ಮುಂಬೈ : ಶಬ್ದ ಮಾಲಿನ್ಯ ಜಾಗೃತಿಗೆ ಹೀಗೊಂದು ವಿಶೇಷ ಅಭಿಯಾನ!
ಮುಂಬೈನ ಆವಾಜ್ ಫೌಂಡೇಶನ್, ಮಹಾರಾಷ್ಟ್ರ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಹಾರ್ನ್ವ್ರತ್ (HornVrat) ಅಭಿಯಾನವನ್ನು ಆರಂಭಿಸಿದೆ.
ಮುಂಬೈ: ವಿಶ್ವದಲ್ಲೇ ಅತಿ ಹೆಚ್ಚು ಶಬ್ದ ಮಾಲಿನ್ಯಾ ಇರುವುದು ಭಾರತದಲ್ಲೇ ಎಂದು ಹಲವು ಸಂಶೋಧನೆಗಳು ಹೇಳಿವೆ. ಮಾನವನ ಆರೋಗ್ಯದ ಮೇಲೆ ಅತಿಯಾದ ಶಬ್ದ ಮತ್ತು ಕರ್ಕಶ ಶಬ್ದಗಳು ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಶಬ್ದ ಮಾಲಿನ್ಯವನ್ನು ಕುರಿತಾಗಿ ಜಾಗೃತಿ ಮೂಡಿಸಲು ಹಲವಾರು ಸಂಸ್ಥೆಗಳು ಬಹಳಷ್ಟು ಅಭಿಯಾನಗಳನ್ನು ಇದುವೆರೆಗೂ ಹಮ್ಮಿಕೊಂಡಿವೆ. ಆದರೆ ಇಂದು ಮುಂಬೈನಲ್ಲಿ ಶಬ್ದ ಮಾಲಿನ್ಯದ ವಿರುದ್ಧ ಬಹಳ ವಿಭಿನ್ನ ರೀತಿಯಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಮುಂಬೈನ ಆವಾಜ್ ಫೌಂಡೇಶನ್, ಮಹಾರಾಷ್ಟ್ರ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಹಾರ್ನ್ವ್ರತ್ (HornVrat) ಅಭಿಯಾನವನ್ನು ಆರಂಭಿಸಿದೆ. ಹಲವಾರು ಬ್ಲೋ ಹಾರ್ನ್'ಗಳನ್ನು ಹೊಂದಿರುವ ಆಟೋರಿಕ್ಷಾದ ಮೂಲಕ ಪ್ರಚಾರ ಪ್ರಾರಂಭಿಸಿದೆ. ಮುಂಬೈನಲ್ಲಿ ಪ್ರತಿ ಗಂಟೆಗೆ 18 ದಶಲಕ್ಷ ಹಾರ್ನಗಳು ಕೇಳಿಬರುತ್ತದೆ ಎಂದು ಹೇಳುವ ಮೂಲಕ ಈ ಜಾಗೃತಿ ಆಟೋರಿಕ್ಷಾ ನಗರದ ಬೀದಿ ಬೀದಿಗಳಲ್ಲಿ ಚಲಿಸಲಿದೆ. ಅಲ್ಲದೆ, ಮುಂಬೈನ ಇಕ್ಕಟ್ಟಾದ ರಸ್ತೆಗಳೂ ಸಹ ಈ ಹಾರ್ನಗಳಿಗೆ ಕಾರಣವಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮೋಟಾರು ವಾಹನ ಚಾಲಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಈ ಅಭಿಯಾನದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮಾನವನ ಕಿವಿಗೆ 70-ಡೆಸಿಬಲ್'ವರೆಗಿನ ಶಬ್ದದ ಮಟ್ಟ ಸುರಕ್ಷಿತ. ಆದರೆ, ಭಾರತದ ರಸ್ತೆಗಳಲ್ಲಿ ಹಾನ್ಕಿಂಗ್ 110 ರಷ್ಟು ಡೆಸಿಬೆಲ್ ಮಟ್ಟವನ್ನು ಹೊಂದಿದ್ದು, ಇದು ದೀರ್ಘಾವಧಿಯಲ್ಲಿ ನಗರ-ನಿವಾಸಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.