ಕೊರೊನಾವೈರಸ್ ಲೇಟೆಸ್ಟ್ ಅಪ್‌ಡೇಟ್: ಇನ್ನೇನು ಕರೋನಾವೈರಸ್ ಎಂಬ ಮಹಾಮಾರಿಯಿಂದ ನಾವು ಪಾರಾಗಿಬಿಟ್ಟೆವು ಎಂದು ನಿಟ್ಟುಸಿರು ಬಿಡುವ ಹೊತ್ತಿಗೆ ಮತ್ತೆ ದೇಶದ ಹಲವು ಭಾಗಗಳಲಿ ಕರೋನಾ ಪ್ರಕರಣಗಳು ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಕರೋನಾ ನಾಲ್ಕನೇ ಅಲೆಯ ಭೀತಿ ಸೃಷ್ಟಿಸಿದೆ. ಏತನ್ಮಧ್ಯೆ, ದೇಶದ ಈಶಾನ್ಯ ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ ಎಂದು ವರದಿಯಾಗಿದೆ. ನಾಗಾಲ್ಯಾಂಡ್‌ನಿಂದ ಒಳ್ಳೆಯ ಸುದ್ದಿಯೊಂದು ಹೊರಬಿದ್ದಿದ್ದು ಈ ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಝೀರೋ ಆಗಿದೆ.


COMMERCIAL BREAK
SCROLL TO CONTINUE READING

ಕರೋನಾಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೊನೆಯ ರೋಗಿ ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್:
ಹೌದು, ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್ ಈಗ ಕೊರೊನಾವೈರಸ್‌ನಿಂದ ಸಂಪೂರ್ಣವಾಗಿ ಮುಕ್ತವಾಗಿದೆ. ರಾಜ್ಯದ  ದಿಮಾಪುರ್ ನಗರದಲ್ಲಿ ಕೋವಿಡ್-19 ಸೋಂಕಿನಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯು ನಿನ್ನೆ (24 ಏಪ್ರಿಲ್) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ. ಇದರೊಂದಿಗೆ  ನಾಗಾಲ್ಯಾಂಡ್‌ ಕರೋನಾ ಮುಕ್ತ ರಾಜ್ಯವಾಗಿ ಹೊರಹೊಮ್ಮಿದೆ. ಮಾತ್ರವಲ್ಲ, ದೇಶದಲ್ಲಿ ಕರೋನಾ ಮುಕ್ತ ರಾಜ್ಯವಾಗಿ ಸಾಧನೆ ಮಾಡಿದ ಮೊದಲ ರಾಜ್ಯ ಇದಾಗಿದೆ.


ಇದನ್ನೂ ಓದಿ- ಈ ರಾಜ್ಯದಲ್ಲಿ ಈಗ ಮಾಸ್ಕ ಧರಿಸುವುದು ಕಡ್ಡಾಯ, ತಪ್ಪಿದಲ್ಲಿ 500 ರೂ.ದಂಡ...!


ನಾಗಾಲ್ಯಾಂಡ್‌ನಲ್ಲಿ ಕರೋನಾದಿಂದ ಚೇತರಿಸಿಕೊಂಡವರ ಪ್ರಮಾಣ 93.68% : 
ಗಮನಾರ್ಹವಾಗಿ, ಮೂವರು ಕರೋನಾ ಸೋಂಕಿತರು ತಮಿಳುನಾಡಿನ ಚೆನ್ನೈಯಿಂದ ಹಿಂದಿರುಗಿದ ಬಳಿಕ ನಾಗಾಲ್ಯಾಂಡ್‌ನಲ್ಲಿ 25 ಮೇ 2020 ರಂದು  ಮೊದಲ ಕರೋನಾವೈರಸ್ ಪ್ರಕರಣ ವರದಿಯಾಗಿತ್ತು.  ಇದಾದ ನಂತರ ಸುಮಾರು ಎರಡು ವರ್ಷಗಳಲ್ಲಿ ಇಲ್ಲಿ 35,488 ಮಂದಿ ಕರೋನಾ ಸೋಂಕಿಗೆ ತುತ್ತಾಗಿದ್ದರು. ಈ ವೇಳೆ  33,244  ಗುನಮುಖರಾದರೆ, 760 ಜನರು ಕೋವಿಡ್-19 ನಿಂದಾಗಿ ಮೃತಪಟ್ಟಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಕರೋನಾದಿಂದ ಚೇತರಿಸಿಕೊಂಡವರ ಪ್ರಮಾಣ 93.68 ಪ್ರತಿಶತದದಷ್ಟು ಇರುವುದು ಈ ರಾಜ್ಯದಲ್ಲಿ ಕರೋನಾ ನಿರ್ವಹಿಸಿದ ಸರ್ಕಾರದ ಕೆಲಸಕ್ಕೆ ಕನ್ನಡಿ ಹಿಡಿದಂತಿದೆ.


ರಾಜ್ಯದಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ:
ನಾಗಾಲ್ಯಾಂಡ್‌ನ ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ,  ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಕೋವಿಡ್-19 ಪ್ರಕರಣ ದಾಖಲಾಗಿಲ್ಲ. ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್‌ನಲ್ಲಿ ಒಂದು ದಿನದಲ್ಲಿ ಯಾವುದೇ ಕರೋನಾ ಸೊಂಕಿತರು ಪತ್ತೆಯಾಗಿಲ್ಲ. ಆದಾಗ್ಯೂ, ಯಾವುದೇ ಕಾರಣಕ್ಕೂ ಕರೋನಾ ಇಲ್ಲವೇ ಇಲ್ಲ ಎಂದು ಮೈಮರೆಯುವಂತಿಲ್ಲ ಎಂದಿರುವ ಆರೋಗ್ಯ ಇಲಾಖೆ ಕರೋನಾ ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. 


ಇದನ್ನೂ ಓದಿ- ಮಗಳ ಮದುವೆಯಲ್ಲಿ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಿದ ಕುಟುಂಬ


ದೇಶದ ಇತರ ಭಾಗಗಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು:
ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾನುವಾರ ದೇಶದಲ್ಲಿ  2593 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 44 ಜನರು ಈ ಮಹಾಮಾರಿಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ನೂತನ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಕರೋನಾ ಸಕ್ರಿಯ ರೋಗಿಗಳ ಸಂಖ್ಯೆ 15,873 ಕ್ಕೆ  ಏರಿಕೆ ಆಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕರೋನಾ ಸೋಂಕಿಗೆ ಒಳಗಾದವರ ಸಂಖ್ಯೆ 4,30,57,545ಕ್ಕೆ ಏರಿಕೆ ಆಗಿದ್ದರೆ, ಈ ಕರೋನಾವೈರಸ್‌ಗೆ ಬಲಿಯಾದವರ  ಸಂಖ್ಯೆ 5,22,193ಕ್ಕೆ ಹೆಚ್ಚಳವಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.