ಕೊಹಿಮಾ: ನಾಗಲ್ಯಾಂಡ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, ಸಧ್ಯ ಲಭ್ಯವಾಗಿರುವ 15 ಮತಕ್ಷೇತ್ರದಲ್ಲಿ ಆಡಳಿತಾರೂಢ ನಾಗಾ ಪೀಪಲ್ಸ್ ಫ್ರಂಟ್ ಮತ್ತು ಬಿಪಿಪಿ-ಎನ್ಡಿಪಿಪಿ ಮೈತ್ರಿಕೂಟವು  ಏಳು ಸ್ಥಾನಗಳಲ್ಲಿ ಮುನ್ನಡೆಸಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಎನ್ಪಿಎಫ್  ಪಕ್ಷವು ಚೋಜುಬಾ, ಡಿಮಾಪುರ್-ಐಐ, ಲಾಂಗ್ಖಿಮ್ ಚೇರ್, ನೋಕ್ಲಾಕ್, ಥೋನೋಕ್ನ್ಯು, ತುಯೆನ್ಸಾಂಗ್ ಸಡರ್-ಐ ಮತ್ತು ತುಯೆನ್ಸಾಂಗ್ ಸಡರ್ II ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 


ಬಿಜೆಪಿಯು ಘಸ್ಪಾನಿ-ಐ, ದಿಮಾಪುರ್-ಐ ಮತ್ತು ಸಿಯೋಚಂಗ್ ಸಿಟಿಮಿ ಮೂರು ಕ್ಷೇತ್ರಗಳಲ್ಲಿ  ಮುನ್ನಡೆ ಸಾಧಿಸಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯ ಮೈತ್ರಿ ಪಕ್ಷವಾಗಿರುವ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್ಡಿಪಿಪಿ) ಯುಸ್ಥಾನಗಳನ್ನು  ಷಾಮಟರ್ ಚೆಸ್ಸೋರ್, ಟೆನ್ನಿಂಗ್, ಕೊಹಿಮಾ ಪಟ್ಟಣ ಮತ್ತು ನೋಕ್ಸೆನ್ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.