ಈ ಕೆಲಸ ಮಾಡಿದರೆ, ನಿಮ್ಮ `ಆಧಾರ್`ನಿಂದ ಗೆಲ್ಲಬಹುದು 30 ಸಾವಿರ ರೂ.!
ನೀವೂ ಕೂಡ ಆಧಾರ್ ಕಾರ್ಡ್ ಹೊಂದಿದ್ದರೆ ಅದರಿಂದ ನಿಮಗೆ 30 ಸಾವಿರ ಗೆಲ್ಲುವ ಅವಕಾಶವಿದೆ. ಹೌದು, ಈ ಪ್ರಕಟಣೆಯನ್ನು ಯಾವುದೇ ಕಂಪನಿ ನೀಡಿಲ್ಲ, ಸ್ವತಃ ಯುಐಡಿಎಐ ಈ ಬಗ್ಗೆ ಪ್ರಕಟಣೆ ನೀಡಿದೆ.
ನವದೆಹಲಿ: ನೀವೂ ಕೂಡ ಆಧಾರ್ ಕಾರ್ಡ್ ಹೊಂದಿದ್ದರೆ ಅದರಿಂದ ನಿಮಗೆ 30 ಸಾವಿರ ಗೆಲ್ಲುವ ಅವಕಾಶವಿದೆ. ಹೌದು, ಈ ಪ್ರಕಟಣೆಯನ್ನು ಯಾವುದೇ ಕಂಪನಿ ನೀಡಿಲ್ಲ, ಸ್ವತಃ ಯುಐಡಿಎಐ ಈ ಬಗ್ಗೆ ಪ್ರಕಟಣೆ ನೀಡಿದೆ.
ಯುಐಡಿಎಐ ವತಿಯಿಂದ # ನನ್ನ ಆಧಾರ್ ಆನ್‌ಲೈನ್(My Aadhaar Online) # ಕಾಂಟೆಸ್ಟ್(Contest) ಅನ್ನು ಪ್ರಾರಂಭಿಸಲಾಗಿದೆ. ಜೂನ್ 18 ರಿಂದ ಪ್ರಾರಂಭವಾಗುವ ಈ ಸ್ಪರ್ಧೆಯು ಜುಲೈ 8 ರವರೆಗೆ ಮುಂದುವರಿಯುತ್ತದೆ. ಆಧಾರ್ ಕಾರ್ಡ್ ಹೊಂದಿರುವ ಯಾವುದೇ ಭಾರತೀಯ ನಾಗರಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಧಾರ್ ಮೇಲೆ ನಡೆಯುವ ಈ ಇಡೀ ಸ್ಪರ್ಧೆಯ ಮೇಲೆ ಯುಐಡಿಎಐನಿಂದ 48 ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಹೀಗೆ ಮಾಡಿ:
ನೀವು ಸ್ಪರ್ಧೆಯಲ್ಲಿ ಭಾಗವಹಿಸಬೇಕಾದರೆ, ಆಧಾರ್ ಒದಗಿಸುವ ಯಾವುದೇ ಸೇವೆಗಳ 30 ರಿಂದ 120 ಸೆಕೆಂಡುಗಳ ಅನಿಮೇಟೆಡ್ ಟ್ಯುಟೋರಿಯಲ್ ವೀಡಿಯೊ ಮಾಡಿ. ವೀಡಿಯೊಗಳನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಯಾವುದೇ ಭಾಷೆಯಲ್ಲಿ ಮಾಡಬಹುದು. ಇದರ ನಂತರ, ವೀಡಿಯೊ ಲಿಂಕ್ ಅನ್ನು UIDAI ಯ media.division@uidai.net.in ಗೆ ಕಳುಹಿಸಿ.
ಈ ವಿಷಯಗಳನ್ನು ನೆನಪಿನಲ್ಲಿಡಿ:
ಒಟ್ಟು 15 ವಿಭಾಗಗಳಲ್ಲಿ ಯುಐಡಿಎಐನಿಂದ ವೀಡಿಯೊ ನಮೂದನ್ನು ಪಡೆಯಲಾಗುತ್ತಿದೆ. ನೀವು ಒಂದಕ್ಕಿಂತ ಹೆಚ್ಚು ವೀಡಿಯೊಗಳನ್ನು ಕಳುಹಿಸಿದರೆ, ಗೆಲ್ಲುವ ಸಾಧ್ಯತೆಗಳು ಇನ್ನಷ್ಟು ಹೆಚ್ಚಾಗುತ್ತವೆ. ಆದರೆ ಬಹುಮಾನಕ್ಕಾಗಿ ನಿಮ್ಮ ಅತ್ಯುತ್ತಮ ವೀಡಿಯೊಗಳಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಈ ಸ್ಪರ್ಧೆಯಲ್ಲಿ, ನೀವು ಒಂಟಿಯಾಗಿ ಮಾತ್ರವಲ್ಲದೆ ತಂಡದೊಂದಿಗೆ ಕೂಡ ಭಾಗವಹಿಸಬಹುದು. ವೀಡಿಯೊ ಸಂಪೂರ್ಣವಾಗಿ ನಿಮ್ಮದಾಗಿರಬೇಕು. ಇದನ್ನು ಯುಐಡಿಎಐ ತಂಡ ಕೂಲಂಕಷವಾಗಿ ತನಿಖೆ ನಡೆಸಲಿದೆ.
