ನೈನಿತಾಲ್: ಖಾಲಿ ಹೊಟ್ಟೆಯಲ್ಲಿ `ಐರನ್` ಮಾತ್ರೆ ಸೇವಿಸಿದ್ದೇ ಮಕ್ಕಳ ಅಸ್ವಸ್ಥತೆಗೆ ಕಾರಣ!
ನೈನಿತಾಲ್ ನ ಓಖಂಡ್ರಾ ಬ್ಲಾಕ್ ನಲ್ಲಿರುವ ರಾಜ್ಯ ಪ್ರಾಥಮಿಕ ಶಾಲೆ ಕಾಕೋಡ್ಗಜ್ನಲ್ಲಿ ಖಾಲಿ ಹೊಟ್ಟೆಯಲ್ಲಿ `ಐರನ್` ಟ್ಯಾಬ್ಲೆಟ್ ಸೇವಿಸಿದ ಬಳಿಕ ಹಲವು ಮಕ್ಕಳು ಅಸ್ವಸ್ಥರಾಗಿದ್ದರು.
ನೈನಿತಾಲ್: ನೈನಿತಾಲ್ ನ ಓಖಂಡ್ರಾ ಬ್ಲಾಕ್ ನಲ್ಲಿರುವ ರಾಜ್ಯ ಪ್ರಾಥಮಿಕ ಶಾಲೆ ಕಾಕೋಡ್ಗಜ್ನಲ್ಲಿ ಖಾಲಿ ಹೊಟ್ಟೆಯಲ್ಲಿ 'ಐರನ್' ಟ್ಯಾಬ್ಲೆಟ್ ಸೇವಿಸಿದ ಬಳಿಕ ಹಲವು ಮಕ್ಕಳು ಅಸ್ವಸ್ಥರಾಗಿರುವ ಬಗ್ಗೆ ಫೆಬ್ರವರಿ 4, 2019 ರಂದು ವರದಿಯಾಗಿತ್ತು. ಪ್ರಕರಣದ ಬಗ್ಗೆ ತನಿಖೆ ಮಾಡಲು CMO ಭಾರ್ತಿ ರಾಣಾ ಅವರ ನಿರ್ದೇಶನದಲ್ಲಿ ಮೂರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿತ್ತು. ಇದೀಗ ಈ ಬಗ್ಗೆ ವರದಿ ಸಲ್ಲಿಸಿರುವ ವಿಚಾರಣಾ ಸಮಿತಿ ಮಕ್ಕಳು ಖಾಲಿ ಹೊಟ್ಟೆಯಲ್ಲಿ 'ಐರನ್' ಮಾತ್ರೆ ಸೇವಿಸಿದ್ದೇ ಮಕ್ಕಳ ಅಸ್ವಸ್ಥತೆಗೆ ಕಾರಣ ಎಂಬ ಅಂಶವನ್ನು ಬಹಿರಂಗಪಡಿಸಿದೆ.
ಖಾಲಿ ಹೊಟ್ಟೆಯಲ್ಲಿ ಮಕ್ಕಳಿಗೆ 'ಐರನ್ ಟ್ಯಾಬ್ಲೆಟ್':
ಐರನ್ ಟ್ಯಾಬ್ಲೆಟ್ ಸೇವಿಸಿದ ಹಲವು ಮಕ್ಕಳು ಖಾಲಿ ಹೊಟ್ಟೆಯಲ್ಲಿದ್ದರು, ನೋಡು ನೋಡುತ್ತಲೇ ಹಲವು ಮಕ್ಕಳು ವಾಂತಿ ಮಾಡಿಕೊಳ್ಳುತ್ತಿದ್ದರು ಎಂದು ಸಮಿತಿಯ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಎಲ್ಲ ಅಂಶಗಳನ್ನು ಪರಿಗಣಿಸಿ ಮತ್ತು ಮಕ್ಕಳೊಂದಿಗೆ ಮಾತಾಡಿದ ನಂತರ, ತನಿಖಾ ಸಮಿತಿಯು ಈ ವರದಿಯನ್ನು CMO ಗೆ ನೀಡಿದೆ.
