ನರೇಂದ್ರ ಮೋದಿ 180 ಡಿಗ್ರಿ ಪಿಎಂ- ಅಖಿಲೇಶ್ ಯಾದವ್ ವ್ಯಂಗ್ಯ
ನರೇಂದ್ರ ಮೋದಿ 180 ಡಿಗ್ರಿ ಪಿಎಂ ಇದ್ದ ಹಾಗೆ,ಆದ್ದರಿಂದ ತಾವು ಹೇಳಿದ್ದೆಲ್ಲಕ್ಕೂ ಅವರು ವಿರುದ್ದವಾಗಿ ಮಾಡುತ್ತಾರೆ ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ.
ನವದೆಹಲಿ: ನರೇಂದ್ರ ಮೋದಿ 180 ಡಿಗ್ರಿ ಪಿಎಂ ಇದ್ದ ಹಾಗೆ,ಆದ್ದರಿಂದ ತಾವು ಹೇಳಿದ್ದೆಲ್ಲಕ್ಕೂ ಅವರು ವಿರುದ್ದವಾಗಿ ಮಾಡುತ್ತಾರೆ ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ.
ಅವರ(ಬಿಜೆಪಿ) ಅಂಕಗಣಿತವು ತಪ್ಪಾಗಿದೆ. ಅವರು ಸರ್ಕಾರವನ್ನು ರಚಿಸಲಾಗುವುದಿಲ್ಲ ಎಂದು ಅವರಿಗೆ ತಿಳಿದಿದೆ. ಬಿಜೆಪಿ ಬೇರೆ ಏನೂ ಕಾಣುತ್ತಿಲ್ಲ. ಅವರು ಅಭಿವೃದ್ದಿ ಬಗ್ಗೆ ಮಾತನಾಡುವುದಾಗಲಿ ಅಥವಾ ರೈತರ ಆದಾಯದ ಬಗ್ಗೆ ಮಾತನಾಡುವುದಾಗಲಿ ಮಾಡುತ್ತಿಲ್ಲ.ಅವರು ಜನರನ್ನು ತಪ್ಪು ದಾರಿಗೆ ಎಳೆಯುವುದನ್ನು ಮಾಡುತ್ತಿದ್ದಾರೆ. ಮುಂದೆ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮುಂದೆ ಯಾರು ಪ್ರಧಾನಿಯಾಗಲಿದ್ದಾರೆ ಎನ್ನುವುದನ್ನು ನಿರ್ಧರಿಸುತ್ತದೆ ಎಂದು ಅಖಿಲೇಶ್ ಯಾದವ್ ತಿಳಿಸಿದರು.
ನರೇಂದ್ರ ಮೋದಿ 180 ಡಿಗ್ರಿ ಪಿಎಂ ಇದ್ದ ಹಾಗೆ, ಆದ್ದರಿಂದ ತಾವು ಹೇಳಿದ್ದೆಲ್ಲಕ್ಕೂ ಅವರು ವಿರುದ್ದವಾಗಿ ಮಾಡುತ್ತಾರೆ. ಅವರು ಕೇವಲ ಶೇ 1ರಷ್ಟು ಜನಸಂಖ್ಯೆಗೆ ಪ್ರಧಾನಿಯಾಗಿದ್ದಾರೆ.ಆದ್ದರಿಂದ ಮೋದಿಗೆ ಯಾರು ಸಾಮಾಜಿಕ ನ್ಯಾಯದ ಪರವಾಗಿ ಇದ್ದು ಪರಿವರ್ತನೆಯತ್ತ ಕೊಂಡೊಯ್ಯುತ್ತಾರೋ ಅವರಿಂದ ತೊಂದರೆ ಇದೆ ಎಂದು ಅವರು ಹೇಳಿದರು.
ಬಿಜೆಪಿಗೆ ಮುಂದೆ ತಾವು ಸರ್ಕಾರ ರಚಿಸುವುದಿಲ್ಲವೆಂದು ತಿಳಿದಿದೆ. ಈ ಹಿನ್ನಲೆಯಲ್ಲಿ ಈಗ ಐಟಿ, ಸಿಬಿಐ, ಇಡಿ ಸಹಾಯವನ್ನು ತೆಗೆದುಕೊಳ್ಳುತ್ತಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ಸಿಬಿಐ ದಾಳಿ ಇಲ್ಲ. ನೀತಿ ಸಂಹಿತೆ ಇದ್ದಾಗಲೂ ಕೂಡ ಜನರನ್ನು ಹೆದರಿಸುತ್ತಿರುವ ಮೊದಲ ಸರ್ಕಾರದ ಮೋದಿಯವರದ್ದು ಎಂದು ಅಖಿಲೇಶ್ ಟೀಕಾ ಪ್ರಹಾರ ನಡೆಸಿದರು.