ಪಾಕ್ ಸೈನಿಕರ ಶೆಲ್ ದಾಳಿಗೆ ಭಾರತೀಯ ಸೈನಿಕ ಹುತಾತ್ಮ
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುತ್ತಿರುವುದರಿಂದ ಭಾರತೀಯ ಸೇನಾ ಸೈನಿಕನೊಬ್ಬ ಶುಕ್ರವಾರ ಹುತಾತ್ಮನಾಗಿದ್ದಾನೆ.
ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುತ್ತಿರುವುದರಿಂದ ಭಾರತೀಯ ಸೇನಾ ಸೈನಿಕನೊಬ್ಬ ಶುಕ್ರವಾರ ಹುತಾತ್ಮನಾಗಿದ್ದಾನೆ.
ದಾಳಿಯಲ್ಲಿ ಸೈನಿಕ ನಾಯಕ್ ರಾಜೀಬ್ ಥಾಪಾ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಈಗ ಈ ದಾಳಿಯ ಕುರಿತಾಗಿ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯದ ಲೆಫ್ಟಿನೆಂಟ್ ಕರ್ನಲ್ ದೇವೆಂದರ್ ಆನಂದ್ 'ಪಾಕಿಸ್ತಾನ ಸೇನೆಯು ಶುಕ್ರವಾರದಂದು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡಿದೆ ಈ ವೇಳೆ ನಾಯಕ್ ರಾಜೀಬ್ ಥಾಪಾ ಹುತಾತ್ಮರಾದರು ” ಎಂದು ಹೇಳಿದರು.
"ಅವರು ಧೈರ್ಯಶಾಲಿ, ಹೆಚ್ಚು ಪ್ರೇರಿತ ಮತ್ತು ಪ್ರಾಮಾಣಿಕ ಸೈನಿಕರಾಗಿದ್ದರು. ಸರ್ವೋಚ್ಚ ತ್ಯಾಗ ಮತ್ತು ಕರ್ತವ್ಯದ ಭಕ್ತಿಗಾಗಿ ರಾಷ್ಟ್ರವು ಯಾವಾಗಲೂ ಅವರಿಗೆ ಋಣಿಯಾಗಿರುತ್ತದೆ, ಎಂದು ಆನಂದ್ ಹೇಳಿದರು. ಪಾಕ್ ನ ಈ ದಾಳಿಗೆ ಭಾರತ ಸೂಕ್ತ ಉತ್ತರ ನೀಡುತ್ತಿದೆ ಎಂದು ಅವರು ತಿಳಿಸಿದರು. ಹುತಾತ್ಮರಾಗಿರುವ ಥಾಪಾ ಅವರನ್ನು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಮೆಚ್ಪರಾ ಗ್ರಾಮದ ನಿವಾಸಿಯಾಗಿದ್ದು, ಅವರಿಗೆ ಪತ್ನಿ ಖುಸ್ಬು ಮಂಗರ್ ಥಾಪಾ ಇದ್ದಾರೆ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ 370 ನೇ ವಿಧಿಯನ್ನು ಭಾರತ ರದ್ದುಪಡಿಸಿದ ನಂತರ ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆಯ ನಿದರ್ಶನಗಳಲ್ಲಿ ಏರಿಕೆಯಾಗಿದೆ.ಉಭಯ ದೇಶಗಳ ನಡುವಿನ 2003 ರ ಕದನ ವಿರಾಮ ವ್ಯವಸ್ಥೆಯನ್ನು ಗೌರವಿಸಬೇಕು ಎಂದು ಭಾರತ ಪಾಕಿಸ್ತಾನವನ್ನು ಒತ್ತಾಯಿಸಿದೆ.