ನವದೆಹಲಿ: ಇಂದು ಮಾರುಕಟ್ಟೆಯಲ್ಲಿ ರೆಮೆಡಿಸಿವಿರ್ ನ ಮತ್ತೊಂದು ಔಷಧಿ ಬಿಡುಗಡೆಯಾಗಿದೆ. ಕೊರೊನಾ ಚಿಕಿತ್ಸೆಗಾಗಿ ಈ ಔಷಧಿಯನ್ನು ಬಳಸಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ನಿರ್ಮಾಣಗೊಂಡಿದೆ. ಕಂಪನಿ ಈ ಔಷಧಿಯ ಮಾರುಕಟ್ಟೆ ಬೆಲೆಯನ್ನು ರೂ.4800 ನಿಗದಿಪಡಿಸಿದೆ. ಇದಕ್ಕೂ ಮೊದಲು ಹೆಟೆರೋ ಫಾರ್ಮಸಿಯ ರೆಮೇಡಿಸಿವಿರ್ ರೂ.5400ಕ್ಕೆ ಮತ್ತು ಸಿಪ್ಲಾ ಫಾರ್ಮಸಿಯ ರೆಮೇಡಿಸಿವಿರ್ ಔಷಧಿಗಳು ರೂ.400೦ಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಈ ಔಷಧಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ನಿರ್ಮಾಣವಾದ ಕಾರಣ ಕಪ್ಪು ಮಾರುಕಟ್ಟೆಯಲ್ಲಿ ಈ ಔಷಧಿ ನಿಗದಿತ ಬೆಲೆಗಿಂತ 10 ಪಟ್ಟು ಹೆಚ್ಚು ಬೆಲೆಗೆ ಮಾರಾಟಮಾಡಲಾಗುತ್ತಿದೆ. ಬೇರೆ ಕಂಪನಿಗಳ ಸಪ್ಲೈ ಮಾರುಕಟ್ಟೆಯಲ್ಲಿ ಹೆಚ್ಚಾಗುವುದರಿಂದ ಮಾರುಕಟ್ಟೆಯಲ್ಲಿ ಇವುಗಳ ಅಕ್ರಮ ಮಾರಾಟಕ್ಕೆ ಕಡಿವಾಣ ಬೀಳಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರ ಮಾತು ಗುಜರಾತ್ ನ ಔಷಧಿ ನಿಯಂತ್ರಕರು ಹಲವು ಜನರ ಇರುದ್ಧ ಪ್ರಕರಣಗಳನ್ನು ದಾಖಲಿಸುವ ಮೂಲಕ ಕ್ರಮ ಕೈಗೊಂಡಿದ್ದಾರೆ. ಕಾರಣವಿಲ್ಲದೆ ವೈದ್ಯರು ರೋಗಿಗಳಿಗೆ ಈ ಔಷಧಿಯನ್ನು ಪ್ರಿಸ್ಕ್ರೈಬ್ ಮಾಡುವುದರ ಮೇಲೆ ನಿಗಾ ವಹಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಜನರ ಸಂಕಷ್ಟಗಳನ್ನು ಅರಿತು ಹೆಲ್ಪ್ ಲೈನ್ ನಂಬರ್ ಆರಂಭಿಸಲು ಕೇಂದ್ರ ಸರ್ಕಾರ ಕೂಡ ಕಂಪನಿಗಳಿಗೆ ಸೂಚಿಸಿದೆ. ಇದರಿಂದ ಅವಶ್ಯವಿರುವವರಿಗೆ ಔಷಧಿಯ ಮಾರಾಟದ ಕುರಿತು ನಿಶ್ಚಿತ ಮಾಹಿತಿ ಸಿಗಲಿದೆ. ಜೊತೆಗೆ ಅವರು ತಮ್ಮ ಅವಶ್ಯಕತೆಯನ್ನು ಹೇಳಿಕೊಲ್ಲಬಹುದಾಗಿದೆ. ಈ ಔಷಧಿ ಕೊರೊನಾ ಚಿಕಿತ್ಸೆಯಲ್ಲಿ ಸ್ವಲ್ಪಮಟ್ಟಿಗೆ ಪರಿಣಾಮಕಾರಿ ಸಾಬೀತಾಗುತ್ತಿದೆ. ಈ ಹಿನ್ನೆಲೆ ವೈದ್ಯರೂ ಕೂಡ ಈ ಔಷಧಿಯನ್ನು ಪ್ರಿಸ್ ಕ್ರೈಬ್ ಮಾಡುತ್ತಿದ್ದಾರೆ.


ರೆಮೆಡಿಸಿವಿರ್ ಸಪ್ಲೈ ನಲ್ಲಿ ಹೆಚ್ಚಳ 
-ಮೈಲಾನ್ ರೆಮೆಡಿಸಿವಿರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
-ಸುಮಾರು 4800 ರೂಪಾಯಿ ದರದಲ್ಲಿ ಸರಬರಾಜು ಮಾಡಲಾಗುವುದು.
-ಪೂರೈಕೆಯಲ್ಲಿನ ತೊಂದರೆಗಾಗಿ 7829980066 ಸಹಾಯವಾಣಿಗೆ ಕರೆ ಮಾಡಬಹುದು.
-ಹೆಟೆರೊ ಲ್ಯಾಬ್ಸ್ ಈ ಔಷಧಿ ಮೊದಲು 5400 ರೂ.ಗೆ ಬಿಡುಗಡೆಯಾಗಿದೆ
-ಆ ನಂತರ ಸಿಪ್ಲಾವನ್ನು 4000 ರೂ.ಗಳ ದರದಲ್ಲಿ ಈ ಔಷಧಿಯನ್ನು ಬಿಡುಗಡೆ ಮಾಡುತ್ತಿದೆ.
-ಔಷಧಿಯ ಪೂರೈಕೆ ಕಡಿಮೆ ಇರುವುದರಿಂದ ಈ ಔಷಧಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ.
-ಮಹಾರಾಷ್ಟ್ರ ಮತ್ತು ಗುಜರಾತ್‌ನ ಎಫ್‌ಡಿಎ ಈಗಾಗಲೇ ಕ್ರಮ ಕೈಗೊಳ್ಳಲು ಪ್ರಾರಂಭಿಸಿವೆ.
-ಗುಜರಾತ್‌ನಲ್ಲಿ ಔಷಧಿಯ ಪ್ರಿಸ್ಕ್ರಿಪ್ಶನ್ ಮೇಲೆ ನಿಗಾವಹಿಸಲಾಗುತ್ತಿದೆ.
-ಔಷಧಿಯನ್ನು ನಿಗದಿತ ದರಕ್ಕಿಂತ 10 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು.
-ಕರೋನಾ ಚಿಕಿತ್ಸೆಯಲ್ಲಿ ಈ ಔಷಧಿ ಸ್ವಲ್ಪ ಪರಿಣಾಮಕಾರಿಯಾಗಿದೆ.
-ಆಸ್ಪತ್ರೆಗಳು ಮತ್ತು ಸಂಸ್ಥೆಗಳಿಗೆ ನೇರವಾಗಿ ಈ ಔಷಧಿಯನ್ನು ಸರಬರಾಜು ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.