ಮುಂಬೈ: ಮುಂಬೈ ತನ್ನ ಮೊದಲ ಕರೋನವೈರಸ್ COVID-19 ಪರೀಕ್ಷಾ ಬಸ್ ಅನ್ನು ಶುಕ್ರವಾರ (ಮೇ 1, 2020) ಬಿಡುಗಡೆ ಮಾಡಿತು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಬಸ್ ಅನ್ನು ರಾಜ್ಯ ಆರೋಗ್ಯ ಸಚಿವ ರಾಜೇಶ್ ತೋಪೆ, ಆದಿತ್ಯ ಠಾಕ್ರೆ ಮತ್ತು ಪರ್ವೀನ್ ಪರದೇಶಿ ಉದ್ಘಾಟಿಸಿದರು.


COMMERCIAL BREAK
SCROLL TO CONTINUE READING


ಕೊರೊನಾವೈರಸ್ ಅನ್ನು ಪತ್ತೆಹಚ್ಚಲು ಜ್ವರ, O2 ಸ್ಯಾಚುರೇಶನ್ ಮತ್ತು ಎಐ ಆಧಾರಿತ ಎಕ್ಸರೆಗಳ ಸಂಯೋಜನೆಯನ್ನು ಬಳಸಿಕೊಂಡು ಸಾಮೂಹಿಕ ತಪಾಸಣೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.


ಬಸ್‌ನಲ್ಲಿ ಹೆಚ್ಚುವರಿಯಾಗಿ ಆರ್‌ಟಿಪಿಸಿಆರ್ ಸ್ವ್ಯಾಬ್ ಸಂಗ್ರಹ ಸೌಲಭ್ಯವಿದೆ.



'ಕೋವಿಡ್‌ಬಸ್' ಎಂಬ ಬಸ್ ವಿವಿಧ ಕೊಳೆಗೇರಿ ಸ್ಥಳಗಳಿಗೆ ಭೇಟಿ ನೀಡಲಿದ್ದು ಹೆಚ್ಚಿನ ಅಪಾಯದ ಶಂಕಿತರನ್ನು ಪರಿಣಾಮಕಾರಿಯಾಗಿ ಪ್ರತ್ಯೇಕಿಸುತ್ತದೆ.


ಏತನ್ಮಧ್ಯೆ ಮಹಾರಾಷ್ಟ್ರದಲ್ಲಿ ಕರೋನವೈರಸ್ ಪ್ರಕರಣಗಳು 10,498ಕ್ಕೆ ಏರಿದ್ದು ಭಾರತದಲ್ಲಿ ಕೋವಿಡ್-19 ಕಾರಣದಿಂದಾಗಿ 1,147 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ 1993 ಹೊಸ COVID-19 ಪ್ರಕರಣಗಳು ವರದಿಯಾಗಿದ್ದು ಕನಿಷ್ಠ 73 ಸಾವುಗಳು ಸಂಭವಿಸಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಬೆಳಿಗ್ಗೆ ತನ್ನ ಇತ್ತೀಚಿನ ನವೀಕರಣದಲ್ಲಿ ತಿಳಿಸಿದೆ.