ಮುಂಬೈ: ಮಹಾರಾಷ್ಟ್ರ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಯಾಗಿ ಐದು ವರ್ಷವಾಯಿತು, ಅವರ ಕುಟುಂಬ ಇನ್ನು ನ್ಯಾಯಕ್ಕಾಗಿ ಕಾಯುತ್ತಿದೆ.


COMMERCIAL BREAK
SCROLL TO CONTINUE READING

ಈಗ ದಾಬೋಲ್ಕರ್ ಹತ್ಯೆಯ ವಿಚಾರದಲ್ಲಿ ನ್ಯಾಯವನ್ನು ಪಡೆಯುವ ನಿಟ್ಟಿನಲ್ಲಿ ದಾಬೋಲ್ಕರ್ ಕುಟುಂಬ "ಜಾವಾಬ್ ದೋ" ಎಂಬ ಹೆಸರಿನ  ಆನ್ಲೈನ್ ​​ಅಭಿಯಾನವನ್ನು ಪ್ರಾರಂಭಿಸಿದೆ, ಅಭಿಯಾನವು ಪ್ರಮುಖವಾಗಿ ಅಪರಾಧಿಗಳನ್ನು ಬಂಧಿಸಿಸಲು ಸಾರ್ವಜನಿಕರಿಂದ  ಬೆಂಬಲವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಾರಂಭಿಸಲಾಗಿದೆ.


ಈಗಾಗಲೇ ಈ ಪ್ರಚಾರವು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಿಡುಗಡೆಯಾಗಿದ್ದು Whatsapp, Twitter, Facebook, Instagram ಮತ್ತು ಇತರ ಸೈಟ್ಗಳಲ್ಲಿ #JawabDo ಮತ್ತು #WhokilledDabholkar ಹ್ಯಾಶ್ಟ್ಯಾಗ್ಗಳನ್ನು ಬಳಸಿಕೊಂಡು ಅಭಿಯಾನವನ್ನು  ಪ್ರಾರಂಭಿಸಿದ್ದಾರೆ.


ದಾಬೋಲ್ಕರ್ ಅವರು ಆಗಸ್ಟ್ 20, 2013 ರಂದು ವಾಕಿಂಗ್ ನಿಂದ ಮನೆಗೆ ತೆರಳುತ್ತಿದ್ದಾಗ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಅವರನ್ನು ಹತ್ಯೆ ಮಾಡಿದ್ದರು.ಈ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಯಿಂದ ನಡೆಯುತ್ತಿದೆ ಮತ್ತು ಬಾಂಬೆ ಹೈಕೋರ್ಟ್ ಇದಕ್ಕೆ ಮೇಲ್ವಿಚಾರಣೆ ವಹಿಸಿದೆ. ಪ್ರಕರಣದ ಕುರಿತಾಗಿ ಹೈಕೋರ್ಟ್ ಗಡುವು ನೀಡಿದ್ದರು ಸಹಿತ ಇದರಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎನ್ನಲಾಗಿದೆ.  


2013 ರಲ್ಲಿ ದಾಬೋಲ್ಕರ್ ಅವರ ಕೊಲೆಯಾದ ನಂತರ, ಧಾರವಾಡದಲ್ಲಿ ಎಂ.ಎಂ. ಕಲ್ಬರ್ಗಿ ಯವರನ್ನು ಹತ್ಯೆ ಮಾಡಲಾಗಿತ್ತು  ಎರಡು ಕೊಲೆಯನ್ನು ಒಂದೇ ಶಸ್ತ್ರಾಸ್ತ್ರವನ್ನು ಬಳಸಿಕೊಂಡು  ಮಾಡಲಾಗಿದೆ ಎಂದು ತನಿಖೆಯಲ್ಲಿ  ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು.