Muslim Population: ದೇಶದ ಮುಸ್ಲಿಂ ಜನಸಂಖ್ಯೆಯ ಕುರಿತ ಆಘಾತಕಾರಿ ವರದಿ ಬಹಿರಂಗ, ಹಿಂದೂಗಳ ಬಗ್ಗೆಯೂ ಕೂಡ ಉಲ್ಲೇಖ
Muslim Population: ಅಮೇರಿಕನ್ ಥಿಂಕ್ ಟ್ಯಾಂಕ್ `ಪ್ಯೂ ರಿಸರ್ಚ್` ನ ವರದಿಯು ಮುಸ್ಲಿಮರು ದೇಶದಲ್ಲಿ ಗರಿಷ್ಠ ಸಂಖ್ಯೆಯ ಮಕ್ಕಳನ್ನು ಹುಟ್ಟುಹಾಕುತ್ತಾರೆ ಎಂದು ಹೇಳಿದೆ. ಬಹುತೇಕ ಎಲ್ಲ ಧರ್ಮಗಳಲ್ಲಿ ಮಕ್ಕಳ ಜನನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದು ವರದಿ ಹೇಳಿದೆ. ಆದರೆ ಮುಸ್ಲಿಮರು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡುತ್ತಾರೆ ಎಂದು ವರದಿ ಹೇಳಿದೆ.
ನವದೆಹಲಿ: Muslim Population - ಜನಸಂಖ್ಯಾ ನಿಯಂತ್ರಣಕ್ಕೆ (Population Control) ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಯತ್ನಗಳ ನಡುವೆ, ಅಮೇರಿಕನ್ ಥಿಂಕ್ ಟ್ಯಾಂಕ್ (American Think Tank) ವರದಿ ಭಾರತದ ಬಗ್ಗೆ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಇತರ ಧರ್ಮಗಳಿಗೆ ಹೋಲಿಸಿದರೆ ಮುಸ್ಲಿಮರು (Muslim) ಭಾರತದಲ್ಲಿ (India) ಹೆಚ್ಚು ಮಕ್ಕಳನ್ನು ಹುಟ್ಟು ಹಾಕುತ್ತಾರೆ ಎಂದು ವರದಿ ಹೇಳಿದೆ. ಇದರ ನಂತರ ಹಿಂದುಗಳ (Hindu)ಸಂಖ್ಯೆ ಬರುತ್ತದೆ ಮತ್ತು ಜೈನ ಧರ್ಮವನ್ನು ನಂಬುವವರು ಕನಿಷ್ಠ ಮಕ್ಕಳನ್ನು ಹುಟ್ಟು ಹಾಕುತ್ತಾರೆ. ಯುಎಸ್ ಮೂಲದ ಥಿಂಕ್ ಟ್ಯಾಂಕ್ 'ಪ್ಯೂ ರಿಸರ್ಚ್' ನ ಇತ್ತೀಚಿನ ವರದಿಯು ಬಹುತೇಕ ಎಲ್ಲಾ ಧರ್ಮಗಳಲ್ಲಿ ಮಕ್ಕಳ ಜನನ ದರದಲ್ಲಿ ಇಳಿಕೆಯಾಗಿದೆ ಎಂದು ಹೇಳಿದೆ.
ಈ ರೀತಿ ಇಳಿಕೆಯಾಗಿದೆ
ಯುಎಸ್ ಥಿಂಕ್ ಟ್ಯಾಂಕ್ 'ಪ್ಯೂ ರಿಸರ್ಚ್' (Pew Research) ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ, ಭಾರತೀಯ ಮುಸ್ಲಿಮರಲ್ಲಿ ಒಟ್ಟು ಮಗುವಿನ ಜನನ ದರದಲ್ಲಿ ಇಳಿಕೆಯಾಗಿದೆ ಎಂದು ಹೇಳಿದೆ. ಈ ದರವು 1992 ರಲ್ಲಿ ಪ್ರತಿ ಮಹಿಳೆಗೆ 4.4 ಮಕ್ಕಳಾಗಿದ್ದು, ಇದು 2015 ರಲ್ಲಿ 2.6 ಮಕ್ಕಳಿಗೆ ಇಳಿಕೆಯಾಗಿದೆ. ಆದರೆ, ಇನ್ನೂ ಹೆಚ್ಚಿನ ಮಕ್ಕಳನ್ನು ಮುಸ್ಲಿಮ ಸಮುದಾಯದಲ್ಲಿಯೇ ಹುಟ್ಟುತ್ತಿದ್ದಾರೆ. ಪ್ಯೂ ರಿಸರ್ಚ್ ವರದಿಯ ಪ್ರಕಾರ, 'ಭಾರತದ ಪ್ರತಿಯೊಂದು ಧಾರ್ಮಿಕ ಗುಂಪಿನಲ್ಲಿ ಮಕ್ಕಳ ಜನನ ದರದಲ್ಲಿ ಇಳಿಕೆಯಾಗಿದೆ. ಇದರಲ್ಲಿ ಬಹುಸಂಖ್ಯಾತ ಹಿಂದುಗಳು, ಅಲ್ಪಸಂಖ್ಯಾತ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಜೈನರು ಶಾಮೀಲಾಗಿದ್ದಾರೆ' ಎನ್ನಲಾಗಿದೆ.
