Mutton in govt hostel food : ತೆಲಂಗಾಣ ರಾಜ್ಯದ ಕಲ್ಯಾಣ ಹಾಸ್ಟೆಲ್‌ಗಳಲ್ಲಿನ ಸ್ಥಿತಿಗತಿಗಳನ್ನು ತಿಳಿಯಲು ಖುದ್ದು ಮುಖ್ಯಮಂತ್ರಿ ರೇವಂತ ರೆಡ್ಡಿ ಮತ್ತು ಸಚಿವರು ಇಡೀ ಸರ್ಕಾರಿ ಆಡಳಿತದೊಂದಿಗೆ ಹಾಸ್ಟೆಲ್‌ ಮತ್ತು ಗುರುಕುಲಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅವರೊಂದಿಗೆ ಊಟ ಸಹ ಮಾಡಿದರು.


COMMERCIAL BREAK
SCROLL TO CONTINUE READING

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಜತೆಗೆ ರುಚಿಕರವಾದ ಊಟ ನೀಡುವತ್ತ ಗಮನಹರಿಸಲು ಸರಕಾರ ನಿರ್ಧರಿಸಿದೆ.. ಇದುವರೆಗೆ ಜಾರಿಗೆ ಬಂದಿರುವ ಆಹಾರ ಪದ್ಧತಿಯಲ್ಲಿ ಹಲವು ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡಲು ಮೆನು ಸಿದ್ಧಪಡಿಸಲಾಗಿದೆ. 


ಇದುವರೆಗೆ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಪ್ರತಿ ಭಾನುವಾರ ಕೋಳಿ ಮಾಂಸವನ್ನು ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಮಟನ್ ನೀಡಲಾಗುತ್ತಿದೆ. ಇನ್ನು ಮುಂದೆ ಊಟದಲ್ಲಿ ತಿಂಗಳಿಗೆ ಎರಡು ಬಾರಿ ಮಟನ್ ಹಾಗೂ 4 ಬಾರಿ ಚಿಕನ್ ನೀಡಲಾಗುವುದು. ಮಾಂಸಾಹಾರಿ ಊಟದಲ್ಲಿ ಸಾಂಬಾರ್ ಮತ್ತು ಮೊಸರು ಸೇರಿದೆ. 


ರಂಗಾರೆಡ್ಡಿ ಜಿಲ್ಲೆಯ ಚಿಲ್ಕೂರಿನ ಸಮಾಜ ಕಲ್ಯಾಣ ವಸತಿ ಶಾಲೆಗೆ ತೆರಳಿದ ಸಿಎಂ ರೇವಂತ್ ರೆಡ್ಡಿ... ಅಲ್ಲಿಂದ ರಾಜ್ಯದ ಎಲ್ಲ ಸರಕಾರಿ ಹಾಸ್ಟೆಲ್, ಗುರುಕುಲಗಳಲ್ಲಿ ಕಾಮನ್ ಡಯಟ್ ಪ್ಲಾನ್ ಆರಂಭಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.