Ayodhya Ram Mandir: ಅಯೋಧ್ಯೆ ದೇಗುಲಕ್ಕೆ ರಾಮಲಲ್ಲಾ ವಿಗ್ರಹ ಅಂತಿಮಗೊಂಡಿದದೆ. ಇಡೀ ದೇಶದಲ್ಲಿ 22 ಜನವರಿ 2024 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದ ಕುರಿತು ಚರ್ಚೆ ನಡೆಯುತ್ತಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗಾಗಿ ಮೊಘಲ್ ದೊರೆ ಬಾಬರ್‌ನ ಜನ್ಮಸ್ಥಳವಾದ ಉಜ್ಬೇಕಿಸ್ತಾನ್‌ನಿಂದಲೂ ನೀರು ತರಲಾಗಿದೆ. 


COMMERCIAL BREAK
SCROLL TO CONTINUE READING

ಈ ವರ್ಷದ ಏಪ್ರಿಲ್‌ನಲ್ಲಿ ದೆಹಲಿಯ ಮಾಜಿ ಬಿಜೆಪಿ ಶಾಸಕ ವಿಜಯ್ ಜಾಲಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು 155 ದೇಶಗಳಿಂದ ತಂದ ಪವಿತ್ರ ನೀರಿನ ಜೊತೆ ಭೇಟಿ ಮಾಡಿದ್ದರು. ಇದು ಐತಿಹಾಸಿಕ ಎಂದು ಗಡ್ಕರಿ ಹೇಳಿದ್ದರು. ನೀವು ಕಲಶ ವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಚೀನಾ, ಲಾವೋಸ್, ಲಾಟ್ವಿಯಾ, ಮ್ಯಾನ್ಮಾರ್, ಮಂಗೋಲಿಯಾ, ಸೈಬೀರಿಯಾ, ದಕ್ಷಿಣ ಕೊರಿಯಾ ಮುಂತಾದ ಹಲವು ದೇಶಗಳ ಹೆಸರಿನ ಸ್ಟಿಕ್ಕರ್‌ಗಳನ್ನು ನೋಡಬಹುದು. 


ಇದನ್ನೂ ಓದಿ : ಅಯೋಧ್ಯೆಯಲ್ಲಿ ನಗರ ಯಾತ್ರೆ ವೇಳೆ ಶ್ರೀರಾಮನ ಕಣ್ಣಿಗೆ ಪಟ್ಟಿ ಕಟ್ಟುವ ಹಿಂದಿನ ಕಾರಣ ಇದು! 


ಒಟ್ಟು 156 ದೇಶಗಳ ನೀರು ಸಂಗ್ರಹಕ್ಕೆ ಎಲ್ಲ ಧರ್ಮದ ಜನರು ಸಹಕಾರ ನೀಡಿದ್ದಾರೆ ಎಂದು ವಿಜಯ್ ಜಾಲಿ ಹೇಳಿಕೊಂಡಿದ್ದಾರೆ. ಸೌದಿ ಅರೇಬಿಯಾದಿಂದ ಹಿಂದೂಗಳು ನೀರು ಕಳುಹಿಸಿದ್ದಾರೆ ಮತ್ತು ಮುಸ್ಲಿಂ ಮಹಿಳೆಯರು ಇರಾನ್‌ನಿಂದ ನೀರು ಕಳುಹಿಸಿದ್ದಾರೆ. ತಾಜ್ ಮೊಹಮ್ಮದ್ ಕಜಕಿಸ್ತಾನದಿಂದ ಅಲ್ಲಿನ ಮುಖ್ಯ ನದಿಯಿಂದ ನೀರನ್ನು ಕಳುಹಿಸಿದ್ದಾರೆ. ಸಿಖ್ ಸಹೋದರರ ಸಹಾಯದಿಂದ ಕೀನ್ಯಾದಿಂದ ನೀರು ಸಂಗ್ರಹಿಸಲಾಯಿತು. ಅತ್ಯಂತ ಕಾಳಜಿ ವಹಿಸಿ ಸಿಂಧಿಗಳು ಪಾಕಿಸ್ತಾನದಿಂದ ಅಯೋಧ್ಯೆಗೆ ನೀರು ಕಳುಹಿಸಿದ್ದಾರೆ.


ಕೆಲ ದಿನಗಳ ಹಿಂದೆ ನೀರು ತುಂಬಿದ ದೊಡ್ಡ ಕಲಶವನ್ನು ವಿಶ್ವಹಿಂದೂ ಪರಿಷತ್ತಿನ ಆಪ್ತ ಮಂಡಳಿ ಸದಸ್ಯ ದಿನೇಶ್ ಚಂದ್ರ ಅವರಿಗೆ ಹಸ್ತಾಂತರಿಸಲಾಗಿತ್ತು. ಈ ನೀರನ್ನು ಪ್ರಾಣ ಪ್ರತಿಷ್ಠಾಪನೆ ವೇಳೆ ಜಲಾಭಿಷೇಕಕ್ಕೆ ಬಳಸಲಾಗುವುದು.


ಇದನ್ನೂ ಓದಿ : ಈ ಪ್ರತಿಮೆಗಳ ಹಿಂದೆಯೂ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೈಚಳಕವಿದೆ..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.