ್ರೆಗೆ ದಾಖಲಿಸಲಾಗಿದೆ. 


ಮುಂಬೈನ ಕೇಸರ್‌ಭಾಯ್ ಕಟ್ಟಡ ಕುಸಿತ ಸ್ಥಳದಲ್ಲಿ ಎನ್‌ಡಿಆರ್‌ಎಫ್ ಪಡೆಯ ಶ್ವಾನದಳದ ಸಹಾಯದಿಂದ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದೆ.


ಕಟ್ಟಡ ಸುಮಾರು 100 ವರ್ಷಗಳಷ್ಟು ಹಳೆಯದಾಗಿದ್ದು, ಅದನ್ನು ಖಾಲಿ ಮಾಡುವಂತೆ 2017ರಲ್ಲಿಯೇ ನೋಟಿಸ್ ನೀಡಲಾಗಿತ್ತಾದರೂ ಖಾಲಿ ಮಾಡಿರಲಿಲ್ಲ ಎನ್ನಲಾಗಿದೆ. ಈ ಕಟ್ಟಡದಲ್ಲಿ 16 ಕುಟುಂಬಗಳು ವಾಸವಿದ್ದು, ನೆಲಮಹಡಿಯಲ್ಲಿ 4 ಅಂಗಡಿಗಳೂ ಇದ್ದವು ಎನ್ನಲಾಗಿದೆ.