ಬೆಂಗಳೂರು: ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ದಂಪತಿಯ ಮಗುವಿಗೆ ಭಾನುವಾರ ಆದ್ಯವೀರ್ ನರಸಿಂಹರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನ ಅರಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮೋದಾದೇವಿ ಒಡೆಯರ್ ಹಾಗೂ ರಾಜಮನೆತನದ ಕುಟುಂಬಗಳ ಸಮ್ಮುಖದಲ್ಲಿ ಆದ್ಯವೀರ ನರಸಿಂಹ ರಾಜ ಒಡೆಯರ್ ಎಂದು ನಾಮಕರಣ ಮಾಡಲಾಯಿತು. 


ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಡಿ.6 ರಂದು ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮೂಲಕ ಮೈಸೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯ ಆಗಮನವಾಯಿತು. 2015 ರಲ್ಲಿ ರಾಜಮಾತೆ ಪ್ರಮೋದಾ ದೇವಿ ಅವರು ಯದುವೀರ್ ಅವರನ್ನು ದತ್ತು ಸ್ವೀಕರಿಸಿ ಮೈಸೂರು ಸಂಸ್ಥಾನದ ರಾಜವಂಶದ ಉತ್ತರಾಧಿಕಾರಿಯನ್ನಾಗಿಸಿದ್ದರು. 2016 ರ ಜೂನ್ 27 ರಂದು ಯದುವೀರ್ ರಾಜಸ್ಥಾನ ರಾಜ ಕುಟುಂಬದ ತ್ರಿಷಿಕಾ ಕುಮಾರಿ ಅವರನ್ನು ವಿವಾಹವಾಗಿದ್ದರು.