ಏನಿದು ಪ್ರಕರಣ?
ಫೆಬ್ರವರಿ 4, 2019 ರಂದು ರಾಜ್ಯ ಪ್ರಾಥಮಿಕ ಶಾಲೆಗಳಲ್ಲಿ ಉತ್ತಮ ಆರೋಗ್ಯಕ್ಕಾಗಿ ಮಕ್ಕಳಿಗೆ 'ಐರನ್ ಟ್ಯಾಬ್ಲೆಟ್' ನೀಡಲಾಗುತ್ತಿತ್ತು. ಮಾತ್ರೆಗಳನ್ನು ಸೇವಿಸಿದ ಸ್ವಲ್ಪ ಸಮಯದಲ್ಲಿ ಮಕ್ಕಳ ಆರೋಗ್ಯ ಹದಗೆಟ್ಟಿತು. ಸ್ಥಳದಲ್ಲೇ ಕೆಲವು ಮಕ್ಕಳು ವಾಂತಿ ಮಾಡ ತೊಡಗಿದರು. ಮಕ್ಕಳು ಅಸ್ವಸ್ಥತೆ ಕಂಡು ತಕ್ಷ ಮಕ್ಕಳನ್ನು ಹಲ್ದ್ವಾನಿಯ ಸುಶಿಲಾ ತಿವಾರಿ ಆಸ್ಪತ್ರೆ ದಾಖಲಿಸಲಾಯಿತು. ಆಸ್ಪತ್ರೆಯ ವರದಿಯ ಪ್ರಕಾರ, ಕಬ್ಬಿಣದ ಮಾತ್ರೆ(ಐರನ್ ಟ್ಯಾಬ್ಲೆಟ್)ಗಳ ಕಾರಣ ಒಟ್ಟು 48 ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಳಿಕ ಆರೋಗ್ಯ ಇಲಾಖೆ ಇಡೀ ಪ್ರಕರಣವನ್ನು ತನಿಖೆಮಾಡಲು ವಿಚಾರಣಾ ಸಮಿತಿ ರಚಿಸಿತ್ತು. ಪ್ರಕರಣ ಕುರಿತು ಇಂದು ವರದಿ ಸಲ್ಲಿಸಿರುವ ವಿಚಾರಣಾ ಸಮಿತಿ ಮಾತ್ರೆ ಸೇವಿಸಿದ ಬಹುತೇಕ ಮಕ್ಕಳು ಖಾಲಿ ಹೊಟ್ಟೆಯಲ್ಲಿದ್ದರು ಎಂಬುದನ್ನು ಬಹಿರಂಗಪಡಿಸಿದೆ.
ಶಾಲಾ ಆಡಳಿತಕ್ಕೆ ಸೂಚನೆ:
ತನಿಖೆಯ ವಿಷಯದಲ್ಲಿ, ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧಿಕಾರಿ ಟಿ.ಆರ್.ಟಾಂಪಾ ಅವರು ಮಕ್ಕಳ ಆರೋಗ್ಯವು ಉತ್ತಮವಾಗಿದೆ. ಕೆಲವು ಮಕ್ಕಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಮತ್ತು ಉಳಿದ ಮಕ್ಕಳನ್ನು ಇಂದು (ಗುರುವಾರ) ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದೊಂದು ಗಂಭೀರ ವಿಷಯ ಎಂದಿರುವ ಅವರು ಮಕ್ಕಳು ಊಟಕ್ಕೆ ಬಂದಾಗ ಮಾತ್ರ ಔಷಧಿಗಳನ್ನು ನೀಡಬೇಕೆಂದು ಶಾಲೆಗೆ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿದ್ದಾರೆ.