ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೊಘಲ್ ದೊರೆ ಔರಂಗಜೇಬ್ ರವರ ಆಧುನಿಕ ಅವತಾರವೆಂದು ಹಿರಿಯ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಕಿಡಿಕಾರಿದ್ದಾರೆ. ವಾರಣಾಸಿಯಲ್ಲಿನ ನೂರಾರು ಪುರಾತನ ದೇವಾಲಯಗಳು ಪ್ರಧಾನಿ ಮೋದಿ ಆದೇಶದಿಂದಾಗಿ ನಾಶಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ವಾರಣಾಸಿಯಲ್ಲಿ ಕಾಶಿ ವಿಶ್ವನಾಥ್ ಕಾರಿಡಾರ್ ಯೋಜನೆ ನಿಟ್ಟಿನಲ್ಲಿ ಹಲವಾರು ಸಣ್ಣ ಪ್ರಮಾಣದ ದೇವಾಲಯಗಳನ್ನು ನಾಶಪಡಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರ ನಡೆಗೆ ಹಿರಿಯ ನಾಯಕ ಸಂಜಯ್ ನಿರುಪಮ್ ಹರಿಹಾಯ್ದಿದ್ದಾರೆ.


"ಔರಂಗಜೇಬ್ ಅವರಿಗೆ ಏನೇನು ಮಾಡಲು ಸಾಧ್ಯವಾಗಿಲ್ಲವು ಅದೆಲ್ಲವನ್ನು ಇಂದು ಮೋದಿ ಮಾಡುತ್ತಿದ್ದಾರೆ.ಒಂದು ಕಾಲದಲ್ಲಿ, ಔರಂಗಜೇಬ್ ನಮ್ಮ ದೇವಸ್ಥಾನಗಳನ್ನು ನಾಶಮಾಡಲು ಕಾಶಿ ಬೀದಿಗಳಿಗೆ ಬಂದರು, ಆಗ ನಿವಾಸಿಗಳು ತಮ್ಮ ದೇವಾಲಯಗಳನ್ನು ಉಳಿಸಿಕೊಂಡು ಪ್ರತಿಭಟಿಸಿದರು. ವಾರಾಣಸಿ ಬೀದಿಗಳಲ್ಲಿ ಇದೇ ತರಹದ ಚಳುವಳಿ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.


ಈ ಹಿಂದೆ 2014 ರಲ್ಲಿ ವಾರಣಾಸಿಯಿಂದ ಗೆಲುವು ಸಾಧಿಸುವುದರ ಮೂಲಕ ಪ್ರಧಾನಿ ಹುದ್ದೆಗೆ ಏರಿದ್ದ ಮೋದಿ, ಈಗ ಎರಡೇ ಬಾರಿಗೆ ಈ  ಕ್ಷೇತ್ರದಿಂದ ಆಯ್ಕೆಯನ್ನು ಬಯಸುತ್ತಿದ್ದಾರೆ.