ನವದೆಹಲಿ: ಭಾರತದಲ್ಲಿ ಅನೇಕ ದೇವಸ್ಥಾನಗಳಿವೆ. ಪ್ರತಿಯೊಂದು ದೇವಸ್ಥಾನಕ್ಕೂ ತನ್ನದೇ ಆದ ನಂಬಿಕೆಗಳು ಮತ್ತು ಧಾರ್ಮಿಕ ಇತಿಹಾಸವಿದೆ. ಇಲ್ಲಿನ ಹಿಂದೂ ಜನರು ದೇವರನ್ನು ಎಷ್ಟು ನಂಬುತ್ತಾರೆಂದರೆ ದೇವಸ್ಥಾನಕ್ಕಾಗಿ ಏನೂ ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. ಆದರೆ ಇದುವರೆಗೂ ಬಾಗಿಲು ತೆರೆಯದ ಪ್ರಪಂಚದ ಏಕೈಕ ದೇವಾಲಯದ ಬಗ್ಗೆ ನಿಮಗೆ ತಿಳಿದಿದೆಯೇ. ಇದರ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ 


COMMERCIAL BREAK
SCROLL TO CONTINUE READING

ಈ ದೇವಾಲಯದಲ್ಲಿ ದೊಡ್ಡ ನಿಧಿ ಇದೆ


ಈ ದೇವಸ್ಥಾನವು ಕೋಟ್ಯಂತರ ರೂ. ಮೌಲ್ಯದ ಅಪಾರ ಸಂಪತ್ತನ್ನು(Sree Padmanabhaswamy Temple Treasure) ಹೊಂದಿದೆ ಎಂದು ಹೇಳಲಾಗಿದೆ. ಈ ದೇವಾಲಯದ ನಂಬಿಕೆಗಳೆಂದರೆ ಪ್ರತಿದಿನ ಸಾವಿರಾರು ಭಕ್ತರು ಇಲ್ಲಿಗೆ ಬಂದು ಲಕ್ಷಾಂತರ ರೂ. ನಗದು ಹಣ, ಚಿನ್ನ, ಬೆಳ್ಳಿ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ದಾನ ಮಾಡುತ್ತಾರೆ. ಜನರು ಭಾವನಾತ್ಮಕವಾಗಿ ಈ ದೇವಸ್ಥಾನದ ಜೊತೆಗೆ ನಂಟು ಹೊಂದಿದ್ದಾರೆ. ಆದರೆ ಇದರ ಹೊರತಾಗಿಯೂ ಈ ದೇವಾಲಯದ ಬಾಗಿಲು ಇನ್ನೂ ತೆರೆದಿಲ್ಲ. ಈ ದೇವಾಲಯದಲ್ಲಿ ಒಂದು ದೊಡ್ಡ ನಿಧಿ ಇದೆ ಎಂದು ಜನರು ನಂಬಿದ್ದಾರೆ. ಆದರೆ ಈ ದೇವಾಲಯದ ನೆಲಮಾಳಿಗೆಯ ಬಾಗಿಲು ಯಾವಾಗ ತೆರೆಯುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದೀಗ ದೇವಸ್ಥಾನದ ಬಾಗಿಲನ್ನು ಯಾರು ತೆರೆಯಬಹುದು ಎಂಬುದರ ಬಗ್ಗೆ ಕುತೂಹಲ ಮೂಡಿದೆ.  


ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ಅಡುಗೆ ಪಾತ್ರೆಯಲ್ಲಿ ಅಳುತ್ತಿರುವ ಮಗುವಿನ ಚಿತ್ರ..!


ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನ ಕೇರಳದಲ್ಲಿದೆ


ಕೇರಳದ ತಿರುವನಂತಪುರಂ ನಗರದ ಮಧ್ಯದಲ್ಲಿರುವ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯ(Sree Padmanabhaswamy Temple)ದ ಬಗ್ಗೆ ನಿಮಗೆ ಗೊತ್ತಿರಬಹುದು. ಇದು ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ಪುರಾತನ ದೇವಾಲಯವನ್ನು ಹಿಂದಿನ ರಾಜಮನೆತನದ ತಿರುವಾಂಕೂರಿನವರು ನೋಡಿಕೊಳ್ಳುತ್ತಿದ್ದರು. ಈ ದೇವಾಲಯದ 6 ಕಮಾನುಗಳಲ್ಲಿ ಒಟ್ಟು 20 ಬಿಲಿಯನ್ ನಷ್ಟು ಸಂಪತ್ತು ಇದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ ದೇವಾಲಯದ ಗರ್ಭಗೃಹದಲ್ಲಿ ವಿಷ್ಣುವಿನ ಬೃಹತ್ ಚಿನ್ನದ ವಿಗ್ರಹವಿದ್ದು, ಇದನ್ನು ನೋಡಲು ಸಾವಿರಾರು ಭಕ್ತರು ದೂರದೂರುಗಳಿಂದ ಇಲ್ಲಿಗೆ ಬರುತ್ತಾರೆ. ಈ ವಿಗ್ರಹದ ಅಂದಾಜು ವೆಚ್ಚವೇ 500 ಕೋಟಿ ರೂ. ಅಂತಾ ಹೇಳಲಾಗಿದೆ.


ಇದನ್ನೂ ಓದಿ: SBIನಲ್ಲಿ ಖಾತೆ ಇದ್ದರೆ ಕೇವಲ ರೂ.342 ಡಿಪಾಸಿಟ್ ಮಾಡಿ, 4 ಲಕ್ಷ ರೂ.ಗಳ ಬಂಪರ್ ಲಾಭ ಪಡೆಯಿರಿ


6ನೇ ಕತ್ತಲಕೋಣೆ ತೆರೆಯಲು ಯಾರಿಗಿದೆ ಧೈರ್ಯ?


ಈ ದೇವಾಲಯದಲ್ಲಿ ಅನೇಕ ನೆಲಮಾಳಿಗೆಗಳು ಸಹ ಇವೆ. ಇದರಲ್ಲಿ ಕೋಟ್ಯಂತರ ರೂ. ಮೌಲ್ಯದ ಸಂಪತ್ತನ್ನು ವಿವಿಧ ರೀತಿಯಲ್ಲಿ ಬಚ್ಚಿಡಲಾಗಿದೆ(Padmanabhaswamy Temple Secrets) ಎಂದು ಹೇಳಲಾಗಿದೆ. ಕೆಲವು ವರ್ಷಗಳ ಹಿಂದೆ ನ್ಯಾಯಾಲಯದ ಆದೇಶದಂತೆ ಈ ದೇವಾಲಯದ 5 ನೆಲಮಾಳಿಗೆಗಳನ್ನು ತೆರೆಯಲಾಗಿತ್ತು. ಇದರಡಿ ಇದ್ದ ಸಾವಿರಾರು ಕೋಟಿ ರೂ. ಮೌಲ್ಯದ ನಿಧಿ ಪತ್ತೆಯಾಗಿತ್ತು. ಆ ಸಮಯದಲ್ಲಿ ಈ ನಿಧಿಯ ಬಗ್ಗೆ ಪ್ರಪಂಚದಾದ್ಯಂತ ವ್ಯಾಪಕ ಚರ್ಚೆಯಾಗಿತ್ತು. ಆದರೆ 6ನೇ ನೆಲಮಾಳಿಗೆಯನ್ನು ತೆರೆಯಲು ಮುಂದಾದಾಗ ಪೂಜಾರಿ ಮತ್ತು ರಾಜಮನೆತನದವರು ನಿರಾಕರಿಸಿದ್ದರು. ಇದಕ್ಕೆ ಬಲವಾದ ಕಾರಣವನ್ನು ಅಂದು ತಿಳಿಸಲಾಗಿತ್ತು. 6ನೇ ನೆಲಮಾಳಿಗೆಯು ವಿಷ್ಣುವಿನ ಆಸನದ ಕೆಳಗೆ ಇದೆ ಎಂದು ಅವರು ಹೇಳಿದ್ದರು. ಯಾರಾದರೂ ಆ ನೆಲಮಾಳಿಗೆಯನ್ನು ತೆರೆಯಲು ಮುಂದಾದರೆ ದೇವರು ಕೋಪಗೊಳ್ಳುತ್ತಾನೆ ಮತ್ತು ಜಗತ್ತು ಕೂಡ ಕೊನೆಗೊಳ್ಳಬಹುದು ಅಂತಾ ಎಚ್ಚರಿಕೆ ನಿಡಲಾಗಿತ್ತು. ಹೀಗಾಗಿ ಇಂದಿಗೂ ಅದರ ಬಾಗಿಲನ್ನೂ ತೆರೆಯಲು ಯಾರೂ ಧೈರ್ಯ ಮಾಡಿಲ್ಲ.


(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.