ನವದೆಹಲಿ: ಒಂದು ಕಡೆ ಇಸ್ರೋ ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್‌ನೊಂದಿಗೆ ಸಂಪರ್ಕವನ್ನು ಕಲ್ಪಿಸುವ ಪ್ರಯತ್ನಗಳನ್ನು ಮುಂದುವರೆಸಿದ್ದರೆ, ಇತ್ತ ಕಡೆ ಈಗ ನಾಗಪುರ್ ಸಿಟಿ ಪೋಲಿಸ್ ಟ್ವೀಟ್ ಜನರ ಮನಗೆದ್ದಿದೆ.


COMMERCIAL BREAK
SCROLL TO CONTINUE READING

ಶನಿವಾರದಂದು ಇನ್ನೇನು ಚಂದ್ರನ ಮೇಲೆ ಮೃದುವಾಗಿ ಇಳಿಯಬೇಕೆಂದಿದ್ದ ಸಂದರ್ಭದಲ್ಲಿ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡಿತ್ತು. ಆದರೆ ಭಾನುವಾರದಂದು ಅದು ಇರುವ ಸ್ಥಳ ಪತ್ತೆಯಾಗಿದ್ದರು ಕೂಡ ಸಂಪರ್ಕ ಮಾತ್ರ ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಈಗ ನಾಗಪುರ್ ಸಿಟಿ ಪೋಲಿಸ್ ವಿಭಿನ್ನವಾಗಿ ಟ್ವೀಟ್ ಮಾಡುವ ಮೂಲಕ ಟ್ವಿಟ್ಟರ್ ಬಳಕೆದಾರರ ಮನಗೆದ್ದಿದೆ.



ನಾಗಪುರ್ ಸಿಟಿ ಪೋಲಿಸ್ ಸಂಪರ್ಕ ಕಳೆದುಕೊಂಡಿರುವ ವಿಕ್ರಂಗೆ ಪ್ರತಿಕ್ರಿಯಿಸುತ್ತಾ  ಸಿಗ್ನಲ್ ಬ್ರೇಕ್ ಮಾಡಿದ್ದಕ್ಕೆ ದಂಡ ವಿಧಿಸುವುದಿಲ್ಲ ಎಂದು ಹೇಳಿ ಅದು ಟ್ವೀಟ್ ಮಾಡಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ತಂದಿರುವ ಮೋಟಾರ್ ಕಾಯ್ದೆ ಅಡಿ ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ಚಾಲಕರಿಗೆ ಭಾರಿ ದಂಡ ವಿಧಿಸಲಾಗುತ್ತದೆ.


ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ನಾಗಪುರ ಸಿಟಿ ಪೋಲಿಸ್ ' ಪ್ರೀತಿಯ ವಿಕ್ರಮ್,ದಯವಿಟ್ಟು ಪ್ರತಿಕ್ರಿಯಿಸಿ. ನೀವು ಸಿಗ್ನಲ್ ಬ್ರೇಕ್ ಮಾಡಿದ್ದಕ್ಕೆ ಯಾವುದೇ ರೀತಿಯ ತಂಡ ವಿಧಿಸುವುದಿಲ್ಲ 'ಎಂದು ಟ್ವೀಟ್ ಮಾಡಿರುವುದು ಸಾಕಷ್ಟು ಜನರ ಗಮನ ಸೆಳೆದಿದೆ. ಈಗ ಈ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.