ವೀಡಿಯೊ ಕಳುಹಿಸುವ ಮೊದಲು ಈ ಅಂಶಗಳನ್ನು ಗಮನಿಸಿ:
ವೀಡಿಯೊ ಮಾಡಿದ ನಂತರ, ಅದನ್ನು ಯುಟ್ಯೂಬ್, ಗೂಗಲ್ ಡ್ರೈವ್ ಅಥವಾ ಇನ್ನಾವುದೇ ವೀಡಿಯೊ ಹಂಚಿಕೆ ಪ್ಲಾಟ್‌ಫಾರ್ಮ್‌ಗೆ ಅಪ್‌ಲೋಡ್ ಮಾಡಿ ಮತ್ತು ಅದನ್ನು ಯುಐಡಿಎಐಗೆ ಇಮೇಲ್ ಮಾಡಿ. ವೀಡಿಯೊ mp4, avi, flv, wmv, mpeg ಅಥವಾ mov ಸ್ವರೂಪದಲ್ಲಿರಬೇಕು. ಹೆಚ್ಚಿನ ರೆಸಲ್ಯೂಶನ್ ಮತ್ತು ಪೂರ್ಣ ಎಚ್‌ಡಿ ಹೊಂದಿರುವ ವೀಡಿಯೊಗಳಿಗೆ ಆದ್ಯತೆ ನೀಡಲಾಗುವುದು.
ವೀಡಿಯೊ ಕಳುಹಿಸುವಾಗ ನೀವು ಕೆಲವು ವೈಯಕ್ತಿಕ ಮಾಹಿತಿಯನ್ನು ಸಹ ನೀಡಬೇಕಾಗುತ್ತದೆ. ನಿಮ್ಮ ಆಧಾರ್ ಅನ್ನು ಖಾತೆಗೆ ಲಿಂಕ್ ಮಾಡುವುದು ಬಹಳ ಮುಖ್ಯ. ಇದಲ್ಲದೆ, ಅಗತ್ಯ ಮಾಹಿತಿಯನ್ನು ಆಧಾರ್ ಸಂಖ್ಯೆ, ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ಹೀಗೆ ಪ್ರಮುಖ ಮಾಹಿತಿಯನ್ನು ಯುಐಡಿಎಐಗೆ ನೀಡಬೆಕು. ನಿಮ್ಮ ಆಧಾರ್ ಖಾತೆಗೆ ಲಿಂಕ್ ಮಾಡದಿದ್ದರೆ, ನೀವು ಅದನ್ನು ಆಗಸ್ಟ್ 31 ರವರೆಗೆ ಲಿಂಕ್ ಮಾಡಬಹುದು.
ಒಟ್ಟು 15 ವಿಭಾಗಗಳಲ್ಲಿ ಪ್ರತಿ ವಿಭಾಗದಲ್ಲೂ ಟಾಪ್ ಮೂರು ವೀಡಿಯೊಗಳಿಗೆ ಪ್ರಶಸ್ತಿ ಸಿಗಲಿದೆ. ಇದರಲ್ಲಿ ಮೊದಲ ಸ್ಥಾನ ಪಡೆದ ವಿಜೇತರಿಗೆ 20 ಸಾವಿರ, ದ್ವಿತೀಯ ಸ್ಥಾನ ಪಡೆಯುವವರಿಗೆ 10 ಸಾವಿರ ಮತ್ತು ಮೂರನೇ ಸ್ಥಾನ ಪಡೆಯುವ ವಿಜೇತರಿಗೆ 5 ಸಾವಿರ ರೂಪಾಯಿ ನೀಡಲಾಗುವುದು. ಸ್ಪರ್ಧೆಯಲ್ಲಿ ಅತ್ಯುತ್ತಮ ವೀಡಿಯೊ ಪ್ರಶಸ್ತಿಯನ್ನು ಸಹ ನೀಡಲಾಗುತ್ತದೆ. ಇದರಲ್ಲಿ ಮೊದಲ ಅತ್ಯುತ್ತಮ ವಿಡಿಯೋ ವಿಜೇತರಿಗೆ 30 ಸಾವಿರ ರೂ., ಎರಡನೆಯವರಿಗೆ 20 ಸಾವಿರ ಮತ್ತು ಮೂರನೆಯವರಿಗೆ 10 ಸಾವಿರ ರೂಪಾಯಿ ನೀಡಲಾಗುವುದು.