ಕಪ್ಪುಶರ್ಟ್ ತೊಟ್ಟು ಕೇಂದ್ರದ ವಿರುದ್ದ ಪ್ರತಿಭಟಿಸಿದ ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ಶಾಸಕರು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರವು ತೋರುತ್ತಿರುವ ನೀತಿಯ ವಿಚಾರವಾಗಿ ಕಪ್ಪುಶರ್ಟ್ ತೊಟ್ಟು ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟಿಸಿದರು.
ನವದೆಹಲಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ಶಾಸಕರು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರವು ತೋರುತ್ತಿರುವ ಧೋರಣೆ ವಿಚಾರವಾಗಿ ಕಪ್ಪುಶರ್ಟ್ ತೊಟ್ಟು ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟಿಸಿದರು.
ಇಂದು ಸದನಕ್ಕೆ ಹೊರಡುವ ಮುನ್ನ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟಿಸುವ ನಿಟ್ಟಿನಲ್ಲಿ ಭಿನ್ನ ವೇಷದಲ್ಲಿ ನಾಯ್ಡು ಕಾಣಿಸಿಕೊಂಡರು.ಕೆಲವು ದಿನಗಳ ಹಿಂದೆಯೇ ಈ ರೀತಿಯ ಪ್ರತಿಭಟನೆಗೆ ನಾಯಡು ಹಾಗೂ ಪಕ್ಷದ ಶಾಸಕರು ಸಿದ್ದರಾಗಿದ್ದರು ಎಂದು ತಿಳಿದುಬಂದಿದೆ.
ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ನಡೆಗೆ ನನ್ನ ರಕ್ತ ಕುದಿಯುತ್ತಿದೆ ಎಂದು ಚಂದ್ರಬಾಬು ನಾಯ್ಡು ತಿಳಿಸಿದರು. ಫೆಬ್ರುವರಿ 1 ನ್ನು ಆಂಧ್ರಪ್ರದೇಶದಲ್ಲಿ ಪ್ರತಿಭಟನಾ ದಿನವೆಂದು ಘೋಷಿಸಲಾಗಿದೆ, ಸದನದಲ್ಲಿ ಟಿಡಿಪಿ ಶಾಸಕರು ಹಾಗೂ ಕೆಲವು ಬಿಜೆಪಿ ಎಂಎಲ್ಎಗಳು ಹಾಜರಿದ್ದರು. ಇನ್ನೊಂದೆಡೆಗೆ ವೈಎಸ್ ಆರ್ ಕಾಂಗ್ರೆಸ್ ಸದಸ್ಯರು ಸದನಕ್ಕೆ ಬರುವುದು ಬಿಟ್ಟು ಬಹಳ ದಿನಗಳಾಯಿತು.