ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಪ್ರಧಾನಿ ಮೋದಿಯವ್ರನ್ನ ಕಂಡು ಪುಳಕಿತರಾದ ಬಿಜೆಪಿ ಕಾರ್ಯಕರ್ತರೊಬ್ಬರು ವೇದಿಕೆ ಏರಿ ಮೋದಿಯವರ ಕಾಲಿಗೇರಗಿ ನಮಸ್ಕರಿಸಲು ಮುಂದಾಗಿದ್ದಾರೆ. ಪ್ರತಿಯಾಗಿ ಪ್ರಧಾನಿ ಮೋದಿ ಕಾರ್ಯಕರ್ತನ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಂಸ್ಕಾರ ಎಂದು ಬಣ್ಣಿಸಿದೆ.


COMMERCIAL BREAK
SCROLL TO CONTINUE READING

ಎಎಪಿ ಶಾಸಕ ಸೋಮನಾಥ ಭಾರತಿ ಮೇಲಿನ 2 ವರ್ಷದ ಜೈಲು ಶಿಕ್ಷೆ ರದ್ದು


ಪ್ರಧಾನಿ ಮೋದಿ(PM Narendra Modi)ಯವ್ರು ಬಂಗಾಳದ ಕಾಂತಿಯಲ್ಲಿ ಚುನಾವಣಾ ರ್ಯಾಲಿಗಾಗಿ ಆಗಮಿಸಿದ್ದಾರೆ. ಎಲ್ಲಾ ಸ್ಥಳೀಯ ನಾಯಕರೊಂದಿಗೆ ವೇದಿಕೆಯನ್ನ ಹಂಚಿಕೊಂಡಿದ್ದು, ಅಲ್ಲಿದ್ದ ಕಾರ್ಯಕರ್ತರೊಬ್ಬರು ಪ್ರಧಾನಿ ಪಾದಗಳನ್ನ ಮುಟ್ಟಲು ತೆರಳಿದ್ದು, ಆಗ ಮೋದಿಯು ಕಾರ್ಯಕರ್ತನ ಪಾದಗಳನ್ನ ಮುಟ್ಟಿ ನಮಸ್ಕರಿಸಿದ್ದಾರೆ.


"ಎಐಡಿಎಂಕೆ ಪಕ್ಷಕ್ಕೆ ವಿ.ಕೆ.ಶಶಿಕಲಾ ಅವರ ಮರು ಸೇರ್ಪಡೆಯನ್ನು ಪರಿಗಣಿಸುತ್ತೇವೆ"


ಬಿಜೆಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು, 'ಬಿಜೆಪಿ(BJP) ಒಂದು ಸುಸಂಸ್ಕೃತ ಸಂಘಟನೆಯಾಗಿದ್ದು, ಅಲ್ಲಿ ಕಾರ್ಯಕರ್ತರು ಪರಸ್ಪರ ಸಮಾನ ಮೌಲ್ಯಗಳನ್ನ ಹೊಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ರ್ಯಾಲಿಯ ಸಂದರ್ಭದಲ್ಲಿ ವೇದಿಕೆಯಲ್ಲಿ, ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ಪಾದ ಸ್ಪರ್ಶಕ್ಕೆ ಬಂದಾಗ, ಪಿಎಂ ನರೇಂದ್ರ ಮೋದಿಯವರು ಸಹ ಕಾರ್ಯಕರ್ತರ ಪಾದಗಳನ್ನ ಮುಟ್ಟುವ ಮೂಲಕ ಸ್ವಾಗತಿಸಿದರು.


ಈ ವಾರವೇ ಮುಗಿಸಿಕೊಳ್ಳಿ ಬ್ಯಾಂಕ್ ಕೆಲಸ : ಮುಂದಿಯ ವಾರ ಬ್ಯಾಂಕ್ ತೆರೆದಿರುವುದು ಮೂರೇ ದಿನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.