ನವದೆಹಲಿ: ಸೋನಿಯಾ ಗಾಂಧೀ ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷಿಯ ಸ್ಥಾನಕ್ಕೆ ರಾಜಿನಾಮೆ ನೀಡಿ ರಾಹುಲ್ ಗಾಂಧಿಯವರಿಗೆ ಅಧಿಕಾರ  ಹಸ್ತಾಂತರ ಮಾಡಿದ ನಂತರ, ಪ್ರಿಯಾಂಕ ಗಾಂಧಿಯವರು ರಾಜಕಾರಣಕ್ಕೆ ಬರುತ್ತಾರೆ ಎನ್ನುವ ವದಂತಿ ಮತ್ತೆ ದಟ್ಟವಾಗಿದೆ.


COMMERCIAL BREAK
SCROLL TO CONTINUE READING

ಸೋನಿಯಾ ಕಾಂಗ್ರೆಸ್ ಪಕ್ಷದ ನಾಯಕತ್ವದ ಜವಾಬ್ದಾರಿಯನ್ನು ರಾಹುಲ್ ಗೆ ಹಸ್ತಾಂತರ ಮಾಡುವ ಸಂಧರ್ಭದಲ್ಲಿ ಮಾತನಾಡುತ್ತಾ  ಇನ್ನು ಮುಂದೆ ರಾಜಕೀಯದಿಂದ ನಿವೃತ್ತಿ ಘೋಷಿಸುತ್ತೇನೆ ಎಂದು ಭಾವುಕಾರಾಗಿ ನುಡಿದಿದ್ದರು. ಈ ಹಿನ್ನಲೆಯಲ್ಲಿ ಪ್ರಿಯಾಂಕಾ ಗಾಂಧೀ ಇನ್ನು ಮುಂದೆ ರಾಯ ಬರೇಲಿಯಲ್ಲಿ ತಾಯಿಯ ಸ್ಥಾನವನ್ನು ತುಂಬುತ್ತಾರೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.


ಈ ವಿಷಯದ ಕುರಿತಾಗಿ ಪ್ರತಿಕ್ರಯಿಸಿರುವ ಪ್ರಿಯಂಕಾ ಗಾಂಧೀ ಕಾಂಗ್ರೆಸ್ ನ ಕೇಂದ್ರ ಕಚೇರಿಯಲ್ಲಿ ಮಾತನಾಡುತ್ತ ನಾನು 2019 ರಲ್ಲಿ ರಾಯ ಬರೇಲಿಯಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ 2019ರ ಲೋಕಸಭಾ  ಚುನಾವಣೆಯಲ್ಲಿಯೂ ಕೂಡಾ ಸೋನಿಯಾ ಗಾಂಧಿಯವರೇ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಇಲ್ಲಿ ಸುದ್ದಿಗಾರಿಗೆ ಸ್ಪಷ್ಟಪಡಿಸಿದರು.