ಹಳೆ ಪ್ಯಾಟರ್ನ್ ಮುಂದುವರೆದಿದೆ
ವರದಿಯ ಪ್ರಕಾರ, ಮುಸ್ಲಿಮರು ಭಾರತದಲ್ಲಿ ದೊಡ್ಡ ಧಾರ್ಮಿಕ ಗುಂಪುಗಳಲ್ಲಿ ಅತೀ ಹೆಚ್ಚು ಮಕ್ಕಳನ್ನು ಹುಟ್ಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇವರ ನಂತರ ಹಿಂದೂಗಳು (2.1) ಬರುತ್ತಾರೆ ಎನ್ನ್ನಲಾಗಿದ . ಜೈನ ಧರ್ಮವನ್ನು ಅನುಸರಿಸುತ್ತಿರುವ ಜನರು ಕನಿಷ್ಠ (1.2) ಮಕ್ಕಳನ್ನು ಹುಟ್ಟು ಹಾಕುತ್ತಿದ್ದಾರೆ. ಈ ಸಾಮಾನ್ಯ ಪ್ಯಾಟರ್ನ್ 1992 ರ ಮಾದರಿಯಲ್ಲಿಯೇ ಇದೆ. ಆಗ ಮುಸ್ಲಿಮರಲ್ಲಿ 4.4 ರ ದರದಲ್ಲಿ ಮಕ್ಕಳನ್ನು ಹುಟ್ಟು ಹಾಕಲಾಗುತ್ತಿತ್ತು ಮತ್ತು ಹಿಂದುಗಳು 3.3 ದರದಲ್ಲಿ ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಮುಸ್ಲಿಮರು ಮತ್ತು ಹಿಂದುಗಳ ನಡುವಿನ ಮಕ್ಕಳ ಜನನ ಪ್ರಮಾಣದಲ್ಲಿನ ಅಂತರ ಕೂಡ ಕಡಿಮೆಯಾಗಿದೆ ಎಂದು ಪಿಯು ವರದಿ ಹೇಳಿದೆ.
ಇದನ್ನೂ ಓದಿ-Arecanut Price: ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ದರ ಎಷ್ಟಿದೆ ತಿಳಿದುಕೊಳ್ಳಿ.
ಜನಸಂಖ್ಯೆಗೆ ಕೊಡುಗೆ ಎಷ್ಟು
ಇತರ ಮುಸ್ಲಿಂ ಗುಂಪುಗಳಿಗಿಂತ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು ವೇಗವಾಗಿ ಬೆಳೆದಿದೆ ಎಂದು ಈ ಅಂಕಿಅಂಶಗಳು ತೋರಿಸುತ್ತವೆ ಎಂದು 'ಪ್ಯೂ ರಿಸರ್ಚ್' ಹೇಳಿದೆ. ಆದರೆ, 1951 ರಲ್ಲಿ ಮೊದಲ ಜನಗಣತಿಯ ನಂತರ, ಜನನ ದರ ಇಳಿಕೆಯಿಂದಾಗಿ ಒಟ್ಟಾರೆಯಾಗಿ ಎಲ್ಲಾ ಧಾರ್ಮಿಕ ಗುಂಪುಗಳಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಭಾರತದ 1.2 ಬಿಲಿಯನ್ ಜನಸಂಖ್ಯೆಯಲ್ಲಿ 79.8 ಪ್ರತಿಶತದಷ್ಟು ಹಿಂದುಗಳಿದ್ದಾರೆ. ಇದು 2001 ರಲ್ಲಿ ನಡೆಸಿದ ಜನಗಣತಿಗಿಂತ ಕೇವಲ 0.7 ರಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ-ಬುಧವಾರದ ದಿನ ಈ ದೇವರನ್ನು ಈ ನಿಯಮಗಳ ಪ್ರಕಾರ ಪೂಜಿಸಿದರೆ ಸಿಗುತ್ತದೆಯಂತೆ ಶುಭ ಫಲ
ಕೆಲ ಧರ್ಮಗಳ ಪರಿಸ್ಥಿತಿ ಹೀಗಿದೆ
ಇದೇ ವೇಳೆ ಮುಸ್ಲಿಮರ ಜನಸಂಖ್ಯೆಯು 2001 ಮತ್ತು 2011 ರ ಅವಧಿಯಲ್ಲಿ ಶೇ.13.4 ರಷ್ಟು ಹೆಚ್ಚಾಗಿದೆ. ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಜೈನರು ದೇಶದ ಜನಸಂಖ್ಯೆಯ ಶೇ.6 ರಷ್ಟಿದ್ದಾರೆ. ಅವರ ಜನಸಂಖ್ಯೆಯು 1951 ರಿಂದ ಇಲ್ಲಿಯವರೆಗೆ ಸ್ಥಿರವಾಗಿದೆ. ಭಾರತದ ಸ್ವಾತಂತ್ರ್ಯದ ನಂತರ ಧಾರ್ಮಿಕ ಜನಸಂಖ್ಯೆಯಲ್ಲಿನ ಬದಲಾವಣೆಯ ಹಿಂದೆ ಮಗುವಿನ ಜನನವೇ ದೊಡ್ಡ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ-ಕೆಲಸಕ್ಕೆ ಬಂತು ಭಾರತದ ಎಚ್ಚರಿಕೆ, ಕೋವಿಶಿಲ್ದ್ ಗೆ ಮಾನ್ಯತೆ ನೀಡಿದ ಬ್ರಿಟನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.